-->
ನಾನೂ ಒಬ್ಬ ಸೈನಿಕ ಸಂಚಿಕೆ - 3

ನಾನೂ ಒಬ್ಬ ಸೈನಿಕ ಸಂಚಿಕೆ - 3

ಜಗಲಿಯ ಮಕ್ಕಳ 
ಮನದ ಮಾತು 
ನಾನೂ ಒಬ್ಬ ಸೈನಿಕ 
ಸಂಚಿಕೆ -3



              ನಾನೂ ಒಬ್ಬ ಸೈನಿಕ - ಕೃತಿ 
--------------------------------------------
                 ಪ್ರಕೃತಿ ಮನುಷ್ಯನ ಜೀವನಕ್ಕೆ ಏನಿಲ್ಲ ಕೊಟ್ಟಿಲ್ಲ ....? ಆದರೂ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ಮಾಡುತ್ತಾ ಬಂದಿದ್ದಾನೆ. ಇದು ಹೀಗೆ ಮುಂದುವರಿದರೆ ಮನುಕುಲದ ಸರ್ವನಾಶ ಖಂಡಿತ. ಇದು ನಡೆಯಬಾರದು ಎಂದರೆ ಇಂದಿನಿಂದಲೇ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಇದಕ್ಕಾಗಿ ನಾವು ನಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತುವ ಅಗತ್ಯವಿಲ್ಲ. ನಮ್ಮ ದೈನಂದಿನ ಜೀವನದ ಚಟುವಟಿಕೆಗಳಲ್ಲಿಯೇ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಪರಿಸರದ ಉಳಿವಿಗೆ ಸಹಾಯಕಾರಿಯಾಗುತ್ತದೆ.
 ನಮಗೆ ಒಂದು ವಸ್ತು ಅಗತ್ಯವಿಲ್ಲದಿದ್ದರೆ ಅಗತ್ಯ ಇರುವವರಿಗೆ ನೀಡಬೇಕು. ಎಸೆಯುವ ಸಂಸ್ಕೃತಿಯ ಬದಲು ರಿಪೇರಿ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು. ಸಭೆ-ಸಮಾರಂಭಗಳಲ್ಲಿ ಸುಲಭದಲ್ಲಿ ಮಣ್ಣಾಗಿ ಹೋಗುವ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು. ಪ್ರತಿ ಮನೆಯಲ್ಲಿಯೂ ಜೈವಿಕ ತ್ಯಾಜ್ಯ ಸಂಸ್ಕರಣೆ ಆಗಬೇಕು. ಈ ಮೂಲಕ ಪ್ರತಿಮನೆಯಲ್ಲೂ ಜೈವಿಕ ಇಂಧನ ಬಳಕೆಯಾಗಬೇಕು. ಮನೆಮನೆಗಳಲ್ಲಿ ಸೋಲಾರ್ ವಿದ್ಯುತ್ ದೀಪ ಅಳವಡಿಕೆ ಆಗಬೇಕು. ಬರಿದಾಗದ ಇಂಧನ ಮೂಲಗಳನ್ನು ಹೆಚ್ಚಾಗಿ ಬಳಸುವಂತೆ ಜನರನ್ನು ಪ್ರೇರೇಪಿಸಬೇಕು. ಇವೆಲ್ಲದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಾವೆಲ್ಲಾ ಸೈನಿಕರಂತೆ ಹೋರಾಡಬೇಕು. ಅದರಲ್ಲಿ ನಾನೂ ಒಬ್ಬ ಸೈನಿಕಳಾಗಿರಲು ಇಷ್ಟ ಪಡುತ್ತೇನೆ. ಆಗ ಮಾತ್ರ ನಾವು ಪರಿಸರವನ್ನು ಉಳಿಸಬಹುದು.
.........................................................ಕೃತಿ 
9 ನೇ ತರಗತಿ
ಸರಕಾರಿ ಪ್ರೌಢ ಶಾಲೆ ಕೊಡ್ಮಾಣ್
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


