-->
ನಾನೂ ಒಬ್ಬ ಸೈನಿಕ...!

ನಾನೂ ಒಬ್ಬ ಸೈನಿಕ...!

ಜಗಲಿಯ ಮಕ್ಕಳ ಮನದ ಮಾತು
ನಾನೂ ಒಬ್ಬ ಸೈನಿಕ...!
ಸಂಚಿಕೆ - 1
     

          ನಾನೂ ಒಬ್ಬ ಸೈನಿಕ - ಬಿಂದುಶ್ರೀ 
-----------------------------------------------
              ಅನ್ನ ನೀಡುವ ರೈತ ನಮ್ಮ ಹೃದಯ ಇದ್ದ ಹಾಗೆ. ಹಾಗೆಯೇ ದೇಶ ಕಾಯುವ ಸೈನಿಕ ಹೃದಯದ ಬಡಿತ ಇದ್ದ ಹಾಗೆ..!! ಇಬ್ಬರಲ್ಲಿ ಒಬ್ಬರು ಇಲ್ಲದಿದ್ದರೂ ನಾವ್ಯಾರು ಉಳಿಯಲಾರೆವು. ದೇಶದ ಅಭಿವೃದ್ಧಿಯಲ್ಲಿ ಇವರಿಬ್ಬರ ಪಾತ್ರವೂ ಮಹತ್ವವಾದದ್ದು. ನನಗೂ ಸೈನಿಕಳಾಗಿ ದೇಶ ಕಾಯಬೇಕೆಂಬ ಒಂದು ಆಸೆ ಚಿಕ್ಕಂದಿನಿಂದಲೂ ಇದೆ. ಅನೇಕರಿಗೆ ಇರುತ್ತದೆ... ಹಾಗಂತ ನಾವು ಸೈನಿಕರಾಗಬೇಕಾದರೆ ದೇಶದ ಗಡಿಗೇ ಹೋಗಬೇಕೆಂದಿಲ್ಲ , ನಾವಿರುವಲ್ಲಿಯೇ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ನಾವೂ ಒಬ್ಬ ಸೈನಿಕರಾಗಬಹುದು. ಅಂದು ಪ್ರವಾಹ ಬಂದಂತಹ ಸಂದರ್ಭದಲ್ಲಿ ಅನೇಕ ಯುವಕರು ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ತಮ್ಮ ಪ್ರಾಣವನ್ನು ಲೆಕ್ಕಿಸದೇ ಸಹಕರಿಸಿದ್ದರು. ಅವರೂ ಒಬ್ಬ ಸೈನಿಕರೇ!! ಇವರಲ್ಲದೇ ಕೆಲವು ಮಕ್ಕಳೂ ಸಹ ಸಾಕುಪ್ರಾಣಿಗಳನ್ನು ಭುಜದ ಮೇಲೆ ಹೊತ್ತು ರಕ್ಷಿಸಿದ್ದಾರೆ... ಇವರೂ ಸೈನಿಕರೇ!! ಸೈನಿಕರು ನಮ್ಮೊಳಗೆ ಇದ್ದಾರೆ ಅವರಿಗೆ ಪ್ರೋತ್ಸಾಹ ನೀಡಿ , ಒಳಗಿದ್ದವರು ಹೊರಬರುವಂತೆ ಮಾಡಬೇಕಿದೆ. ಇದಕ್ಕಾಗಿ ನಾವು ನಮ್ಮಲ್ಲಿ ಬದಲಾವಣೆಗಳನ್ನು ತರಬೇಕಿದೆ. ಇನ್ನೊಬ್ಬರಿಗೆ ಎಂತಹ ಕಷ್ಟ ಕಾಲದಲ್ಲೂ ತಮ್ಮಿಂದಾದಷ್ಟು ಸಹಾಯ ಮಾಡುವ ಮನೋಗುಣವನ್ನು ಬೆಳೆಸಿಕೊಳ್ಳಬೇಕಿದೆ.....
.............................................. ಬಿಂದುಶ್ರೀ 
10ನೇ ತರಗತಿ 
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ 
ಬಂಟ್ವಾಳ ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
*********************************************


