ನನ್ನ ಸುತ್ತಮುತ್ತ - ಕವನ
Saturday, July 3, 2021
Edit
ಯಶಶ್ವಿ 10ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ನನ್ನ ಸುತ್ತಮುತ್ತ - ಕವನ
ನಟ್ಟಡವಿಯಲಿ ಇರುವ
ಪುಟ್ಟದೊಂದು ನನ್ನ ಮನೆ,
ಸುತ್ತಮುತ್ತಲೂ ಹಚ್ಚ ಹಸಿರಾಗಿವೆ.
ಪಕ್ಷಿಗಳ ಚಿಲಿಪಿಲಿ ಕಲರವ
ತಾಳ ಹಾಕಿ ಹಾಡುವಂತಿದೆ,
ಈ ಕಲರವಕೆ ತಂಗಾಳಿ ಬೀಸುತಿದೆ....!!
ಈ ತಂಗಾಳಿಗೆ
ಮನಸ್ಸು ಉಲ್ಲಾಸವಾಗಿದೆ.
ಎತ್ತ ನೋಡಿದರೂ ಹಸಿರು.....!!
ಇದೇ ನನ್ನ ಉಸಿರು....
ಖುಷಿಯಾಗುತಿದೆ ನೋಡಲು
ಪರಿಸರದ ಬಸಿರು...!!!
ಇದೇ ನನ್ನ
ಸುತ್ತಮುತ್ತಲಿರುವ ಪರಿಸರ,
ಸುಂದರವಾದ ಪರಿಸರ....!!!!
.....................ಯಶಶ್ವಿ 10ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