           ಸೈನಿಕ ರಾಷ್ಟ್ರದ ರಕ್ಷಕ - ಸಾತ್ವಿ
--------------------------------------------------
          ಸೈನಿಕ ದೇಶವನ್ನು ಶತ್ರುಗಳಿಂದ ರಕ್ಷಿಸುತ್ತಾನೆ. ಸೈನಿಕನ ಕರ್ತವ್ಯವು ತುಂಬಾ ಕಠಿಣ ಮತ್ತು ಅಪಾಯಕಾರಿ. ತನ್ನ ರಾಷ್ಟ್ರದ ಸೇವೆ ಮಾಡಲು ಸದಾ ಸಿದ್ಧನಿರುವವನು. ಅವನ ಹಾಗೆ ನಾನು ಆಗಬೇಕು. 
ನನ್ನ ಕೈಲಾದ ಸೇವೆ ನನ್ನ ಊರಿನಲ್ಲಿ ಸಲ್ಲಿಸಬೇಕು.   ಸೈನಿಕ ತನ್ನ ಜೀವನದ ಬಗ್ಗೆ ಚಿಂತಿಸುವುದಿಲ್ಲ. ದೇಶದ ರಕ್ಷಣೆ ಅಂದರೆ ಪ್ರಕೃತಿಯನ್ನು ಉಳಿಸುವುದು ,  ನೀರನ್ನು ಉಳಿಸುವುದು ,  ಯಾರಿಗೂ ಅನ್ಯಾಯ ಮಾಡದೆ ಬದುಕುವುದು ,   ದೇಶವನ್ನು ತನ್ನ ಮನೆಯಂತೆ ಪ್ರೀತಿಸುವುದು , ಇದು  ನನ್ನ  ಗುರಿಯಾಗಿರುತ್ತದೆ. 
ಹಾಗಾಗಿ ನಾನೂ ಒಬ್ಬ ಸೈನಿಕ.
.......................................ಸಾತ್ವಿ 7 ನೇ ತರಗತಿ
ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆ.
ಕಳಿಯೂರು  , ವರ್ಕಾಡಿ  , ಮಂಜೇಶ್ವರ 
ಕಾಸರಗೋಡು ಜಿಲ್ಲೆ
****************************************



ಸೈನಿಕನ ಕಾಳಜಿಯ ಮಾತು : ಸ್ಮೃತಿ.ಯಂ
---------------------------------------------
                ಸೈನಿಕ ತನ್ನ ಕರ್ತವ್ಯಗಳನ್ನು ನಿರ್ವಹಿಸುತ್ತಿರುವುದರಿಂದ ಒಂದು ದೇಶ ಶಾಂತಿಯುತವಾಗಿ ನಿದ್ರಿಸುತ್ತದೆ.  ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ತನ್ನ ತಾಯ್ನಾಡಿನ ಮೇಲಿನ ಪ್ರೀತಿಯಿಂದ ಮತ್ತು ಅದನ್ನು ರಕ್ಷಿಸಲು ಸೇನೆಗೆ ಸೇರುತ್ತಾನೆ. ತಾನು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿದಿದ್ದರೂ, ತಮ್ಮ ದೇಶಕ್ಕಾಗಿ ಸೇವೆ ಮಾಡುತ್ತಾರೆ.
ದೇಶಕ್ಕಾಗಿ ತಮ್ಮ ಪ್ರಾಣವನ್ನು ನೀಡಬೇಕಾದರೂ ಸಂತೋಷದಿಂದ ಮಾಡಲು ಸಿದ್ಧರಿದ್ದಾರೆ. ಗಡಿಯನ್ನು ರಕ್ಷಿಸುವುದರ ಜೊತೆಗೆ, ತುರ್ತು ಸಂದರ್ಭಗಳಲ್ಲಿ ಸೈನಿಕರು ಯಾವಾಗಲೂ ಸಹಾಯ ಮಾಡುತ್ತಾರೆ. ನಮ್ಮ ಸೈನಿಕರು ನಮ್ಮ ದೇಶದ ಹೆಮ್ಮೆ. ನಾನೂ ನನ್ನೂರಿನಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಸೈನಿಕನಾಗುತ್ತೇನೆ. ನಾನೂ ಒಬ್ಬ ಸೈನಿಕ .
.............................................. ಸ್ಮೃತಿ.ಯಂ
10 ನೇ ತರಗತಿ 
ಶಾರದಾ ಗಣಪತಿ ವಿದ್ಯಾಕೇಂದ್ರ 
ಪುಣ್ಯಕೋಟಿ ನಗರ ಕೈರಂಗಳ. 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.  
****************************************
        