        ನಾನೂ ಒಬ್ಬ ಸೈನಿಕ - ಸಾನ್ವಿ ಸಿ.ಎಸ್. 
 ----------------------------------------------------
            ಸೈನಿಕರು ಹೇಗೆ ನಮ್ಮ ದೇಶವನ್ನು ರಕ್ಷಿಸುತ್ತಾರೆ , ಹಾಗೆ ಮಕ್ಕಳಾದ ನಾವು ನಮಗೆ ಸಾಧ್ಯವಾದಷ್ಟು ನಮ್ಮ ನೆಲ-ಜಲ ಪರಿಸರವನ್ನು ರಕ್ಷಿಸಲು ಪ್ರಯತ್ನಿಸಬೇಕು. ನಾವು ನೀರನ್ನು ಪೋಲು ಮಾಡಬಾರದು. ಎಲ್ಲಿಯಾದರೂ ನಲ್ಲಿಯಿಂದ ನೀರು ಸೋರುತ್ತಿದ್ದರೆ ನಾವು ಅದನ್ನು ನಿಲ್ಲಿಸಬೇಕು. ದೈನಂದಿನ ಕೆಲಸಮಾಡುವಾಗ ನೀರನ್ನು ಮಿತವಾಗಿ ಬಳಸಬೇಕು. ನಮ್ಮ ಗೆಳೆಯ ಗೆಳತಿಯರಿಗೂ ಈ ರೀತಿ ಮಾಡುವಂತೆ ಹೇಳಬೇಕು. ನಾವು ಪ್ಲಾಸ್ಟಿಕ್ಕನ್ನು ಸುತ್ತಮುತ್ತ ಬಿಸಾಕಬಾರದು. ಇದರಿಂದ ಪ್ರಕೃತಿ ಮಲಿನವಾಗುತ್ತದೆ. ಸುತ್ತಮುತ್ತ ಗಿಡ ಮರಗಳನ್ನು ಬೆಳೆಸುವುದರಿಂದ ಪ್ರಕೃತಿಯು ಶುದ್ಧವಾಗುತ್ತದೆ. ಮಳೆಗಾಲದಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಗುಂಡಿಗಳಲ್ಲಿ ಕೆಸರು ನೀರು ನಿಲ್ಲುತ್ತದೆ. ಅದರಲ್ಲಿ ಕ್ರಿಮಿಕೀಟಗಳು ಮೊಟ್ಟೆ ಹಾಕುತ್ತವೆ ಮತ್ತು ಅದು ಮರಿಗಳಾಗುತ್ತದೆ. ಆ ಕ್ರಿಮಿಕೀಟಗಳಿಂದ ಸಾಂಕ್ರಾಮಿಕ ರೋಗಗಳು ಬಂದು ಇಡೀ ದೇಶಕ್ಕೆ ಹರಡುತ್ತದೆ. ಆದ್ದರಿಂದ ನಾವು ಈ ರೀತಿ ಗುಂಡಿಗಳಾಗಲು ಬಿಡಬಾರದು, ಎಲ್ಲಿಯಾದರೂ ಆದರೆ ನಾವು ಅಲ್ಲಿಂದ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು. ಸಭೆ-ಸಮಾರಂಭಗಳಲ್ಲಿ ಊಟವನ್ನು ಬೇಕಾಬಿಟ್ಟಿಯಾಗಿ ಹಾಳುಮಾಡುತ್ತಾರೆ. ನಾವು ಹಾಗೆ ಬಿಸಾಕುವ ಅವರಿಗೆ ಅವರಿಗೆ ಬೇಕಾದಷ್ಟೇ ಹಾಕಿಕೊಳ್ಳಲು ಹೇಳಬೇಕು. ಆದ್ದರಿಂದ ನಾವು ಆಹಾರವನ್ನು ಹಾಳು ಮಾಡಬಾರದು. ಈ ರೀತಿಯಾಗಿ ನಾವು ಸೈನಿಕರಂತೆ ದೇಶಸೇವೆ ಮಾಡಲು ಸಾಧ್ಯ.
........................................ ಸಾನ್ವಿ ಸಿ.ಎಸ್. 
4 ನೇ ತರಗತಿ 
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************


