-->
ನಾನು ಸೈನಿಕ , ಕೊಲುವವನಲ್ಲ ಕಾಯುವವ....!!!

ನಾನು ಸೈನಿಕ , ಕೊಲುವವನಲ್ಲ ಕಾಯುವವ....!!!

ಡಾ. ಕುಮಾರ ಸ್ವಾಮಿ ಎಚ್
ಉಪನ್ಯಾಸಕ, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ

                       ನಾನು ಸೈನಿಕ 
          ಕೊಲುವವನಲ್ಲ ಕಾಯುವವ....!!!
--------------------------------------------------
            ಸೈನಿಕರೆಂದರೆ ಯುದ್ಧ ಮಾಡುವವರು ಎಂದೇ ಮೊದಲಿಗೆ ಅನಿಸುವುದು. *ಸೈನಿಕ* ಎಂಬುದರೊಳಗೆಯೇ ಹೋರಾಟದ ಕಲ್ಪನೆ ಇದೆ. ಈ ಹೋರಾಟ ಶತ್ರುಗಳಿಂದ ದೇಶವನ್ನು ಕಾಯಲು ಆಗಬಹುದು. ಹಾಗೆಯೇ ದೇಶದ ಒಳಗಿರುವ ಶತ್ರುಗಳಿಂದ ದೇಶವನ್ನು ಕಾಪಾಡಿಕೊಳ್ಳಲೂ ಆಗಬಹುದು. ದೇಶದೊಳಗಿನ ಶತ್ರುಗಳು ಯಾರು...? ಪ್ರಾಕೃತಿಕ ದುರಂತಗಳು , ಪರಿಸರ ಮಾಲಿನ್ಯ , ರೋಗಗಳು ನಮ್ಮ ದೇಶವನ್ನು ಕಾಡುತ್ತಿರುವ ಒಂದು ಬಗೆಯ ಶತ್ರುಗಳು. ಮೋಸ, ಭ್ರಷ್ಟಾಚಾರ, ಲಂಚ, ಸ್ವಜನ ಪಕ್ಷಪಾತಗಳು ಇನ್ನೊಂದು ಬಗೆಯ ಶತ್ರುಗಳು. ದೇಶದ ಬೊಕ್ಕಸಕ್ಕೆ ಪಾವತಿಸಬೇಕಾಗಿರುವ ತೆರಿಗೆ ಪಾವತಿಸದಿರುವವರು, ಸುಳ್ಳು ಲೆಕ್ಕಗಳನ್ನು ನೀಡಿ ಸರಕಾರವು ಬಡವರಿಗೆ ಕೊಡಮಾಡುವ ಸವಲತ್ತುಗಳನ್ಜು ದೋಚುವವರು , ಜನರ ತೆರಿಗೆ ಹಣದಿಂದಲೇ ವೇತನ ಪಡೆದರೂ ಲಂಚಕ್ಕಾಗಿ ಕೈಚಾಚುವವರು ದೇಶದ್ರೋಹಿಗಳಲ್ಲವೇ.....? ನಮ್ಮ ದೇಶದ ಮೇಲೆ ಹೊರಗಿನಿಂದ ಧಾಳಿ ಮಾಡುವವರು ಶತ್ರುಗಳೆಂಬ ಬಗ್ಗೆ ನಮಗೆ ಅನುಮಾನಗಳಿಲ್ಲ. ಆದರೆ ನಮ್ಮೊಡನೆಯೇ ಇದ್ದು , ಎಲ್ಲರೊಂದಿಗೆ ಬೆರೆಯುತ್ತಲೇ ತಮ್ಮ ಸ್ವಾರ್ಥಕ್ಕಾಗಿ ದೇಶದ ಹಿತವನ್ನು ಬಲಿಕೊಡುವ ಶತ್ರುಗಳನ್ನು ಗುರುತಿಸುವುದು ಕಷ್ಠ. ಇಂತಹವರನ್ನು ಗುರುತಿಸಿ ಅವರ ವಿರುದ್ಧ ಹೋರಾಡುವ ಸೈನಿಕರಾಗಬೇಕಾಗಿದೆ ನಾವು.
