
ಕವನಗಳು
Saturday, August 7, 2021
Edit
ಇಂಚರ ಎಸ್. ಕೆ. ಆಚಾರ್ಯ 9ನೇ ತರಗತಿ ಪ್ರಿಯದರ್ಶಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್
ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಮನದಾಸೆ
*********************
ಆಗಸ ಚುಂಬಿಸಲು ಇಚ್ಚಿಸುವ
ಹಕ್ಕಿ ಆಗುವ ಆಸೆ
ಕಾಮನಬಿಲ್ಲಿನ ಮಧ್ಯದಿ
ಹೊಳೆಯುವ ಆಸೆ
ಇರುಳಿನ ನಡುವೆ ಮಿನುಗುವ
ಚಂದ್ರಿಕೆ ಆಗುವ ಆಸೆ
ಅಮ್ಮನ ತೋಳಲ್ಲಿ ಪುಟ್ಟ
ಮಗುವಾಗುವ ಆಸೆ
ಹಸಿರಿನ ಮಡಿಲಲ್ಲಿ ಉಸಿರನ್ನು ಚೆಲ್ಲುತ ವನದೇವತೆಯಾಗುವ ಆಸೆ
ಸದಾ ಪರಿಶ್ರಮಿಯಾಗಿ ಉತ್ತುಂಗಕ್ಕೇರುವ
ಹೆಣ್ಣಾಗುವ ಆಸೆ
ಇದೇ ನನ್ನ ಆಸೆ
ಇದೇ ನನ್ನ ಮನದಾಸೆ.....!!
ಹುಡುಕಾಟ
******************
ಈ ಜನರಿಗೆ ಎಲ್ಲಿಲ್ಲದ ಹುಡುಕಾಟ
ನೆಲೆ ಇಲ್ಲದವನಿಗೆ ಆಸರೆಯ ಹುಡುಕಾಟ
ಹಸಿದವನಿಗೆ ಆಹಾರದ ಹುಡುಕಾಟ
ಬಾಯಾರಿದವನಿಗೆ ನೀರಿನ ಹುಡುಕಾಟ
ಪರರ ವಸ್ತುವ ಬೇಕೆನ್ನುವ ಹುಡುಕಾಟ
ಎಲ್ಲ ಇದ್ದವನಿಗೆ ನೆಮ್ಮದಿಯ ಹುಡುಕಾಟ
ಈ ಜನರಿಗೆ ಎಲ್ಲಿಲ್ಲದ ಹುಡುಕಾಟ
ಇದೇ ಜೀವನದ ಹುಡುಕಾಟ
ಜೀವನವೇ ಹುಡುಕಾಟ.....!!!
ಮಳೆ
********************
ಭೋರ್ಗರೆದು ಬರುತ್ತಿದೆ ಮಳೆ
ತಂಪಾಗಿ ನಲಿದಳು ಇಳೆ
ತಗ್ಗಿ ಬಾಗಿದವು ಹೊಂಬಾಳೆ
ಹರುಷದಿ ಹರಿಯಿತು ಹೊಳೆ
ಬಂತಲ್ಲ ಎಲ್ಲೆಲ್ಲೂ ನೆರೆ
ಇಲ್ಲದಾಯಿತು ಜನರಿಗೆ ಆಸರೆ
ಉಕ್ಕಿದವು ನದಿಗಳು ಜಳಜಳ
ಪ್ರಕೃತಿಯೆದುರೆಲ್ಲಾ ತಳಮಳ
ನಗಬೇಕು
**********************
ನಗಬೇಕು ತಾಯಿ ನಗಬೇಕು
ನಗುವಿನಲಿ ನಗುತ್ತಾ ಬಾಳಬೇಕು
ಏನೇ ಕಷ್ಟ ಬಂದರೂ
ಎದೆಯೊಡ್ಡಿ ನಿಂತು ನಗಬೇಕು
ಎಷ್ಟು ದಿನದ ಬಾಳು
ಅರಿತಿಲ್ಲ ನಾವು ನೀವು
ನಾಳೆಯೆಂಬ ಕಾಣದ ಬಯಕೆಗೆ
ಹಾತೊರೆಯುತ್ತ ನಗಬೇಕು
ಬದುಕೆಲ್ಲ ಒಂದು ಇರುಳಿನ ನಂಟಿನಂತೆ
ಏನೇ ಕಷ್ಟ ಬಂದರೂ ನಗುತ್ತಿರಬೇಕು...!!
ಮರ
**********************
ಮರವೇ ... ಮರವೇ ...
ನೀನೆಷ್ಟು ಸುಂದರ
ನಿನ್ನ ಮಡಿಲಲ್ಲಿ ಕೇಳುತ್ತಿದೆ
ಕೋಗಿಲೆಯ ಇಂಚರ
ಸವಿಯುತಿದೆ ನಿನ್ನೊಳು
ಜೇನಿನ ಹನಿ
ಬಸಿರು ತುಂಬಿದೆ ನಿನ್ನೊಳು
ಹಣ್ಣಿನ ಗಣಿ
ಹೃದಯ ತಲ್ಲಣ ಗೊಳ್ಳುತ್ತಿದೆ
ನೀನಿಲ್ಲದಿರೆ ನನ್ನೊಳು
ಸದಾ ಇರಬೇಕು ನೀ ಹಚ್ಚ ಹಸಿರು
ನಿನ್ನಿಂದಲೇ ನಮಗೆಲ್ಲ ಉಸಿರು....!!!
..................... ಇಂಚರ ಎಸ್. ಕೆ. ಆಚಾರ್ಯ
9ನೇ ತರಗತಿ
ಪ್ರಿಯದರ್ಶಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************