     ನಾನು ಸೈನಿಕನಾದರೆ....ಆದ್ಯಂತ್ ಅಡೂರು 
          -----------------------------
              ನಾನು ಸೈನಿಕನಾದರೆ ನಮ್ಮ ದೇಶದ ಗಡಿಯನ್ನು ಕಾಯುವೆ. ಯಾವತ್ತೂ ಭರತಮಾತೆಗೆ ನಮಿಸುವೆ ಹಾಗೂ ಭರತಮಾತೆಯ ಪುತ್ರನಾಗಿರುವೆ. ನಮ್ಮ ವೈರಿಗಳ ವಿರುದ್ಧ ಹೋರಾಡುತ್ತೇನೆ. ಎಲ್ಲರನ್ನು ನಾನು ರಕ್ಷಿಸುವೆ. ಕೋವಿ ಹಿಡಿದು ನಿಲ್ಲುವೆ. ವೈರಿಗಳನ್ನು ಕೊಲ್ಲುವೆ. ನಾನು ಸೈನಿಕನಾದರೆ ನಮ್ಮ ದೇಶದ ಜನರನ್ನು ಕಾಪಾಡುವೆ. 'ದೇಶ ಸೇವೆಯೇ ಈಶ ಸೇವೆ' ಎಂಬಂತೆ ನಾನು ದೇಶವನ್ನು ರಕ್ಷಿಸುತ್ತೇನೆ. ನಾನು ಭಾರತೀಯ ಸೇನೆಯಲ್ಲಿ ಧೈರ್ಯದಿಂದ ಕೆಲಸ ಮಾಡುತ್ತೇನೆ. 
           ಕಲ್ಲು, ಮುಳ್ಳಿನಲ್ಲಿ ನಾನು ಕಷ್ಟಪಟ್ಟು ಮಲಗುವೆ.ಮಳೆ, ಚಳಿ, ಬಿಸಿಲೇ ಇರಲಿ ದೇಶವನ್ನು ನಾನು ಯಾವತ್ತೂ ಬಿಡಲಾರೆ ವೈರಿಗಳು ದಾಳಿ ಮಾಡಿದರೆ ನಾನೂ ಅವರ ಮೇಲೆ ದಾಳಿ ಮಾಡುವೆ. ಏನೇ ಆಗಲಿ ನಾನು ಹಿಂದೆ ಸರಿಯಲಾರೆ. ಮುನ್ನುಗ್ಗುತ್ತಾ ಶತ್ರುಗಳನ್ನು ಕೊಲ್ಲುವೆ. ಯುದ್ಧವಾದರೆ ಶತ್ರುಗಳನ್ನು ಸೋಲಿಸುವೆ. ಭಾರತದಂತಹಾ ಪುಣ್ಯ ದೇಶದಲ್ಲಿ ಜನಿಸುವುದೇ ದೊಡ್ಡ ಪುಣ್ಯ. ಅದರಲ್ಲೂ ಭಾರತ ದೇಶದ ಸೈನಿಕನಾಗುವುದು ನೂರು ಪಾಲು ಪುಣ್ಯ.
.................................. ಆದ್ಯಂತ್ ಅಡೂರು 
ಎಂಟನೇ ತರಗತಿ 
ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಅಡೂರು,  ಕಾಸರಗೋಡು ಜಿಲ್ಲೆ.
********************************************


           ನಾನೂ ಸೈನಿಕ - ಲಹರಿ ಜಿ.ಕೆ.
-------------------------------------------------
   ನಾವೀಗ 75 ನೇ ವರ್ಷದ ಸ್ವಾತಂತ್ರೋತ್ಸವವನ್ನು ಆಚರಿಸುವ ಸಂಭ್ರಮದಲ್ಲಿದ್ದೇವೆ. ಸ್ವಾತಂತ್ರ್ಯ ಎನ್ನುವುದು ಸ್ವೇಚ್ಛಾಚ್ಚಾರವಲ್ಲ.... ಬಹಳಷ್ಟು ಮಹನೀಯರ ತ್ಯಾಗದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿದ್ದು.... ದೇಶಭಕ್ತಿಯ ಜ್ಯೋತಿಯನ್ನು ನಾವೆಲ್ಲರೂ ನಮ್ಮ ಹ್ರದಯದಲ್ಲಿ ಬೆಳಗಬೇಕಿದೆ.... ನಾನೂ ನಮ್ಮ ಪ್ರಧಾನಮಂತ್ರಿಯವರ ದೇಶ ಬೆಳಗಿಸುವ ಕಾರ್ಯಗಳಲ್ಲೊಂದಾದ ಸ್ವಚ್ಛ ಭಾರತದಡಿ ನನ್ನ ಕೈಲಾದ ಸೇವೆಯನ್ನು ಮಾಡಿ ನನ್ನ ಪರಿಸರವನ್ನು ಸ್ವಚ್ಚ ಇಡುವುದರ ಮೂಲಕ ಸೈನಿಕನಂತೆ ಇದ್ದು ಭಾರತಾಂಬೆಗೆ ಸೇವೆಗೈಯಬೇಕೆಂಬುದು ನನ್ನ ಆಶಯ. ದೇಶದ ಸಂಸ್ಕೃತಿ... ಆಚರಣೆಗಳನ್ನು ಉಳಿಸಿ ಬೆಳೆಸುವುದೂ ನಮ್ಮ ಜವಾಬ್ದಾರಿಗಳಲ್ಲೊಂದು ಅಲ್ಲವೇ.... ? ಈ ಎಲ್ಲಾ ವಿಷಯಗಳನ್ನು ಮನದಲ್ಲಿಟ್ಟು ದೇಶಕ್ಕಾಗಿ ನನ್ನ ಅಳಿಲ ಸೇವೆ ಮಾಡಿ ದೇಶದ ಸೈನಿಕನೆನಿಸಿಕೊಳ್ಳಬೇಕೆಂಬುದೇ ನನ್ನ ಮಹಾದಾಸೆ.
................................................... ಲಹರಿ ಜಿ.ಕೆ.
7 ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************


