-->
ಅಕ್ಕನ ಪತ್ರಕ್ಕೆ ಮಕ್ಕಳ ಉತ್ತರ - 3 ಭಾಗ-2

ಅಕ್ಕನ ಪತ್ರಕ್ಕೆ ಮಕ್ಕಳ ಉತ್ತರ - 3 ಭಾಗ-2

ಅಕ್ಕನ ಪತ್ರಕ್ಕೆ 
ಮಕ್ಕಳ ಉತ್ತರ - 3
ಭಾಗ-2

ಮಕ್ಕಳ ಜಗಲಿಯಲ್ಲಿ 
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ -3
ಸಂಚಿಕೆಯಲ್ಲಿ ಪ್ರಕಟವಾದ ಪತ್ರಕ್ಕೆ ಜಗಲಿಯ ಮಕ್ಕಳೆಲ್ಲಾ ಬಹಳ ಪ್ರೀತಿಯಿಂದ ಸ್ಪಂದಿಸಿದ್ದಾರೆ. ತಮ್ಮ ಗದ್ದೆಯ ಜೊತೆಗಿನ ಬದುಕ ಸಿಹಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ಪೋಷಕರು ತಮ್ಮ ಮಕ್ಕಳನ್ನು ಗದ್ದೆಯ ಬಳಿಗೆ ಕರೆದುಕೊಂಡು ಹೋಗಿರುವುದು .... ನೆಲದ ಪ್ರೀತಿಯನ್ನು ಕಲಿಸಿರುವುದು .... ಹಸಿರಿನ ... ಉಸಿರಿನ .... ಪಾಠವಾಗಿರುವುದು .... ಮುಂದಿನ ತಲೆಮಾರಿಗೆ ನೆಲದ ಸಂಸ್ಕೃತಿಯನ್ನು ಕೊಂಡೊಯ್ಯಲು ಸಹಕಾರಿಯಾದೀತು.....!!

ಪತ್ರ - 1 ಲಹರಿ ಜಿ.ಕೆ. 7ನೇ ತರಗತಿ
ಮಕ್ಕಳ ಜಗಲಿ--ಅಕ್ಕನ ಪತ್ರ - 3
ಅಕ್ಕನ ಪತ್ರಕ್ಕೆ ಲಹರಿ ಬರೆಯುವ ಉತ್ತರ:
         ಪ್ರೀತಿಯ ಅಕ್ಕ, ನಿಮ್ಮ ಪತ್ರ ಓದಿ ನಿಜವಾಗಿಯೂ ನನ್ನ ಅಮ್ಮ , ಅಜ್ಜಿಯವರೆಲ್ಲ ಎಷ್ಟು ಪುಣ್ಯವಂತರು ಎಂದು ಅಂದುಕೊಂಡೆ. ಆ ಹಸಿರ ಸೊಬಗನ್ನು ಸವಿಯುತ್ತಾ.... ಗದ್ದೆ ಬದಿಯಲ್ಲಿ ಆಟವಾಡುತ್ತಾ ಶಾಲೆಗೆ ಹೋಗುತ್ತಿದ್ದ ದಿನಗಳನ್ನು ನನ್ನ ಅಮ್ಮ ಈಗಲೂ ಮೆಲುಕು ಹಾಕುತ್ತಿರುತ್ತಾರೆ. ಅಂದು ಇದ್ದಂತಹ ಹಸಿರು ಗದ್ದೆಗಳೆಲ್ಲಾ ಈಗಲೂ ಇರುತ್ತಿದ್ದರೆ ನನ್ನ ಎಷ್ಟೊಂದು ಅನುಭವಗಳನ್ನು ಬರೆಯಬಹುದಿತ್ತು..... ಆದರೂ ನಮ್ಮ ಸುತ್ತಲೂ ಮರಗಿಡಗಳನ್ನು ನಮ್ಮ ಅಪ್ಪ ಅಮ್ಮ ನೆಟ್ಟಿರುವುದರಿಂದ ಸ್ವಲ್ಪ ಸಮಾಧಾನ. ನಾನೂ ಅಜ್ಜಿ ಮನೆಗೆ ಹೋಗುವ ದಾರಿಯಲ್ಲಿ ಗದ್ದೆಯ ಹಸಿರು ಸೊಬಗನ್ನು ಕಂಡು ಮೈಮರೆತಿದ್ದೇನೆ. ಈಗಲೂ ಗದ್ದೆಯ ಕೆಸರಲ್ಲಿ ಆಗುವ 'ಆಟಿಡೊಂಜಿ ದಿನ'ದ ಗಮ್ಮತ್ತು ನಮ್ಮನ್ನು ಅಮ್ಮ ಹೇಳುವ ಅವರ ಕಥೆಯೊಳಗೆ ನನ್ನನ್ನು ಕೊಂಡೊಯ್ಯುತ್ತದೆ.... ಹಾಗೂ          ನನ್ನ ಅಮ್ಮ ಮತ್ತು ದೊಡ್ಡಮ್ಮ- ಲಹರಿ ಜಿ.ಕೆ
ಅವರು ತೆಗೆದ ಗದ್ದೆಯ ಫೋಟೋವೊಂದನ್ನು ನಿಮ್ಮ ಪ್ರೀತಿಯ ಪತ್ರವು ಮತ್ತೆ ಮತ್ತೆ ನೋಡುವಂತೆ ಮಾಡಿದೆ. ನಿಮಗೆ ಧನ್ಯವಾದಗಳು ಅಕ್ಕಾ....
 ........................ ಲಹರಿ ಜಿ.ಕೆ. 7ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್ ತುಂಬೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
***************************************


