
ಇಬ್ಬರು ಗೆಳತಿಯರು - ಕಥೆ
Tuesday, August 10, 2021
Edit
ಗೀತಾಲಕ್ಷ್ಮಿ 8 ನೇ ತರಗತಿ
ಸರಕಾರಿ ಪ್ರೌಢಶಾಲೆ ಮುರುವ ಮಾಣಿಲ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಒಂದು ಊರಿನಲ್ಲಿ ಇಬ್ಬರು ಗೆಳತಿಯರು ಇದ್ದರು. ಒಬ್ಬಳ ಹೆಸರು ರಮ್ಯಾ. ಇನ್ನೊಬ್ಬಳ ಹೆಸರು ಪ್ರಮೀಳ. ರಮ್ಯಾ ಶ್ರೀಮಂತ ಕುಟುಂಬದವಳು. ಪ್ರಮೀಳ ಬಡ ಕುಟುಂಬದವಳು. ಅವರಿಬ್ಬರೂ 7ನೇ ತರಗತಿ ಯಲ್ಲಿ ಓದುತ್ತಿದ್ದರು. ಪ್ರಮೀಳನಿಗೆ ಓದಲು, ಬರೆಯಲು, ಸಂಗೀತಹಾಡಲು, ಡಾನ್ಸ್ ಮಾಡಲು, ಆಸಕ್ತಿ ಇತ್ತು. ಆದರೆ ರಮ್ಯಾನಿಗೆ ಅಷ್ಟು ಆಸಕ್ತಿ ಇರಲಿಲ್ಲ. ಅವರಿಬ್ಬರೂ ಸಂಗೀತ ಕ್ಲಾಸಿಗೆ ಹೋಗುತಿದ್ದರು. ಆದರೆ ರಮ್ಯನಿಗೆ ಸ್ವಲ್ಪ ಹೊಟ್ಟೆ ಕಿಚ್ಚು ಇತ್ತು. ಏಕೆಂದರೆ ಪ್ರಮೀಳ ಸಂಗೀತವನ್ನು ಚೆನ್ನಾಗಿ ಹಾಡುತ್ತಿದ್ದಳು.
ಒಂದು ದಿನ ಶಾಲೆಯಲ್ಲಿ ಸಂಗೀತ ಸ್ಪರ್ಧೆ ಇತ್ತು. ಆಗ ರಮ್ಯ ..... ಸಂಗೀತ ಸ್ಪರ್ಧೆಯಲ್ಲಿ ಪ್ರಶಸ್ತಿ ತನಗೇ ಸಿಗಬೇಕೆಂದುಕೊಂಡು ಉಪಾಯ ಮಾಡಿದಳು. ಪ್ರಮೀಳ ಚೆನ್ನಾಗಿ ಹಾಡಬಾರದೆಂದು ಕಷಾಯಮಾಡಿ ಅದಕ್ಕೆ ಸ್ವರ ಬಾರದೆ ಇರುವ ಪೌಡರ್ ಬೆರೆಸಿದಳು. ಅದನ್ನು ನವೀನ ಅನ್ನುವ ಸ್ನೇಹಿತೆ ನೋಡಿದಳು. ಅದನ್ನು ನೋಡಿ ನವಿನಾ ಗೆ ತುಂಬಾ ಬೇಸರವಾಯಿತು. ಅವಳು ಹೇಗಾದರೂ ಪ್ರಮೀಳನಿಗೆ ಸಹಾಯ ಮಾಡಬೇಕೆಂದುಕೊಂಡು ರಮ್ಯಾ ನ ಬಳಿ ಬಂದು...... ರಮ್ಯ ನಿನ್ನನ್ನು ಸರ್ ಕರೆಯುತ್ತಿದ್ದಾರೆ. ಅಂದಳು. ರಮ್ಯಾ ಆಗ ಕಷಾಯವನ್ನು ಅಲ್ಲಿಯೇ ಬಿಟ್ಟು ಹೋದಳು. ಆಗ ನವೀನ ಆ ಕಷಾಯವನ್ನು ಚೆಲ್ಲಿ ಬೇರೆ ಕಷಾಯ ಮಾಡಿಟ್ಟಳು. ಆ ಕಷಾಯವನ್ನು ರಮ್ಯ...... ಪ್ರಮೀಳ ನಿಗೆ ಕೊಟ್ಟಳು. ಪ್ರಮೀಳ ಕಷಾಯ ಕುಡಿದಳು. ಸಂಗೀತ ಸ್ಪರ್ಧೆ ಆರಂಭವಾಯಿತು. ಆಗ ಪ್ರಮೀಳ ತುಂಬಾ ಚೆನ್ನಾಗಿ ಸಂಗೀತ ಹಾಡಿದಳು. ಆಗ ರಮ್ಯಾ ನಿಗೆ ಇನ್ನೂ ಹೊಟ್ಟೆ ಕಿಚ್ಚು ಜಾಸ್ತಿ ಆಯಿತು. ರಮ್ಯಾ ನಿಗೆ ಹಾಡು ಮರೆತು ಹೋಗಿ ಹಾಡಲು ಸಾಧ್ಯವಾಗಲಿಲ್ಲ. ಆ ಸ್ಪರ್ಧೆಯಲ್ಲಿ ಪ್ರಮೀಳನಿಗೆ ಬಹುಮಾನ ಸಿಕ್ಕಿತು.
ನೀತಿ : ಗೆಳೆತನದಲ್ಲಿ ಮೋಸ, ವಂಚನೆ ಸಲ್ಲದು.
.................................. ಗೀತಾಲಕ್ಷ್ಮಿ 8 ನೇ ತರಗತಿ
ಸರಕಾರಿ ಪ್ರೌಢಶಾಲೆ ಮುರುವ ಮಾಣಿಲ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
*******************************************