        ನಾನೊಬ್ಬಳು ಸೈನಿಕ - ರಿಷಿಕಾ.ಡಿ
---------------------------------------------------
ದೇಶದ ಗಡಿ ಪ್ರದೇಶದಲ್ಲಿ ಬಂದೂಕು ಹಿಡಿದುಕೊಂಡು ನಾನು ಹೋರಾಡುವುದಿಲ್ಲ ಆದರೂ ನಾನೊಬ್ಬಳು ಸೈನಿಕ. ನಾನು ಒಬ್ಬಳು ಸಮವಸ್ತ್ರ ಇಲ್ಲದ ಸೈನಿಕ. ನಾನೊಬ್ಬಳು ಸಾಮಾನ್ಯ ನಾಗರಿಕ. ದೇಶದ ಗಡಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ನಮ್ಮ ದೇಶದ ಭಾರತೀಯ ಸೈನಿಕರು ಕಾಪಾಡುತ್ತಾರೆ . ಆದರೆ ಭಾರತವು ಆಂತರಿಕವಾಗಿ ಸುರಕ್ಷಿತವಾಗಿರಬೇಕೆಂದರೆ ಪ್ರತಿಯೊಬ್ಬ ನಾಗರಿಕನೂ ತನ್ನೊಳಗಿನ ಸೈನಿಕನನ್ನು ಹೊರತರಬೇಕು. ಸಮಾಜದಲ್ಲಿ ಅನೇಕ ತಪ್ಪು ಕೆಲಸಗಳು ಆಗುತ್ತಿರುತ್ತವೆ. ಆವಾಗ ನಾವು ಅದನ್ನು ಅಧಿಕಾರಿಗಳು ಮಾಡಲಿ, ಪೊಲೀಸರು ಮಾಡಲಿ ಎಂದು ಸುಮ್ಮನೆ ಕೂರಬಾರದು. ನಾವೊಂದು ಸೈನಿಕನ ಹಾಗೆ ಜವಾಬ್ದಾರಿಯಿಂದ ವರ್ತಿಸಿ ತಪ್ಪು ಕೆಲಸಗಳ ವಿರುದ್ಧ ಹೋರಾಡಿ ನಮ್ಮಸಮಾಜವನ್ನು ಕಾಪಾಡಬೇಕಾಗಿದೆ. ಚಿಕ್ಕ ಪುಟ್ಟ ಕೆಲಸದಲ್ಲೂ ಕೂಡ ನಾವು ಶಿಸ್ತನ್ನು ರೂಡಿಸಿಕೊಳ್ಳಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಲಂಚ ಕೊಡಬಾರದು , ಲಂಚ ಸ್ವೀಕರಿಸಬಾರದು. ಹಿರಿಯರಿಗೆ ಗೌರವ ಕೊಟ್ಟು ಅನಾಥರಿಗೆ ಸಹಾಯ ಮಾಡಬೇಕು. ಈ ರೀತಿ ಪ್ರತಿಯೊಬ್ಬ ನಾಗರಿಕನೂ ಸೈನಿಕನಾದಾಗ ನಮ್ಮ ದೇಶ ಸದೃಢವಾಗಿ ಮೂಡಿಬರುತ್ತದೆ.
..............................................ರಿಷಿಕಾ.ಡಿ
10 ನೆಯ ಆಂಗ್ಲ ಮಾಧ್ಯಮ ತರಗತಿ
ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢಶಾಲೆ ಶಂಭೂರು , ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ.
***************************************