ಪತ್ರ - 2    ಪ್ರಣವ್ ದೇವ್ 1ನೇ ತರಗತಿ
ಪ್ರೀತಿಯ ಅಕ್ಕ,
ನಿಮ್ಮ ಪತ್ರ ಓದಿದ ನಂತರ ಅಮ್ಮನ ಜೊತೆ ಉಡುಪಿಯ ಅಜ್ಜನ ಮನೆಗೆ ಹೋದೆನು.....
ಹತ್ತಿರದಲ್ಲಿ ನ ಗದ್ದೆ , ಆಹಾ! ಎಷ್ಟು ಚೆಂದ... ಒಂದೇ ಎತ್ತರದ ಗಿಡ, ಕಾಲನ್ನು ಮೆಲ್ಲಗೆ ಗದ್ದೆಯಲ್ಲಿ ಇಟ್ಟೆನು.... ಕಪ್ಪೆ ಹಾರಿತು, ಹಾವು ಸರಸರನೆ ಹೋಯಿತು, ಅಮ್ಮನ ಕೈ ಗಟ್ಟಿಯಾಗಿ ಹಿಡಿದೆನು , ತಂಪಾದ ನೀರು, ನಾನು ಸಂತೋಷಪಟ್ಟೆ, ಅಮ್ಮ ವಿವರಿಸಿದರು,
ಧನ್ಯವಾದಗಳು ಅಕ್ಕ,
                              ವಂದನೆಗಳು.
........................ಪ್ರಣವ್ ದೇವ್ 1ನೇ ತರಗತಿ 
ಲೇಡಿ ಹಿಲ್ ಪ್ರೈಮರಿ ಶಾಲೆ
ಮಂಗಳೂರು - ದ.ಕ.ಜಿಲ್ಲೆ
****************************************


