
75 ನೇ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸಂಭ್ರಮದಲ್ಲಿ
Monday, August 16, 2021
Edit
75 ನೇ ಸ್ವಾತಂತ್ರ್ಯ ದಿನಾಚರಣೆಯ
ವಿಶೇಷ ಸಂಭ್ರಮದಲ್ಲಿ
ಜಗಲಿಯ ಮಕ್ಕಳ
ಸೈನಿಕರಿಗೊಂದು ಸಲಾಂ...
-----------------------------------------
ಜೀವಕ್ಕಿಂತ ದೇಶ ಮಿಗಿಲು
ದುಡಿವೆ ಅದಕ್ಕೆ ಹಗಲು ಇರುಳು
ಇಡೀ ದೇಶಕ್ಕೆ ನೀವೆ ಕಾವಲು
ನಿಮ್ಮಜೀವನಕ್ಕೆ ಇದೇ ಸವಾಲು
ಪ್ರತಿಕ್ಷಣ ನಮ್ಮನ್ನು ಕಾಯುವ ನೀವು
ಎಂದಿಗೂ ನಿಮಗೆ ಋಣಿಯಾದೆ ನಾವು
ಸಾವಿಗೂ ಹೆದರದೆ ಇರೋ ನೀವು
ಎಂದಿಗೂ ಮರೆಯಲ್ಲ ನಾವು
ನಿಮ್ಮ ಜೀವನದ ಹಂಗಿಲ್ಲದೆ
ನಮ್ಮ ರಕ್ಷಣೆಗೆ ಬಲಿಯಾದೆ
ದೇಶ ಕಾಯುವ ವೀರಯೋಧರೆ
............................................ಸುಹಾನಿ
9ನೇ ತರಗತಿ
ಸ. ಪ. ಪೂ. ಕಾ. (ಪ್ರೌಢ ಶಾಲೆ) ಸವಣೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**************************************
ನಮ್ಮ ಹೆಮ್ಮೆಯ ಯೋಧರು - ಕವನ
------------------------------------------
ಧೀರ ವೀರ ಶೂರರು
ನಮ್ಮ ನಾಡ ಯೋಧರು
ದೇಶವನ್ನು ಪೊರೆವರು
ಸ್ವಹಿತವನ್ನು ನೋಡರು
ಗಡಿಯ ಕಾಯುತ ಕಷ್ಟ ಪಡುತ
ಮಂಜಿನಲ್ಲಿ ಇರುವರು
ಅಕ್ಕ ತಂಗಿ ಅಪ್ಪ ಅಮ್ಮ
ಬಂಧು ಬಳಗ ಮರೆವರು
ಬೆಟ್ಟ ಗುಡ್ಡ ಕಲ್ಲು ಮುಳ್ಳು
ಎನ್ನದೆ ಮುನ್ನುಗುವರು
ಚಳಿ ಮಳೆ ಬಿಸಿಲು ಧಗೆ
ಎನ್ನದೆ ದಿನವಿಡೀ ದುಡಿವರು
ಪ್ರಾಣವನ್ನೇ ಒತ್ತೆಯಿಟ್ಟು
ವೈರಿಪಡೆಯ ಸೆದೆ ಬಡಿಯುವರು
ನಾಡಿಗಾಗಿ ತಮ್ಮ ಪ್ರಾಣ
ಲೆಕ್ಕಿಸದೇ ದುಡಿಯುವರು
ಊಟ ನಿದ್ರೆ ಸ್ನಾನ ಧ್ಯಾನ
ಎಲ್ಲವನ್ನು ಮರೆವರು
ನನ್ನ ದೇಶ ನನ್ನ ನಾಡು ನನ್ನ ಜನ
ಎಂಬ ಭಾವವ ತಾಳುವರು
ಜನತೆಯೆಲ್ಲ ನೆಮ್ಮದಿಯಿಂದ ಬದುಕಲು ಕಾರಣಕರ್ತರಾದರು
ಅಖಂಡ ದೇಶಪ್ರೇಮವ ದೇಶಕ್ಕೆಲ್ಲ ಸಾರುವರು
ಅಕಾಲಮೃತ್ಯು ಪಾತ್ರರಾದ
ಶತ-ಶತಾದಿ ಹುತಾತ್ಮರು
ದೇಶ ಸೇವೆ ಈಶ ಸೇವೆ
ಎಂದರಿತ ಮಹಾತ್ಮರು
ಪ್ರಾಣವನ್ನು ತೆತ್ತರು
ಸುರಿಸಿ ತಮ್ಮ ನೆತ್ತರು
ಮತ್ತೆ ಮರಳಿ ಬಾರರಿವರು
..............................ಪೂರ್ಣಿಮ ಕೋಟ್ಯಾನ್
10ನೇ ತರಗತಿ
ಹೋಲಿ ರೋಸರಿ ಪ್ರೌಢಶಾಲೆ, ಮೂಡುಬಿದಿರೆ
ಮಂಗಳೂರು ತಾಲ್ಲೂಕು
ದಕ್ಷಿಣಕನ್ನಡ ಜಿಲ್ಲೆ
******************************************
ಸ್ವಾತಂತ್ರ್ಯದಿನಾಚರಣೆ
--------------------------------
ಸ್ವಾತಂತ್ರ್ಯ ದಿನಾಚರಣೆ ಇದು ಒಂದು ರಾಷ್ಟ್ರೀಯ ಹಬ್ಬವಾಗಿದೆ. ಒಂದು ದೇಶದ ಐಕ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬಹಳ ಪ್ರಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಭಾರತದಂತಹ ವೈವಿಧ್ಯತೆಯುಳ್ಳ ರಾಷ್ಟ್ರಗಳಲ್ಲಿ ಏಕತೆಯನ್ನು ತರುವುದು ಇಂತಹ ಹಬ್ಬಗಳ ಮೂಲಕ ಸಾಧ್ಯವಿದೆ. ಇಡೀ ರಾಷ್ಟ್ರದ ಜನರೆಲ್ಲರೂ ಯಾವುದೇ ಭೇದ - ಭಾವವಿಲ್ಲದೆ ಜಾತಿ,ಧರ್ಮ, ಪ್ರಾದೇಶಿಕ ಭಿನ್ನತೆಯನ್ನು ತೊರೆದು ಒಟ್ಟಾಗಿ ಆಚರಿಸುವ ಹಬ್ಬವಾಗಿದೆ.