          ನಾನು ಒಬ್ಬ ಸೈನಿಕ - ಮೌಲ್ಯ.ಜಿ.
---------------------------------------------------
ನಾನು ಒಬ್ಬ ಸೈನಿಕನಾಗಿ ರಾಷ್ಟ್ರದ ರಕ್ಷಣೆ ಮಾಡುವೆ. ನಾನು ದೇಶವನ್ನು ಶತ್ರುಗಳಿಂದ ರಕ್ಷಿಸುತ್ತೇನೆ. ನಾನು ನನ್ನ ಜೀವನದ ಬಗ್ಗೆ ಚಿಂತಿಸುವುದಿಲ್ಲ. ದೇಶದ ರಕ್ಷಣೆ ನನ್ನ ಗುರಿಯಾಗಿದೆ. ಪ್ರತಿಯೊಂದು ದೇಶವು ತಮ್ಮ ಸೈನಿಕರಿಂದಲೇ ಸುರಕ್ಷಿತವಾಗಿದೆ. ಸೈನಿಕನಾಗಿ ನಾನು ರಾಷ್ಟ್ರದ ಸೈನ್ಯವನ್ನು ಭದ್ರಪಡಿಸುವೆ. ಸ್ವಾತಂತ್ರದ ಸಂದರ್ಭದಲ್ಲಿ ದೇಶಕಾಕ್ಕಾಗಿ ಹೋರಾಡಿ ಹುತಾತ್ಮರಾದ ಸೈನಿಕರು ಭಾವಚಿತ್ರಗಳನ್ನು ನಮ್ಮ ಊರಿನಲ್ಲಿ ಪೂಜಿಸುವಂತೆ ಮಾಡುವೆ. ಸ್ವಾತಂತತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಾನು ಹೆಮ್ಮೆಯಿಂದ ಹೇಳುವೆ ನಾನು ಒಬ್ಬ ಸೈನಿಕ.
      ಭಾರತ್ ಮಾತಾ ಕೀ ಜೈ
 ......................................... ಮೌಲ್ಯ.ಜಿ.
5 ನೇ ತರಗತಿ. 
ದ.ಕ.ಜಿ.ಪ.ಹಿ.ಪ್ರಾ ಶಾಲೆ ನೇರಳಕಟ್ಟೆ .
ಕೆಂಪುಗುಡ್ಡೆ ಮನೆ ಗಣೇಶ ನಗರ.
ಬಂಟ್ಟಾಳ ತಾಲೂಕು.
ದಕ್ಷಿಣ ಕನ್ನಡ ಜಿಲ್ಲೆ.
*********************************************


       ನಾನು ಒಬ್ಬ ಸೈನಿಕ - ಕೆ. ಸ್ಪೂರ್ತಿ 
-----------------------------------------------------
       ಸೈನಿಕರೇ ನಮಗೆ ಸ್ಫೂರ್ತಿ. ನಮ್ಮನ್ನು ಹೆತ್ತವಳು ನಮ್ಮ ತಾಯಿಯಾದರೆ ಹೊತ್ತುಕೊಂಡವಳು ನಮ್ಮ ಭೂಮಿ ತಾಯಿ. ತಾಯಿ ತನ್ನ ಜೀವವನ್ನೇ ನಮಗೆ ನೀಡಿದರೆ ತಾಯಿನಾಡು ನಮಗೆ ಜೀವನವನ್ನು ನೀಡಿದೆ. ಅಂತಹ ತಾಯಿನಾಡಿನ ರಕ್ಷಣೆ ನಮ್ಮ ಜೀವನದ ಪರಮ ಉದ್ದೇಶವಾಗಬೇಕು. ನಾನೊಬ್ಬ ಸೈನಿಕ ನಾಗಿದ್ದರೆ ತಾಯಿಯನ್ನು ತಾಯಿನಾಡನ್ನು ಸಮನಾಗಿ ಗೌರವಿಸುತ್ತೇನೆ. ಗುಲಾಬಿಯನ್ನು ಮುಳ್ಳು ಕಾಪಾಡುವಂತೆ ನಾನು ನನ್ನ ದೇಶವನ್ನು ಕಾಪಾಡುವೆ. ನಾನು ನನ್ನ ನೆಲ-ಜಲ, ಐಕ್ಯತೆ ಮತ್ತು ದೇಶದ ನಾಳೆಗಳನ್ನು ಕಾಪಾಡುವ ಸೈನಿಕನ ಆಗುತ್ತೇನೆ. ನಾನು ಒಬ್ಬ ಸೈನಿಕ.
................................................ ಕೆ ಸ್ಪೂರ್ತಿ 
8ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು. 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*******************************************