ಪತ್ರ- 3   ಶಿವರಾಜ್ 5 ನೇ ತರಗತಿ       
ಪ್ರೀತಿಯ ಅಕ್ಕ, 
ನಿಮ್ಮ ಪತ್ರದಲ್ಲಿ ಭತ್ತದ ಕೃಷಿಯ ಬಗ್ಗೆ ಓದಿ, ನಾನು ಕೂಡ ಗದ್ದೆಗೆ ಇಳಿದು ನಾಟಿ ಮಾಡಿದ್ದೇನೆ. ನಮ್ಮ ಮನೆಯಲ್ಲಿ ಅನೇಕ ಬಾರಿ ಹೊಲಗದ್ದೆಯ ಕೆಲಸಗಳಲ್ಲಿ ಮನೆಯವರೊಡನೆ ಹೋಗುತ್ತಿದ್ದೆ. ಆದರೆ ಹಿಂದಿನ ಕಾಲದಲ್ಲಿ ಭತ್ತದ ಕೃಷಿ ಮಾಡುತ್ತಿದ್ದ ವಿಧಾನ ,ನಾಟಿ ಮಾಡುವ ಸಂದರ್ಭದಲ್ಲಿ ಹಾಡುತ್ತಿದ್ದ ಹಾಡುಗಳು ಇತ್ಯಾದಿಗಳು ನನಗೆ ತಿಳಿದಿರಲಿಲ್ಲ. ನಿಮ್ಮ ಪತ್ರವನ್ನು ಓದಿದ ನಂತರ ಅವುಗಳನ್ನು ಹಿರಿಯರಿಂದ ಕೇಳಿ ತಿಳಿದುಕೊಂಡು. ಗದ್ದೆಯ ಕೆಲಸ ಎಷ್ಟು ಖುಷಿ ನೀಡಿದೆ ಎಂದರೆ; ಕೊಯಿಲು ಮಾಡುವ ಸಂದರ್ಭದಲ್ಲಿಯೂ ಮತ್ತೆ ಮನೆಯವರಿಗೆ ಸಹಾಯಮಾಡುವೆ.                                              ಇಂತಿ ನಿಮ್ಮ ,        .............................. ಶಿವರಾಜ್ 5 ನೇ ತರಗತಿ       ಸ.ಕಿ.ಪ್ರಾ ಶಾಲೆ, ಹನ್ನೆರಡು ಕವಲು
ಆರಂಬೋಡಿ ಗ್ರಾಮ , ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
***************************************


ಪತ್ರ - 4   ಲಿಖಿತ 1ನೇ ತರಗತಿ,   
 ಪ್ರೀತಿಯ ಅಕ್ಕ ,
ನಾನು ಲಿಖಿತ , ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದೇನೆ. ನಾನು ಕೂಡ ಅಣ್ಣನ ಜೊತೆಗೆ ಕೆಲಸ ಮಾಡಿದೆ. ಎಲ್ಲರೂ ಒಟ್ಟಿಗೆ ಕೆಲಸ ಮಾಡುವುದು ಬಹಳ ಇಷ್ಟವಾಯಿತು .
               ವಂದನೆಗಳು , 
....................................ಲಿಖಿತ 1ನೇ ತರಗತಿ 
ಸ.ಕಿ.ಪ್ರಾ ಶಾಲೆ, ಹನ್ನೆರಡು ಕವಲು
ಆರಂಬೋಡಿ ಗ್ರಾಮ , ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
***************************************