ಭಾರತ ಸುಮಾರು ಎರಡುನೂರು ವರ್ಷಗಳ ಕಾಲ ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿತು. ವ್ಯಾಪಾರದ ಉದ್ದೇಶದಿಂದ ಬಂದ ಬ್ರಿಟೀಷರು ಭಾರತೀಯ ಅರಸರುಗಳ ದೌರ್ಬಲ್ಯಗಳನ್ನು ಉಪಯೋಗಿಸಿಕೊಂಡು ಭಾರತ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದರು. ಭಾರತೀಯರಿಗೆ ಸ್ವಾತಂತ್ರ್ಯ ಎನ್ನುವುದೇ ಇರಲಿಲ್ಲ. ಹಾಗಾಗಿ ಭಾರತೀಯರೆಲ್ಲರೂ ಒಟ್ಟಾಗಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ರಣ ಕಹಳೆಯನ್ನು ಊದಿ ಕೊನೆಗೆ 1947ನೇ ಆಗಸ್ಟ್ 15ರಂದು ಸ್ವಾತಂತ್ರ್ಯವನ್ನು ಪಡೆದರು. ಆ ದಿನವನ್ನು ಪ್ರತಿವರ್ಷ ಭಾರತೀಯರೆಲ್ಲರೂ ಒಟ್ಟಾಗಿ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಿ ರಾಷ್ಟ್ರೀಯ ಐಕ್ಯತೆಯನ್ನು ಮೆರೆಯುತ್ತಾರೆ.
ಅಂದು ಶಾಲಾ- ಕಾಲೇಜು ಕಛೇರಿಗಳಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಿ ಧೇಶಭಕ್ತಿಯನ್ನು ಸಾರುವ ಕಾರ್ಯಕ್ರಮಗಳನ್ನು ಆಚರಿಸಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ.
.............................................ದಿವ್ಯಶ್ರೀ
ಪ್ರಥಮ ಪಿಯುಸಿ
ಪದವಿ ಪೂರ್ವ ಕಾಲೇಜು ಮುಂಡಾಜೆ
ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
***************************************
ಭಾರತ
------------------------
ನನ್ನ ದೇಶ ಭಾರತ
ಭವ್ಯ ಭೂಮಿ ಭಾರತ
ಸ್ವತಂತ್ರ ದೇಶ ಭಾರತ
ನಮ್ಮ ದೇಶ ಭಾರತ
ಇಲ್ಲಿಯ ಗಾಳಿ ನಮ್ಮದು
ಇಲ್ಲಿಯ ಉಪ್ಪು ನಮ್ಮದು
ಇಲ್ಲಿಯ ಎಲ್ಲವೂ ನಮ್ಮದು
ಅಮೃತ ನದಿಯು ಕಾವೇರಿ
ನಮ್ಮ ಉಸಿರು ಗಂಗಾ ರಿ
ರುಚಿಯಾಗಿ ಹರಿಯುತ್ತಿರುವ
ತುಂಗಭಧ್ರ ನಮ್ಮದು
ಬ್ರಿಟಿಷರನ್ನು ಓಡಿಸೋಣ
ಹೋರಾಟಗಾರರನ್ನು ಸ್ಮರಿಸೋಣ
ನಾವೆಲ್ಲ ಒಂದೇ
ವಿವಿಧತೆಯಲ್ಲಿ ಏಕತೆ
ನನ್ನ ದೇಶ ಭಾರತ
ನಮ್ಮ ದೇಶ ಭಾರತ
ಕೇಸರಿ ಬಿಳಿ ಹಸಿರು
ಹೊಂದಿರುವ ನಮ್ಮ ಭಾರತ.