        ನಾನು ಒಬ್ಬ ಸೈನಿಕ - ಡಿ. ಬಿ ಆಯುಷ್
-------------------------------------------------      
         ವಿದ್ಯಾರ್ಥಿಗಳಾದ ನಾವು ಪರಿಸರ ಸಂರಕ್ಷಣೆ ಅರಿವನ್ನು ಮೂಡಿಸಿಕೊಂಡು ಪ್ರತಿಯೊಬ್ಬರಲ್ಲೂ ಜಾಗೃತಿಯನ್ನು ತರಬೇಕು. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕರ್ತವ್ಯ ನನ್ನದಾಗಿದೆ. ಶುದ್ಧಗಾಳಿ ದೊರೆಯುವ ಪರಿಸರವನ್ನು ನಾವು ನಿರ್ಮಾಣ ಮಾಡಿಕೊಳ್ಳಬೇಕು. ನಾಡನ್ನು ರಕ್ಷಿಸಿಕೊಳ್ಳಬೇಕಾದರೆ ಪರಿಸರ ಸಂರಕ್ಷಣೆ ಮಾಡಬೇಕಾದದ್ದು ನಮ್ಮ ಜವಾಬ್ದಾರಿಯಾಗಿದೆ. ಪರಿಸರ ಮಾಲಿನ್ಯದಿಂದ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳಾದ ನಾವು ಮೊದಲು ನಮ್ಮ ಶಾಲೆಯಲ್ಲಿ ನಮ್ಮ ಮನೆಯ ಸುತ್ತಮುತ್ತ ಹೆಚ್ಚು ಹೆಚ್ಚು ಗಿಡಮರಗಳನ್ನು ನೆಟ್ಟು ಪರಿಸರ ಸಂರಕ್ಷಿಸಬೇಕು. ಪರಿಸರವನ್ನು ನಾವು ಸಂರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸಬಲ್ಲದು. ಪರಿಸರ ಮಾಲಿನ್ಯವಾಗುವುದರಿಂದ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಹಾನಿಕಾರಕವಾಗುತ್ತದೆ. ."ಕಾಡಿದ್ದರೆ ನಾಡು-ನಾಡಿದ್ದರೆ ನಾವು ಕಾಡಿಲ್ಲದಿದ್ದರೆ ಸುಡಗಾಡು" ಎನ್ನುವಂತೆ ಕಾಡನ್ನು ನಾಡನ್ನು ಉಳಿಸುವುದು ನಮ್ಮ ನಿಮ್ಮೆಲ್ಲರ ಹೊಣೆಯಾಗಬೇಕು. ಆ ಮೂಲಕ ನಾನೊಬ್ಬ ಸೈನಿಕನಾಗಲು ಇಷ್ಟ ಪಡುತ್ತೇನೆ.
........................................... ಡಿ. ಬಿ ಆಯುಷ್
 9 ನೇ ತರಗತಿ
ಸರ್ಕಾರಿ ಪ್ರಾಢಶಾಲೆ ಕೊಡ್ಮಾಣ್
ವಿಳಾಸ :- ದೆಕ್ಕೆದು ಮನೆ, ಕೊಡ್ಮಾಣ್ ಅಂಚೆ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*********************************************