 ಪತ್ರ - 5    ಶಿಲ್ಪ .ಪಿ. 7 ನೇ ತರಗತಿ
ಪ್ರೀತಿಯ ನನ್ನ ಅಕ್ಕ...
        7 ನೇ ತರಗತಿಯ ಶಿಲ್ಪ ನಿಮಗೆ ಮಾಡುವ ನಮಸ್ಕಾರ. ನಿಮ್ಮ ಪತ್ರ - 3 ಓದಿದೆ. ನಾವು ನಿತ್ಯ ಜೀವನದಲ್ಲಿ ತಿನ್ನುವ ಅನ್ನ ಬೆಳೆಯುವ ಭತ್ತದ ಗದ್ದೆಯ ಬಗ್ಗೆ ಬರೆದಿದ್ದೀರಿ. ನನಗೆ ಅದನ್ನು ಓದಿ ಕೆಲವು ವರ್ಷಗಳ ಹಿಂದೆ ನಮ್ಮ ಮನೆಯ ಗದ್ದೆಯಲ್ಲಿ ನಮ್ಮ ತಂದೆ ಭತ್ತದ ಬೆಳೆ ಬೆಳೆದಿದ್ದು ನೆನಪಾಯಿತು. ಆಗ ಭತ್ತದ ಗದ್ದೆಯಲ್ಲಿ ಬೆಳೆ ಚೆನ್ನಾಗಿ ಬಂದಿತ್ತು. ಮನೆಯವರು ಯಾವಾಗಲೂ ಹೋಗಿ ನೋಡುತ್ತಿದ್ದೆವು. ಒಂದು ಸಲ ರಾತ್ರಿ ಜೋರಾಗಿ ಮಳೆ ಬಂದಿತು. ಆ ಮಳೆಯಲ್ಲಿ ಅರ್ಧವಾಸಿ ಬೆಳೆ ನೀರಿನಲ್ಲಿ ಕೊಚ್ಚಿ ಹೋಯಿತು. ನಮಗೆ ತುಂಬಾ ಬೇಸರವಾಯಿತು. ಉಳಿದ ಬೆಳೆ ಕೆಲವು ಸಮಯದಲ್ಲಿ ಚೆನ್ನಾಗಿ ಬೆಳೆದದ್ದು ನೋಡಿ ಸ್ವಲ್ಪ ಸಮಾಧಾನವಾಯಿತು. ನಂತರ ನಾವು ಅದನ್ನು ತೆಗೆದು ತೆನೆಯಿಂದ ಭತ್ತವನ್ನು ಬೇರ್ಪಡಿಸಿದೆವು. ಅದನ್ನು ಮಿಲ್ಲಿಗೆ ಕೊಟ್ಟು ಅಕ್ಕಿ ಮಾಡಿ ತಂದೆವು. ನಾವೇ ಬೆಳೆದ ಅಕ್ಕಿಯಿಂದ ಅನ್ನ ಮಾಡಿ ಉಣ್ಣುವುದು ಖುಷಿಯೋ ಖುಷಿ.
           ವಂದನೆಗಳು.
............................. ಶಿಲ್ಪ .ಪಿ. 7 ನೇ ತರಗತಿ ಉ.ಸ.ಮಾ.ಹಿ.ಪ್ರಾ.ಶಾಲೆ.ಚೆನ್ನೈತೋಡಿ. ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************