ಇದರಿಂದಲೂ ಮುಖ್ಯವಾದ ಇನ್ನೊಂದು ವಿಷಯವಿದೆ. ನಾವೇ ಅಂತಹ ದೇಶದ್ರೋಹಿಗಳಾಗದಂತೆ ಎಚ್ಚರವಹಿಸಬೇಕಾಗಿದೆ....!! ನಮ್ಮ ಸ್ವಾರ್ಥ ಚಿಂತನೆಗಳ ವಿರುದ್ಧವಾಗಿ ನಾವೇ ಹೋರಾಡಬೇಕಾಗಿದೆ....!! ಕೆಟ್ಟ ವ್ಯಸನಗಳು ನಮ್ಮನ್ನು ಬಲಿತೆಗೆದುಕೊಳ್ಳದಂತೆ ನಾವು ಜಾಗ್ರತರಾಗಿರಬೇಕಾಗಿದೆ. ನಮ್ಮ ಸುತ್ತಲಿನ ಪರಿಸರ ಮಲಿನಗೊಳ್ಳದಂತೆ ಬದುಕುವ ಕ್ರಮಗಳನ್ನು ಮೊದಲಿಗೆ ನಾವೇ ರೂಢಿಸಿಕೊಳ್ಳಬೇಕಾಗಿದೆ. ದೇಶದ ಬೊಕ್ಕಸಕ್ಕೆ ಪಾವತಿಸಬೇಕಾದ ತೆರಿಗೆಯನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕಾಗಿದೆ. ಇವನ್ನೆಲ್ಲ ಆಚರಿಸುವವರೇ ದೇಶದೊಳಗಿನ ಸೈನಿಕರು, ದೇಶ ಕಾಯುವ ಸೈನಿಕರು....!!
          ನಾನು ಸೈನಿಕ 
         ಕೊಲುವವನಲ್ಲ ಕಾಯುವವ.
         ನಮ್ಮ ನೆಲ, ಜಲ, ಪರಿಸರ 
         ಸಂರಕ್ಷಿಸುವ ಸೈನಿಕ;
         ನನ್ನ ಮನೆ, ನನ್ನ ನೆರೆಹೊರೆ 
         ನನ್ನ ಊರಿನ ಒಳಿತಿಗಾಗಿ 
         ಕೆಲಸ ಮಾಡುವ ಸೈನಿಕ;
         ಎಲ್ಲರ ಹಿತದಲ್ಲಿ 
         ನನ್ನ ಹಿತವನ್ನು ಕಾಣುವ ಸೈನಿಕ;
         ನನ್ನ ಕೆಲಸಗಳನ್ನು ಅಚ್ಚುಕಟ್ಟಾಗಿ,          
        ಪ್ರಾಮಾಣಿಕವಾಗಿ ಮಾಡುವ ಸೈನಿಕ;  
        ಇತರರಿಗೆ ಒಳಿತಾಗುವುದಾದರೆ 
        ತ್ಯಾಗ ಮಾಡಲು ಸಿದ್ಧನಿರುವ ಸೈನಿಕ; 
        ನನ್ನ ತಂದೆ, ತಾಯಿ , ಹಿರಿಯರನ್ನು 
       ಗೌರವಿಸುವ ಸೈನಿಕ;
       ಮಾನವತೆಯನ್ನು ಪ್ರೀತಿಸುವ ಸೈನಿಕ.
       ನಾನು ಸೈನಿಕ 
       ಕೊಲುವವನಲ್ಲ ಕಾಯುವವ....!!!
............................ ಡಾ. ಕುಮಾರ ಸ್ವಾಮಿ ಎಚ್
ಉಪನ್ಯಾಸಕ, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*********************************************

Ads on article

Advertise in articles 1

advertising articles 2

Advertise under the article