................................................ಲಿಜಿತ
9 ನೇ ತರಗತಿ
ಸರಕಾರಿ ಪ್ರೌಢಶಾಲೆ ಮುರುವ ಮಾಣಿಲ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*****************************************
ಸ್ವಾತಂತ್ರ್ಯ ದಿನದ ಅನುಭವ
----------------------------------------------
ಆಗಸ್ಟ್ 15 ದೇಶದಲ್ಲಿ ಎಲ್ಲ ಕಡೆ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯುವುದು. ಆದರೆ ಈ ಬಾರಿ ಈ ಕೊರೋನದ ಕಾರಣದಿಂದ ನಾವು ಅದರಿಂದ ವಂಚಿತರಾಗಿದ್ದೇವೆ. ಸ್ವಾತಂತ್ರ್ಯ ದಿನದ ಸಂಧರ್ಭದಲ್ಲಿ ನಮ್ಮ ಶಾಲೆಯಲ್ಲಿಯೂ ಕೂಡ ವಿಜೃಂಭಣೆಯ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಧ್ವಜವಂದನೆ, ರಾಷ್ಟ್ರಗೀತೆ, ಮೊದಲಾದ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕೆಲವು ಗಣ್ಯ ವ್ಯಕ್ತಿಗಳ ಹಿತವಚನ ಮಾತುಗಳು ನಮಗೆ ಪ್ರೇರಣೆಯಗುತ್ತಿತು, ಅಷ್ಟೇ ಅಲ್ಲದೆ ನಮಗೆ ಸಿಹಿಯನ್ನು ಕೂಡ ಹಂಚುತ್ತಿದ್ದರು. ಈ ವರ್ಷ ಅಮೃತ ಮಹೋತ್ಸವ ಆಗಿದ್ದರಿಂದ ಇನ್ನೂ ವಿಜೃಂಭಣೆಯಿಂದ ನಡೆಯಬೇಕಿತ್ತು. ಆದರೆ ಈ ಸಮಯದಲ್ಲಿ ಕೇವಲ ಹಬ್ಬದಂತೆ ಸಂತೋಷಪಡದೆ ದೇಶವನ್ನು ಮುಂದೆ ತರುವಲ್ಲಿ ನಮ್ಮ ಸಹಾಯ, ಸಹಕಾರ ಮತ್ತು ಕಾರ್ಯಗಳ ಕಡೆಗೆ ಚಿಂತಿಸಬೇಕಾಗಿದೆ. ಅನೇಕ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ. ಅವನ್ನೆಲ್ಲ ಪರಿಹರಿಸುವ ಮಾರ್ಗಗಳನ್ನು ಕಂಡು ಹಿಡಿಯಬೇಕು. ಈ ಕೊರೋನ ಎಂಬ ಮಹಾಮಾರಿ ದೂರವಾಗಿ ಮುಂದಿನ ವರ್ಷವಾದರೂ ನಾವು ವಿಜೃಂಭಣೆಯಿಂದ ಆಚರಿಸಬೇಕಾದರೆ ನಾವು ಮನೆಯಲ್ಲಿಯೇ ಇರೋಣ ಸುರಕ್ಷಿತವಾಗಿರೋಣ.
....................................................ನಿಭಾ
8ನೇ ತರಗತಿ
ಸ. ಹಿ. ಪ್ರಾ. ಶಾಲೆ. ನೇರಳಕಟ್ಟೆ
ಬಂಟ್ಟಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**************************************
ನನ್ನ ದೇಶ ಭಾರತ
-----------------------------------
ನನ್ನ ದೇಶ ಭಾರತ
ವೀರ ಯೋಧರು ಕಾಯುತ
ಮಳೆ ಚಳಿ ಬಿಸಿಲು ಎನ್ನದೆ
ಭಾರತಾಂಬೆಯೆ ತಾಯಿಯೆನುತ ..
ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ
ಉಳಾಲದ ರಾಣಿ ಅಬ್ಬಕ್ಕ
ಹೋರಾಡಿದರು ಈ ದೇಶಕ್ಕಾಗಿ
ಪ್ರಾಣವನ್ನು ತೆತ್ತರು ಈ ಮಣ್ಣಿಗಾಗಿ
ಜಾತಿ ಕುಲ ಧರ್ಮ ಮತ
ಎಲ್ಲಾ ಒಂದೇ ಎಂದು ನಾವು ಜೀವಿಸುತ
ಭೇದ ಭಾವ ಯಾವುದೆ ಇಲ್ಲದೆ
ಒಟ್ಟಿಗೆ ನಾವು ಬಾಳುತ
ನನ್ನ ದೇಶ ನನ್ನ ಹೆಮ್ಮೆ
ಎಂದು ನಾವು ಹೇಳುತ
ಯಾವುದೆ ಧ್ವೇಷ ಭಾವನೆ ಇಲ್ಲದೆ
......................................................ರೂಪಶ್ರೀ
9ನೇ ತರಗತಿ
ಸರಕಾರಿ ಪ್ರೌಡಶಾಲೆ ಮುರುವ ಮಾಣಿಲ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
************************************