          ನಾನು ಒಬ್ಬ ಸ್ಯೆನಿಕ - ಸಂಚಿತ್
-----------------------------------------------------
         ನಮ್ಮ ಮನೆಯನ್ನು ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಹಾಗೆಯೇ ನಮ್ಮ ದೇಶವನ್ನು ನಮ್ಮ ನಾಡನ್ನು ನಾವು ಕಾಪಾಡಿಕೊಳ್ಳಬೇಕು. ದೇಶವನ್ನು ರಕ್ಷಿಸಿಕೊಳ್ಳಲು ನಾನು ದೊಡ್ಡವನಾಗಿ ಸೈನಿಕನಾಗಬೇಕು. ಗಡಿಯನ್ನು ಕಾಯುವ ಯೋಧನಾಗಬೇಕು.
ಅಂತಹ ಶಕ್ತಿಯನ್ನು ಕೊಡುವಂತೆ ದೇವರನ್ನು ಬೇಡಿಕೊಳ್ಳುತ್ತೇನೆ. ಅದಕ್ಕಾಗಿ ವಿದ್ಯೆ ಕಲಿಸಿದ ಗುರುಗಳನ್ನು ಹೆತ್ತ ತಂದೆ ತಾಯಿಯರನ್ನು ಆಶೀರ್ವಾದ ಮಾಡಿ ಎಂದು ಬೇಡಿಕೊಳ್ಳುತ್ತೇನೆ.
ದೊಡ್ಡವನಾಗಿ ನಾನು ಒಬ್ಬ ಸೈನಿಕನ ಆಗುತ್ತೇನೆ. ನಾನೂ ಒಬ್ಬ ಸೈನಿಕ.
.............................. ಸಂಚಿತ್ 4ನೇ ತರಗತಿ
ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಗ್ರಿ. ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*********************************************




       ಸೈನಿಕ ನಾನಾಗುತ್ತೇನೆ - ಕೌಶೀಲ 
-----------------------------------------------------
ಇಡೀ ದೇಶವೇ 75 ನೇ ಸ್ವಾತಂತ್ರ್ಯ ಉತ್ಸವದ ಸಡಗರದಲ್ಲಿದೆ. ಒಂದು ಕ್ಷಣ ಮೈ ರೋಮಾಂಚನವಾಗುತಿದೆ....! ಸ್ವಾತಂತ್ರ್ಯದ ಉತ್ಸವ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು...! ನನ್ನ ಕನಸಿನ ಭಾರತ ಎಂದರೆ ಪಾಶ್ಚಿಮಾತ್ಯ ದೇಶಗಳ ಹಾಗೆ ದೊಡ್ಡ ದೊಡ್ಡ , ವಿಶಾಲವಾದ ಕಾಂಕ್ರೀಟ್ ರಸ್ತೆಗಳು. ಸ್ಮಾರ್ಟ್ ಸಿಟಿಗಳು ಅಲ್ಲ. ಬದಲಾಗಿ ನಮ್ಮ ತಾಯಿಯ ಮಡಿಲಲ್ಲಿ ಸಿಗುವ ನೆಮ್ಮದಿ. ನನ್ನ ಭಾರತಾಂಬೆಯ ಮಡಿಲಲ್ಲಿ ಸಿಗಬೇಕು. ನನ್ನ ಭಾರತ ಇಡೀ ವಿಶ್ವಕ್ಕೆ ನಮ್ಮ ಸಂಸ್ಕೃತಿ ಸಂಸ್ಕಾರ ಆಚಾರ - ವಿಚಾರಗಳನ್ನು ಪಸರಿಸಿ ವಿಶ್ವ ಗುರು ಭಾರತ ಆಗ್ಬೇಕು. ನನ್ನ ಭವ್ಯ ಭಾರತ ಜಾತಿ ಜಾತಿಗಳ ನಡುವೆ ಧರ್ಮ ಧರ್ಮಗಳ 
ನಡುವೆ ಸಾಮರಸ್ಯ ಮಾಡಿ ರಾಷ್ಟ್ರ ಕವಿ ಕುವೆಂಪು ಅವರು ಹೇಳಿದ ಹಾಗೆ ಸರ್ವಜನಾಂಗದ ಶಾಂತಿಯ ತೋಟವಗಬೇಕು. ಭ್ರಷ್ಟಾಚಾರ , ಅನಕ್ಷರತೆ , ನಿರುದ್ಯೋಗ ತೊಲಗಿ ಎಲ್ಲರೂ ಉದ್ಯೋಗಸ್ಥರಾಗಬೇಕು. ಭಾರತ ನನ್ನ ದೇಶ. ನನ್ನ ಜನ, ನನ್ನ ನೆಲ ವನ್ನು ರಕ್ಷಿಸುವ ಸೈನಿಕ ನಾನಾಗುತ್ತೇನೆ.  
ಜೈ ಹಿಂದ್....
ಜೈ ಭಾರತ್ ಮಾತೆ.......
..................................................ಕೌಶೀಲ 
9ನೇ ತರಗತಿ ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
*******************************************

       
     



Ads on article

Advertise in articles 1

advertising articles 2

Advertise under the article