
ಮೂವರು ಗೆಳೆಯರು ( ಕಥೆ )
Saturday, August 7, 2021
Edit
ಭವಿಕ್ ಎಸ್. ಪಿ 3ನೇ ತರಗತಿ.
ದ. ಕ. ಜಿ. ಪಂ. ಉ. ಹಿ. ಪ್ರಾ. ಶಾಲೆ. ಕಾವು.
ಪುತ್ತೂರು ತಾಲೂಕು. ದ. ಕ. ಜಿಲ್ಲೆ
ಅದೊಂದು ಹಳ್ಳಿ. ಆ ಹಳ್ಳಿಯಲ್ಲಿ ನಾಯಿ, ಮೊಲ, ಕುದುರೆ ಒಳ್ಳೆಯ ಸ್ನೇಹಿತರಾಗಿದ್ದರು. ಒಂದು ದಿನ ದೂರದ ಕಾಡಿನಿಂದ ಒಂದು ಹುಲಿ ಬಂದಿತು. ಅದು ಹಳ್ಳಿಯ ಒಂದೊಂದು ಪ್ರಾಣಿಯನ್ನು ತಿನ್ನುತ್ತಾ ಹೋಗುತಿತ್ತು. ಹೀಗೆ ಒಂದು ದಿನ ಹುಲಿಯು ದೂರದಲ್ಲಿ ಮೊಲ ಮತ್ತು ನಾಯಿಯನ್ನು ನೋಡಿ ಅದನ್ನು ತಿನ್ನಲಿಕ್ಕೆ ಹೋಗುತ್ತಿರುವಾಗ, ಹುಲ್ಲು ಮೇಯುತ್ತಿದ್ದ ಅದರ ಗೆಳೆಯನಾದ ಕುದುರೆಗೆ ಭಯವಾಯಿತು. ನಾಯಿ ಮತ್ತು ಮೊಲಕ್ಕೆ ........ "ನಿಮ್ಮ ಹಿಂದೆ ಒಂದು ಹುಲಿ ಇದೆ, ಬೇಗ ನೀವಿಬ್ಬರೂ ನನ್ನ ಬೆನ್ನ ಮೇಲೆ ಹಾರಿ ಕುಳಿತುಕೊಳ್ಳಿ " ಎಂದು ಹೇಳಿತು. ನಾಯಿ ಮತ್ತು ಮೊಲ ಕುದುರೆ ಹೇಳಿದಂತೆ ಮಾಡಿತು. ಕುದುರೆಯು ವೇಗವಾಗಿ ಅಲ್ಲಿಂದ ಓಡಿತು. ಕುದುರೆಯು ಓಡಿ ಮುಂದೆ ಸಾಗಿತು. ಹುಲಿಯು ಓಡಿ ಓಡಿ ಅಲ್ಲೇ ತಲೆ ತಿರುಗಿ ಬಿದ್ದು ಬಿಟ್ಟಿತು. ಮೊಲ ಮತ್ತು ನಾಯಿ ಕುದುರೆಗೆ ಧನ್ಯವಾದಗಳನ್ನು ಹೇಳಿತು. "ನೀನು ಇರದಿದ್ದರೆ ನಾವಿಬ್ಬರು ಹುಲಿಯ ಆಹಾರವಾಗಿರುತ್ತಿದ್ದೆವು ". ಎಂದು ಹೇಳಿತು.
ನೀತಿ : ಆಪತ್ತಿಗಾದವನೇ ನಿಜವಾದ ಗೆಳೆಯ.
......................................... ಭವಿಕ್ ಎಸ್. ಪಿ.
3ನೇ ತರಗತಿ.
ದ. ಕ. ಜಿ. ಪಂ.ಉ. ಹಿ ಪ್ರಾ. ಶಾಲೆ . ಕಾವು.
ಪುತ್ತೂರು ತಾಲೂಕು. ದ. ಕ. ಜಿಲ್ಲೆ
**************************************