ವರ್ಷಧಾರೆ - ಕವನ
Tuesday, August 10, 2021
Edit
ಲಾವಣ್ಯ ಎಸ್. ಜಿ 10ನೇ ತರಗತಿ
ಸರಕಾರಿ ಪ್ರೌಢಶಾಲೆ ಕಾಡುಮಠ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ವರ್ಷಧಾರೆ - ಕವನ
---------------------------------------------------
ಜಿಟಿ ಜಿಟಿ ಮಳೆ ಹನಿಯು
ಧರೆಗೆ ಸೊಬಗನು ತಂದಿದೆ
ಇಳೆಗೆ ಮೆರುಗನ್ನು ನೀಡಿದೆ
ಸುಡುಸುಡುವ ವಾತಾವರಣದಲ್ಲಿ
ನೇಸರನು ತಂಪಾದಂತೆ ....!!
ಪ್ರಕೃತಿ ಮಾತೆಗೆ ಅದು ಸಡಗರದ ದಿನ
ಎಲ್ಲೆಲ್ಲೂ ಹಚ್ಚಹಸಿರಿನ ನರ್ತನ
ಗಿಡಗಳು ಹಚ್ಚ ಹಸಿರಾಗಿ ಚಿಗುರಿದರೆ
ಅನ್ನದಾತನ ಕೃಷಿ ಚಟುವಟಿಕೆಗಾಸರೆ ....!!
ಛತ್ರಿಗಳ ಹಿಡಿದು ಎಲ್ಲರ ಪಯಣ
ಹರಿಯುತಿದೆ ಹಳ್ಳ ತೊರೆ ನದಿಗಳು
ಈ ಭೂಮಿಗೆ ಮತ್ತೊಮ್ಮೆ ನವ ಕಾಂತಿ ತುಂಬಿಸುತ್ತಾ ಹಸಿರನ್ನು ಆರಾಧಿಸುತ್ತಾ..... !!
ವರ್ಷಧಾರೆಯ ಕಂಡು
ಹಾಡಿಕುಣಿಯೋ ಮಕ್ಕಳು
ಅದೇನೋ ಖುಷಿ ಆ ಸೊಬಗ ಕಾಣಲು
ಅದೇನೋ ಖುಷಿ ಈ ನಿಸರ್ಗದ
ಪರಿಯ ವರ್ಣಿಸಲು .....!!!
...................................ಲಾವಣ್ಯ ಎಸ್. ಜಿ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕಾಡುಮಠ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************