        ನಾನೂ ಒಬ್ಬ ಸೈನಿಕ : ಜಿತೇಶ್. ಕೆ
--------------------------------------------
               ದೇಶಕ್ಕಾಗಿ ತನ್ನ ಪ್ರಾಣವನ್ನೇ ಮುಡಿಪಾಗಿರಿಸುವ ಸೈನಿಕನಾಗಲು ನಾನು ಇಚ್ಛಿಸುತ್ತೇನೆ. ನಿಷ್ಠೆಯಿಂದ ಈ ಕೆಲಸವನ್ನು ಮಾಡುತ್ತೇನೆ. ಪ್ರಾಮಾಣಿಕ, ಧೈರ್ಯವಂತ ಸೈನಿಕಾಗಿ ನನ್ನ ದೇಶವನ್ನು ಕಾಪಾಡುವೆ. ನನ್ನ ತಾಯಿ ಮತ್ತು ತಾಯ್ನಾಡು ನನಗೆ ಸ್ವರ್ಗಕಿಂತಲೂ ಪವಿತ್ರವಾದುದು . ನನ್ನ ಹೃದಯಾಳದಿಂದ ಇಬ್ಬರನ್ನು ಆರಾಧಿಸುತ್ತೇನೆ. ಒಬ್ಬ ಆದರ್ಶ ಸೈನಿಕನಾಗಿ ನನ್ನ ಕರ್ತವ್ಯವು ಗಡಿ ಪ್ರದೇಶಕ್ಕೆ ಸೀಮಿತವಲ್ಲದೆ ದೇಶವಾಸಿಗಳ ಕಡೆಗೂ ಇರುತ್ತದೆ ಅಂದರೆ ಪ್ರವಾಹ, ಭೂಕಂಪ ಅಥವಾ ಇನ್ನಾವುದೇ ಪ್ರಾಕೃತಿಕ ವಿಕೋಪದ ಸಮಯದಲ್ಲಿ ಸಂತ್ರಸ್ತರ ಬಳಿಗೆ ಧಾವಿಸುವುದು. ಈ ದೇಶಕ್ಕೆ ವಿದೇಯನಾಗಿರುತ್ತೇನೆ. ನಾನು ಈ ದೇಶಕ್ಕೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಬಹುದು ಎಂದು ನಾನು ಭಾವಿಸುತ್ತೇನೆ. ನಾನೂ ಒಬ್ಬ ಸೈನಿಕ.
............................................ಜಿತೇಶ್. ಕೆ
8ನೇ ತರಗತಿ 
ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ರಾಮಕುಂಜ 
ಕಡಬ ತಾಲೂಕು , ದಕ್ಷಿಣ ಕನ್ನಡಜಿಲ್ಲೆ
*****************************************