ಪತ್ರ - 6   ಧನ್ಯಶ್ರೀ. 5 ನೇ ತರಗತಿ. 
ಪ್ರೀತಿಯ ಅಕ್ಕ,
                  ಗದ್ದೆಗಳು ಇಲ್ಲದಿದ್ದರೆ ನಮಗೆ ಆಹಾರ ಇಲ್ಲ.. ಅಲ್ವೇ..? ನಮಗೆ ಉಳುವ ಗದ್ದೆಯಿಲ್ಲ.. ಗದ್ದೆ ಕೆಲಸದ ಬಗ್ಗೆ ನೋಡಿ ಗೊತ್ತಿಲ್ಲ ಅಕ್ಕ. ಪತ್ರ ಓದಿ ಗದ್ದೆಗಳ ಬಗ್ಗೆ ತಿಳಿಯುವ ಕುತೂಹಲವಾಯಿತು. ಅಮ್ಮನಲ್ಲಿ ಕೇಳಿದಾಗ ಅಮ್ಮ ಭತ್ತ ಬೆಳೆಯುವ ಹಂತಗಳನ್ನೆಲ್ಲ ಹೇಳಿದರು. ಉಳುಮೆ ಮಾಡುವ ಮೊದಲು ಮಣ್ಣನ್ನು ಹದಗೊಳಿಸಬೇಕು. ಹದಗೊಳಿಸಿದ ನಂತರ ಉಳುಮೆ ಮಾಡಬೇಕು. ಉಳುಮೆ ಮಾಡಿದ ನಂತರ ಬಿತ್ತನೆ ಮಾಡಬೇಕು. ಬಿತ್ತನೆ ಮಾಡಿದ ನಂತರ ಬೆಳೆಗಳಿಗೆ ಗೊಬ್ಬರ ನೀರು ಒದಗಿಸಬೇಕು. ನಂತರ ಬೆಳೆಗಳ ನಡುವೆ ಬೆಳೆದುಕೊಂಡ ಕಳೆಗಳನ್ನು ಕೀಳಬೇಕು. ಬೆಳೆಗಳು ಸರಿಯಾಗಿ ಬೆಳೆದ ಮೇಲೆ ಕಟಾವು ಮಾಡಬೇಕು ಎಂದು ಅಮ್ಮನಿಂದ ತಿಳಿದೆ. ಉಳುಮೆ ಮಾಡಲು ಸಾಂಪ್ರದಾಯಿಕ ಕೂರಿಗೆ, ಯಾಂತ್ರಿಕ ಕೂರಿಗೆಗಳಿವೆ. ನೀರಾವರಿಯಲ್ಲಿ ತುಂತುರು, ಹನಿ ನೀರಾವರಿ ಇದೆ. ಗೊಬ್ಬರಗಳಲ್ಲಿ ಸಾವಯವ, ರಾಸಾಯನಿಕ ಗೊಬ್ಬರಗಳಿವೆ. ಹೀಗೆ ಕೆಲವು ವಿಷಯ ಮೊದಲು ಪಾಠದಿಂದ ತಿಳಿದುಕೊಂಡಿದ್ದೆ. ಈ ಪತ್ರ ನನಗೆ ಇನ್ನಷ್ಟು ವಿಷಯ ತಿಳಿಯುವ ಆಸಕ್ತಿ ಮೂಡಿಸಿತು. 
ಧನ್ಯವಾದಗಳು ಅಕ್ಕಾ..
.............................. ಧನ್ಯಶ್ರೀ. 5 ನೇ ತರಗತಿ. ಉ.ಸ.ಮಾ.ಹಿ.ಪ್ರಾ.ಶಾಲೆ. ಚೆನ್ನೈತೋಡಿ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
***************************************


ಪತ್ರ - 7 ಸೃಜನ್ 6 ನೇ ತರಗತಿ
ಪ್ರೀತಿಯ ಅಕ್ಕ...
        ನನಗೆ ಗದ್ದೆ ನೋಡಲು ತುಂಬ ಇಷ್ಟ. ಆದರೆ ನಮ್ಮ ಮನೆಯಲ್ಲಿ ಗದ್ದೆ ಇಲ್ಲ. ತೆಂಗಿನಮರ, ಅಡಿಕೆಮರ, ಬಾಳೆಗಿಡ ತುಂಬಾ ನೆಟ್ಟಿದ್ದೇವೆ. ನಾನು ಕೂಡ ಎರಡು ಅಡಿಕೆ ಸಸಿ ನೆಟ್ಟಿದ್ದೇನೆ. ನಮ್ಮ ಮನೆಯ ಸುತ್ತಮುತ್ತಲೂ ಹೂವಿನ ಗಿಡಗಳಿವೆ. ನನಗೆ ಗುಲಾಬಿ, ಮಲ್ಲಿಗೆ, ದಾಸವಾಳ ಗಿಡಗಳು ತುಂಬಾ ಇಷ್ಟ. ನಾವು ಮನೆಯಲ್ಲಿ ತುಂಬಾ ಮಂದಿ ಇದ್ದೇವೆ. ಒಟ್ಟು ಹನ್ನೊಂದು ಮಂದಿ ಇದ್ದೇವೆ. ನನ್ನ ತಮ್ಮ ಆದಿತ್ಯ ಮೊನ್ನೆಯಷ್ಟೇ ಪಪ್ಪಾಯದ ಗಿಡ ನೆಟ್ಟಿದ್ದಾನೆ. ನನ್ನ ಅಜ್ಜನಿಗೆ ಗದ್ದೆ, ತೋಟ, ಹೂಗಳು ಎಂದರೆ ತುಂಬಾ ಇಷ್ಟ. ನಿಮ್ಮ ಪತ್ರವನ್ನು ನಾನು ಅಜ್ಜನಿಗೆ ಓದಿ ಹೇಳಿದೆ. ಫೋಟೋ ಎಲ್ಲ ಮನೆಮಂದಿಗೆ ತೋರಿಸಿದೆ. ಎಲ್ಲರಿಗೂ ಖುಷಿಯಾಯಿತು. 
               ವಂದನೆಗಳು
....................................ಸೃಜನ್ 6 ನೇ ತರಗತಿ. 
ಉ.ಸ.ಮಾ.ಹಿ.ಪ್ರಾ. ಶಾಲೆ. ಚೆನ್ನೈತೋಡಿ. 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************


