-->
ಚುಟುಕುಗಳು

ಚುಟುಕುಗಳು

ಆದ್ಯಂತ್ ಅಡೂರು 
8ನೇ ತರಗತಿ 
ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ
ಅಡೂರು, ಕಾಸರಗೋಡು ಜಿಲ್ಲೆ


                          ಚುಟುಕುಗಳು
 ******************************************

1. ಎಳನೀರು

ಕುಡಿಯಲು ಬೇಕು ಎಳನೀರು 
ಅದರೊಳಗಿರುವುದು ಸಿಹಿ ನೀರು 
ತೆಂಗಲ್ಲಿರುವುದು ಇದರ ಗುಂಪು 
ಆರೋಗ್ಯಕ್ಕೆ ಇದು ಬಹಳ ತಂಪು


2. ಕಾಗೆ

ಹಾರುತ ಬಂದಿತು ಕಾಗೆಯು ಕೂಗುತ 
ಕಾಳನು ಕಂಡು ಬಳಗವ ಕರೆಯುತ
ಹಂಚಿ ತಿನ್ನುವ ನೀತಿಯ ಕಲಿಸುತ
ಒಗ್ಗಟ್ಟಿನ ಜೀವನವನು ಸಾರುತ


3. ಮಳೆಗಾಲ

ಈಗ ಬಂದಿದೆ ಮಳೆಗಾಲ
ಜಾಗ್ರತೆಯಿದ್ದರೆ ಉಳಿಗಾಲ 
ಕಚ್ಚಲು ಬಿಡದಿರಿ ಸೊಳ್ಳೆಯನ್ನು
ತರುವುದು ಬಗೆಬಗೆ ರೋಗವನ್ನು


4.ಉಪ್ಪಿನಕಾಯಿ 

ಊಟಕ್ಕೆ ಬೇಕು ಉಪ್ಪಿನಕಾಯಿ 
ಮಾಡುತ್ತಾರೆ ನನ್ನಯ ತಾಯಿ 
ಸೌತೆ, ಲಿಂಬೆ, ಮಾವಿನ ಕಾಯಿ
ತಿನ್ನಲು ಖಾರ ನನ್ನಯ ಬಾಯಿ


5. ಪುಸ್ತಕ 

ಪುಸ್ತಕ ನಮಗೆ ಬೇಕೇ ಬೇಕು 
ಶಾಲೆಯ ಕಲಿಕೆಗೆ ಇರಲೇಬೇಕು 
ಹಿರಿಯರ ಜೀವನ ತಿಳಿಸಲು ಬೇಕು
ನೀತಿ ಕಥೆಯನು ಕಲಿಯಲು ಬೇಕು 

.............................ಆದ್ಯಂತ್ ಅಡೂರು 
8ನೇ ತರಗತಿ 
ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ
ಅಡೂರು, ಕಾಸರಗೋಡು ಜಿಲ್ಲೆ

**********************************************

Ads on article

Advertise in articles 1

advertising articles 2

Advertise under the article