         
       ನಾನೂ ಒಬ್ಬ ಸೈನಿಕ : ಫಾತಿಮತ್ ಶಿಫಾನ
-------------------------------------------------
       ನಾನು ಒಬ್ಬಳು ಸೈನಿಕಳಾಗಿ ದೇಶವನ್ನು ಶತ್ರುಗಳಿಂದ ರಕ್ಷಿಸುತ್ತೇನೆ. ಈ ದೇಶದ ಶಾಂತಿ ನೆಮ್ಮದಿ ಕಾಪಾಡುವ ಜವಾಬ್ದಾರಿ ನನ್ನದು. ನಾನು ನನ್ನ ಜೀವನದ ಬಗ್ಗೆ ಚಿಂತಿಸುವುದಿಲ್ಲ. ನಾವೆಲ್ಲಾ ಜಾತಿಮತ ಬೇಧ ಭಾವ ಇಲ್ಲದೆ ಭಾರತಾಂಬೆಯ ಮಕ್ಕಳಾಗಿರೋಣ. ಗಂಡು-ಹೆಣ್ಣು ಎಂಬ ಭೇದಭಾವವಿಲ್ಲದೆ ಸಮಾನರಾಗಿರೋಣ. ನನ್ನ ಮೊದಲ ಗುರಿ ಭೂಮಿಯನ್ನು ನಾಳೆಗಾಗಿ ಉಳಿಸುವ ಜವಾಬ್ದಾರಿ. ಈ ನೆಲ ಜಲ ಪರಿಸರ ಎಲ್ಲವನ್ನು ಕಾಯುವ ಸೈನಿಕರಾಗೋಣ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದೊಂದಿಗೆ ನಾವೆಲ್ಲರೂ ಜೋರಾಗಿ ಹೇಳೋಣ ನಾನು ಒಬ್ಬ ಸೈನಿಕ. ಬನ್ನೀ ಒಗ್ಗಟ್ಟಾಗಿ ಹೇಳೋಣ ನಾನು ಒಬ್ಬ ಸೈನಿಕ.
.....….............................ಫಾತಿಮತ್ ಶಿಫಾನ
9ನೇ ತರಗತಿ
ಸರ್ಕಾರಿ ಪ್ರೌಢ ಶಾಲೆ ನಾರ್ಶ ಮೈದಾನ. 
ಕೊಳ್ನಾಡು ಗ್ರಾಮ 
ಬಂಟ್ಟಾಳ ತಾಲೂಕು , ದ.ಕ ಜಿಲ್ಲೆ
******************************************

 
          ನಾನೂ ಒಬ್ಬ ಸೈನಿಕ : ರಿಶಲ್ ಲಸ್ರಾದೊ
------------------------------------------------
            ಮಳೆ ಬಿಸಿಲೆನ್ನದೆ ಹೊಲದಲ್ಲಿ ದುಡಿದು ಜನರಿಗೆ ಅನ್ನ ನೀಡುವ ರೈತನಂತೆ, ಜೀವನವನ್ನೇ ಪಣವಾಗಿಟ್ಟು ದೇಶ ಕಾಯುವ ಸೈನಿಕರು ಅತ್ಯಂತ ಶ್ರೇಷ್ಠ ವ್ಯಕ್ತಿಗಳು. ಈ ವರ್ಷ ನಾವು ಸ್ವಾತಂತ್ರ್ಯೋತ್ಸವನ್ನು ಆಚರಿಸುತ್ತಿದ್ದೇವೆಯಾದರೆ ನಮ್ಮ ಈ ದೇಶದ ವೀರ ಯೋಧರಿಂದ ಸಾಧ್ಯವಾಗಿದೆ. ಸೈನಿಕರು ನಮ್ಮ ಗಡಿ ಪ್ರದೇಶವನ್ನು ಕಾಯುತ್ತಿರದಿದ್ದರೆ ನಮ್ಮ ಭಾರತ ದೇಶವು ಬೇರೆ ದೇಶದವರ ಹತೋಟಿಯಲ್ಲಿರುತ್ತಿತ್ತು. ದೇಶದ ಗಡಿಯಲ್ಲಿ ಕಾಯುತ್ತಿರುವ ಸೈನಿಕರ ಜೀವನ ಚಕ್ರವನ್ನು ಮಕ್ಕಳಿಗೆ ಅರಿವು ಮೂಡಿಸಬೇಕು. ಅವರು ಮಾಡುವ ಒಳ್ಳೆಯ ಕೆಲಸಗಳಿಗೆ ಸರಕಾರವು ಗೌರವ, ಪ್ರೋತ್ಸಾಹ ಕೊಡಬೇಕು. ನಮ್ಮ ಮಕ್ಕಳು ಡಾಕ್ಟರ್,ಇಂಜಿನಿಯರ್ ಆಗಬೇಕು ಅನ್ನುವ ಬದಲು ನಮ್ಮ ಮಕ್ಕಳು ರೈತ, ಸೈನಿಕ ಆಗಬೇಕು ಎಂಬ ಹಂಬಲ ಎಲ್ಲರಲ್ಲಿ ಇರಬೇಕು.
...................................ರಿಶಲ್ ಲಸ್ರಾದೊ
 8 ನೇ ತರಗತಿ
 ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 
 ಚೆನ್ನೈತೋಡಿ ,   ವಾಮದಪದವು ಅಂಚೆ.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
***************************************