ಪತ್ರ - 8 ಅನನ್ಯ 6ನೇ ತರಗತಿ
ಪ್ರೀತಿಯ ಅಕ್ಕ
             ಅನನ್ಯ ಮಾಡುವ ವಂದನೆಗಳು. ನಾವು ಈಗ ಕೆಲವು ವರ್ಷಗಳಿಂದ ಹೊಸ ಮನೆಯಲ್ಲಿ ಇದ್ದೇವೆ. ನಾವು ಈಗ ಇರುವ ಹೊಸಮನೆಯ ಬಳಿ ಗದ್ದೆ ಇಲ್ಲ. ಆದರೆ ನಾವು ಮೊದಲು ಇದ್ದ ಹಳೆಮನೆಯ ಮುಂದೆ ಗದ್ದೆ ಇತ್ತು. ಅಲ್ಲಿ ಭತ್ತ ನಾಟಿ ಮಾಡುವಾಗ ಮನೆಯ ಚಿಕ್ಕ ಮಕ್ಕಳೆಲ್ಲಾ ಸೇರಿ ನೋಡಲು ಹೋಗುತ್ತಿದ್ದೆವು. ಗದ್ದೆಯ ಬದಿ ಹಸಿರು ನೋಡುತ್ತ ನಡೆಯುವುದು ಎಂದರೆ ತುಂಬಾ ಖುಷಿ. ಗದ್ದೆ ತುಂಬ ಭತ್ತದ ಪೈರು ಬೆಳೆದು ನಿಂತಾಗ ನೋಡುವುದು ತುಂಬಾ ಚಂದ. 
ಥ್ಯಾಂಕ್ಸ್ ಅಕ್ಕಾ..
ನಿಮ್ಮ ಪತ್ರ ಓದಿ ನನಗೆ ಹಳೆಮನೆಯ ಗದ್ದೆ ಎಲ್ಲಾ ನೆನಪಾಯಿತು.
..................................ಅನನ್ಯ 6ನೇ ತರಗತಿ
ಉ.ಸ.ಮಾ.ಹಿ.ಪ್ರಾ. ಶಾಲೆ. ಚೆನ್ನೈತೋಡಿ. ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
***************************************

