ಕವನಗಳು
Saturday, August 7, 2021
Edit
ಲಿಖಿತ ಪುಣಚ 5 ನೇ ತರಗತಿ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕೃಷ್ಣಗಿರಿ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಮುದ್ದಿನ ಬೆಕ್ಕು
-----------------------------
ಓ ನನ್ನ ಮುದ್ದಿನ ಬೆಕ್ಕೇ
ನಿನಗೆ ಎಷ್ಟು ಸೊಕ್ಕೇ...
ನಾ ನಿನ್ನ ಜೊತೆ ಆಡಲು ಬರುವೆ
ಆದರೆ ನೀ ನನಗೆ ಯಾಕೆ ಪರಚುವೆ ಓ ನನ್ನ ಮುದ್ದಿನ ಬೆಕ್ಕೇ
ನೀ ಎಷ್ಟೆಂದು ಸುಂದರ ಬೆಕ್ಕೇ...
ನಾಯಿಯನು ಕಂಡರೆ ಓಡುವ ಬೆಕ್ಕು ಇಲಿಯನು ಕಂಡರೆ ಹಿಡಿಯುವ ಬೆಕ್ಕು ನಾ ನಿನಗೆ ಹಾಲನು ಕೊಡುವೆ
ಮೀನನು ಕೊಡುವೆ
ಆದರೆ ನೀ ನನಗೆ ಯಾಕೆ ಪರಚುವೆ ಓ ನನ್ನ ಮುದ್ದಿನ ಬೆಕ್ಕೇ
ಓ ನನ್ನ ಪ್ರೀತಿಯ ಬೆಕ್ಕೇ...!!
ಚಿಟ್ಟೆ
-----------------------------------
ಹೂವಿಂದ ಹೂವಿಗೆ ಹಾರುವ ಚಿಟ್ಟೆ
ಹೂವಿಂದ ಮಕರಂದ ಹೀರುವ ಚಿಟ್ಟೆ
ತೋಟದಿಂದ ತೋಟಕ್ಕೆ ಜಿಗಿಯುವ ಚಿಟ್ಟೆ
ವಿಸ್ಮಯ ಲೋಕದ ಬಣ್ಣದ ಚಿಟ್ಟೆ ನಿನ್ನಯ ವಿಸ್ಮಯ ಏನೋ ಚಿಟ್ಟೆ
ದೇವರ ಮಹಿಮೆ ಅನ್ನೋ ಚಿಟ್ಟೆ
ಬಣ್ಣ ಬಣ್ಣದಿಂದ ಕೂಡಿದ ಚಿಟ್ಟೆ
ನಮಗೂ ಹಾರಲು ಕಲಿಸು ಚಿಟ್ಟೆ.....!!
ಪರಿಸರ
---------------------------
ಹಚ್ಚ ಹಸಿರ ಪರಿಸರದಲಿ
ಹರಿಯುತಿದೆ ನದಿಗಳು
ಹಚ್ಚ ಹಸಿರ ಪರಿಸರದಲಿ
ನಲಿಯುತಿದೆ ಗಿಳಿಗಳು ......
ಮುಂಜಾನೆ ಮಂಜಿನಲಿ ಅರಳುವ ಹೂವುಗಳು
ಮುಸ್ಸಂಜೆ ವೇಳೆ ಮರಳುವ ಹಕ್ಕಿಗಳು .....!! ಸೂರ್ಯನು ಮುಳುಗುವ
ಸೌಂದರ್ಯದ ಕಿರಣ
ಮಳೆಯಲಿ ಕಾಣುವ
ಕಾಮನ ಬಿಲ್ಲಿನ ಬಣ್ಣ ......!!!
.................. ಲಿಖಿತ ಪುಣಚ 5 ನೇ ತರಗತಿ. ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕೃಷ್ಣಗಿರಿ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
*************************************