
ತೆಂಗಿನಮರ - ಕವನ
Monday, August 9, 2021
Edit
ಧೃತಿ 9 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಗ್ರಾಮ ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ತೆಂಗಿನಮರ - ಕವನ
--------------------------------------------------
ತೆಂಗಿನಮರವೇ ತೆಂಗಿನಮರವೇ
ನಿನ್ನಯ ಹೆಸರು ಅಜರಾಮರವೇ
ನಿನಗೆನ್ನುವರು ಕಲ್ಪವೃಕ್ಷ
ನೀನವತರಿಸಿದೆ ಭೂಮಿಯ ಮೇಲೆ ಲಕ್ಷ ಲಕ್ಷ
ಮರದ ತುಂಬಾ ತುಂಬಿದೆ
ಸಿಹಿ ಸಿಹಿ ಎಳನೀರು
ಎಳನೀರು ಕುಡಿದರೆ
ಆರೋಗ್ಯವು ಆಗದು ಏರು ಪೇರು
ನಿನ್ನಯ ಕಾಂಡವ ಸೀಳಿ
ಮಾಡುವರು ಮನೆಯ ಮಾಡು
ನಿನ್ನಯ ಗರಿಗಳ ಪೋಣಿಸಿ
ಮಾಡುವರು ಮನೆಯ ಗೂಡು
ತೆಂಗಿನಕಾಯಿ ಇಲ್ಲದೆ ಸಾಗದು ಅಡುಗೆ
ಇದು ಪ್ರಕೃತಿಯ ದೊಡ್ಡ ಕೊಡುಗೆ
ಎಣ್ಣೆಯ ತೆಗೆಯುವರು ಒಣಗಿಸಿ
ರೋಗನಿರೋಧಕವದು ಬಳಸಿ
ಅದರಿಂದ ಮಾಡಿದ
ಸಿಹಿ ತಿನಿಸಿನ
ರುಚಿಯನು ಬಲ್ಲವನೆ ಬಲ್ಲ
ತೆಂಗಿನಮರವೇ .... ನೀನೇ... ಅಜರಾಮರವೇ
................................... ಧೃತಿ 9 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಗ್ರಾಮ ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************