ಪತ್ರ : 8 ಶ್ರಾನ್ವಿ ಶೆಟ್ಟಿ 8ನೇ ತರಗತಿ 
    ಸಂಜೆ ಅಜ್ಜನೊಂದಿಗೆ ಗದ್ದೆಗೆ ಹೋಗುವಾಗ ತೋಟದಲ್ಲಿ ಮುಗಿಲೆತ್ತರಕ್ಕೆ ಬೆಳೆದಿರುವ ಕಂಗಿನ ತೆಂಗಿನ ಮರಗಳು, ಹಕ್ಕಿಗಳ ಚಿಲಿಪಿಲಿ ತಂಪಾದ ಗಾಳಿ ಮನಸ್ಸಿಗೆ ಖುಷಿ ನೀಡಿತು. ಗದ್ದೆಗೆ ಇಳಿದಾಗ ಗದ್ದೆಯ ಮಣ್ಣು ನನ್ನ ಕಾಲುಗಳನ್ನು ಮಣ್ಣಿನ ಒಳಗೆ ಎಳೆಯುತ್ತಿತ್ತು, ಒಂದು ಕಾಲನ್ನು ಎತ್ತಿದಾಗ ಇನ್ನೊಂದು ಕಾಲು ಮಣ್ಣಿನ ಒಳಗೆ ಒಳಗೆ ಎಳೆಯುತ್ತಿತ್ತು. ಗದ್ದೆಯಲ್ಲಿ ಚಪ್ಪೆನೀರಿನ ಚಿಪ್ಪನ್ನು ನೀರುಕಾಗೆ ಕೊಕ್ಕಿನಿಂದ ಕುಕ್ಕಿ ತಿನ್ನುತಿತ್ತು. ನಾನು ಆ ಕಾಗೆಗಳನ್ನು ಓಡಿಸಿದೆ. ಗದ್ದೆಯ ಬದಿಯಲ್ಲಿ ದೊಡ್ಡ ಮಾವಿನ ಮರವಿದೆ , ಅದರಲ್ಲಿ ತುಂಬಾ ಪಕ್ಷಿಗಳು ವಾಸವಾಗಿದೆ, ಸಂಜೆಯ ಹೊತ್ತು ಪಕ್ಷಿಗಳ ಕಲರವ ಕೇಳಲು ಕಿವಿಗೆ ಇಂಪಾಗಿದೆ. ಗದ್ದೆಯ ಬದಿಯಲ್ಲಿ ಸಣ್ಣ ತೋಡು ಇದೆ, ಅದರಲ್ಲಿ ಚಿಕ್ಕ ಚಿಕ್ಕ ಮೀನುಗಳಿವೆ, ತೋಡಿಗೆ ಇಳಿದಾಗ ಮೀನು ಕಾಲಿಗೆ ತಾಗಿ ಕಚಗುಳಿ ಇಟ್ಟಂತಾಯಿತು. ಒಂದು ಮೀನನ್ನು ಬಟ್ಟೆಯ ಸಹಾಯದಿಂದ ಹಿಡಿದೆ, ಅದಕ್ಕೆ ಉಸಿರಾಡಲು ಕಷ್ಟವಾದಾಗ ವಾಪಸ್ ನೀರಿಗೆ ಬಿಟ್ಟೆ. ಪಕ್ಕದಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆಸಿದ್ದೇವೆ, ಅಲ್ಲಿಗೆ ಸಂಜೆಯ ಹೊತ್ತಿಗೆ ನವಿಲುಗಳು ಬರುತ್ತದೆ, ನವಿಲುಗಳು ರೆಕ್ಕೆ ಬಿಚ್ಚಿ ಕುಣಿಯುವುದು ನೋಡಲು ಕಣ್ಣಿಗೆ ಹಬ್ಬ, ನವಿಲುಗಳು ಕುಣಿಯುವಾಗ ಬಿದ್ದ ನವಿಲು ಗರಿಗಳನ್ನು ಸಂಗ್ರಹಿಸಿ ಇಟ್ಟಿದ್ದೇನೆ, ಸುತ್ತಲೂ ಇರುವ ಹಸಿರು ಮನಸ್ಸಿಗೆ ತುಂಬಾ ಸಂತೋಷ ಕೊಡುತ್ತದೆ, ದಿನಾಲು ಗದ್ದೆಯ ಬಳಿ ಹೋಗಬೇಕೆಂದು ಮನಸ್ಸು ಹಾತೊರೆಯುತ್ತದೆ.
 ............................ ಶ್ರಾನ್ವಿ ಶೆಟ್ಟಿ 8ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗುಡ್ಡೆಯಂಗಡಿ ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
****************************************


Ads on article

Advertise in articles 1

advertising articles 2

Advertise under the article