-->
ನಮ್ಮ ಶಾಲೆ ಬಡಗನ್ನೂರು - ಪದ್ಯ

ನಮ್ಮ ಶಾಲೆ ಬಡಗನ್ನೂರು - ಪದ್ಯ

ವಿಸ್ಮಿತ ಎ
5 ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಬಡಗನ್ನೂರು.
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

     ನಮ್ಮ ಶಾಲೆ ಬಡಗನ್ನೂರು - ಪದ್ಯ
***********************************
ಬಡಗನ್ನೂರು ನಮ್ಮ ಶಾಲೆ ಎನುತ ಹಾಡಿ ಹೊಗಳುವ
ನಾವೆಲ್ಲರು ಧನ್ಯರೆಂದು ಲೋಕಕೆಲ್ಲ ಸಾರುವ|
ಇಲ್ಲಿ ಕಲಿತ ಮಕ್ಕಳೆಲ್ಲ ಎಂದು ಪುಣ್ಯವಂತರು
ಕಲಿಸಿದಂತ ಗುರುಗಳಿಗೆ ನಾವು ಸದಾ ಋಣಿಗಳು||೧||

ಶತಮಾನಗಳಿಂದ ಬೆಳೆದುಬಂದ ವಿದ್ಯಾ ದೇಗುಲ
ನಮ್ಮ ಹಿರಿಯರೆಲ್ಲ ಕಲಿತು ಬೆಳೆದಂತ ಶಾಲೆಯು|
ವಿದ್ಯಾಭಿಮಾನಿಗಳ ಬೀಡು ಇದು ಬಡಗನ್ನೂರು
ಇಲ್ಲಿ ಕಲಿತ ವಿದ್ಯೆಯು ಎಂದು ಶಾಶ್ವತ||೨||

ಸ್ನೇಹಿತನು ಕೂಡಿ ಆಡುವ ಶಾಲೆಯಿದು ಬಡಗನ್ನೂರು
ಖುಷಿ ಹಂಚುವ ದೇಗುಲವು ನಮ್ಮ ಶಾಲೆಯು|
ಪ್ರಕೃತಿದತ್ತವಾದ ಬಡಗನ್ನೂರು ಶಾಲೆಯು
ನೀತಿ ಪಾಠಗಳನು ಹೇಳಿ ಕೊಡುವ ಶಾಲೆಯು||೩||

ಹಲವರಿಂದ ಮಾನ್ಯತೆಯನು ಪಡೆದ ಶಾಲೆ ಬಡಗನ್ನೂರು
ಪಠ್ಯ ಹಾಗು ಪಠ್ಯೇತರದಲ್ಲು ಹೆಸರುವಾಸಿಯು|
ನಮ್ಮ ಶಾಲೆ ನಮ್ಮ ಹೆಮ್ಮೆ ಎಂದು ಬೀಗುವಾ
ನಮ್ಮ ಶಾಲೆಯನ್ನು ಬೆಳಗುವಲ್ಲಿ ಒಂದು ಗೂಡುವ||೪||

.............................................ವಿಸ್ಮಿತ ಎ
5 ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಬಡಗನ್ನೂರು.
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

********************************************

Ads on article

Advertise in articles 1

advertising articles 2

Advertise under the article