           ನಾನೂ ಒಬ್ಬ ಸೈನಿಕ : ದಿವ್ಯ
 -------------------------------------------------
          ಹೌದು ಭಾರತ ದೇಶವನ್ನು ಕಾಯುವ ಸೈನಿಕರು ನಾವು. ನಮ್ಮ ದೇಶವು ಸತ್ಯ, ಶಾಂತಿ, ಅಹಿಂಸೆಯ ದೇಶ. ನಾವು ಈ ರೀತಿ ಒಳ್ಳೆಯ ಸೈನಿಕರಾಗಿದ್ದರೆ ನಮ್ಮ ದೇಶದ ಮುಂದಿನ ಪೀಳಿಗೆಯು ಹೀಗೆಯೆ ಬೆಳೆಯುತ್ತದೆ . ಸೈನಿಕ ಎಂದರೆ ಧೈರ್ಯ ಮತ್ತು ಗೌರವವಿರುತ್ತದೆ. ನಾನು ಸ್ವಚ್ಛತೆಯ ಸೈನಿಕ, ಪರಿಸರ ಸಂರಕ್ಷಣೆಯ ಸೈನಿಕ ಹಾಗಾಗಿ ನಾನು ಸೈನಿಕ ಎಂದುಕೊಳ್ಳಲು ಹೆಮ್ಮೆಯನಿಸುತ್ತದೆ. ನಾವೆಲ್ಲರೂ ನಮ್ಮ ದೇಶದ ಸಂಸ್ಕೃತಿಯನ್ನು ಬೆಳೆಸೋಣ.  
 .............................................. ದಿವ್ಯ
10 ನೇ ತರಗತಿ
ವಿಠ್ಠಲ ಬಾಲಿಕಾ ಪದವಿ ಪೂರ್ವ ಪ್ರೌಡ ಶಾಲೆ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
******************************************
                

              ಭಾರತದ ಸೈನಿಕರು : ಶರಣ್ಯ ಬಿ 
         --------------------------------------------------
           ಭಾರತದ ಸೈನಿಕರು ಎಂದು ಕೇಳಿದ ಕೂಡಲೆ ನಮಗೆ ದೇಶಪ್ರೇಮ ಉಕ್ಕಿ ಬರುತ್ತದೆ. ಸೈನಿಕರು ಎಂದರೆ ಮನಸ್ಸಿಗೆ ಏನೋ ಹೆಮ್ಮೆಯ ಭಾವನೆ ಉಂಟಾಗುತ್ತದೆ. ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಭಾರತಾಂಬೆಯ ರಕ್ಷಣೆಯೊಂದೇ ತಮ್ಮ ಧ್ಯೇಯವಾಗಿಸಿಕೊಂಡು ಅವರು ನಿದ್ರಿಸದೆ ನಮ್ಮನ್ನು ನಿಶ್ಚಿಂತೆಯಿಂದ ನಿದ್ರಿಸುವ ಸೈನಿಕರನ್ನು ಪಡೆದ ನಾವೇ ಧನ್ಯರು.....          ..................................................ಶರಣ್ಯ ಬಿ       
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮುಂಡಾಜೆ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*****************************************

Ads on article

Advertise in articles 1

advertising articles 2

Advertise under the article