ಅಕ್ಕನ ಪತ್ರಕ್ಕೆ ಮಕ್ಕಳ ಉತ್ತರ - 2
Saturday, July 24, 2021
Edit
ಮಕ್ಕಳ ಜಗಲಿಯಲ್ಲಿ
ಅಕ್ಕನ ಪತ್ರಕ್ಕೆ
ಮಕ್ಕಳ ಉತ್ತರ - 2
ಅಕ್ಕನಿಗೊಂದು ಪತ್ರ......
ಹೇಗಿದ್ದೀರಿ ಅಕ್ಕಾ...? ಇಲ್ಲಿ ಭಾರೀ ಮಳೆ. ನಾವಿಲ್ಲಿ ಕ್ಷೇಮ.
ನಾನು ಕೂಡ ಅಮ್ಮನಿಗೆ ಸಹಾಯ ಮಾಡುವೆ, ಅಮ್ಮ ಕಸ ಗುಡಿಸಲು ಹೇಳುವಾಗ ಗುಡಿಸುತ್ತೇನೆ. ಅಮ್ಮ ಮೊನ್ನೆ ಬಿದ್ದು ನಡೆಯಲಿಕ್ಕೆ ಕಷ್ಟವಾದಾಗ ಕೈ ಹಿಡಿದು ನಡೆಸುವಾಗ ತುಂಬಾ ಬೇಜಾರಾಯಿತು. ನನ್ನ ಅಜ್ಜಿ ನನಗೆ ಪೇಟೆಗೆ ಹೋದಾಗ ಗೋಳಿಬಜೆ ತಂದು ಕೊಡುವುದು ನನಗೆ ತುಂಬಾ ಇಷ್ಟ. ಹೀಗೆ ಮುಂದೆಯೂ ಸಹಾಯ ಮಾಡುವೆ ಅಕ್ಕಾ.
ದ. ಕ. ಜಿ. ಪಂ.ಉ. ಹಿ ಪ್ರಾ. ಶಾಲೆ .ಕಾವು. ಪುತ್ತೂರು ತಾಲೂಕು. ದ. ಕ
********************************************
ಅಕ್ಕನ ಪತ್ರ -2
ಪ್ರೀತಿಯ ಅಕ್ಕ,
ಅಮ್ಮ ಪುಸ್ತಕದಲ್ಲಿ ಬರೆದರು . ನಾನು ಓದಲು ಪ್ರಯತ್ನಿಸಿದೆ, "ಅರೇ! ಪದಗಳನ್ನು ಓದುತ್ತಿದ್ದೇನೆ "
ಹೌದು ನನ್ನಜ್ಜಿಯನ್ನು ನೋಡಿದೆ, ಯಾವಾಗಲು ಹುಷಾರಿಲ್ಲದ ನನ್ನ ಅಕ್ಕನನ್ನು
ನೋಡಿಕೊಳ್ಳುತ್ತಾರೆ, ಪ್ರೀತಿಸುತ್ತಾರೆ, ಕಥೆಯನ್ನು ಹೇಳುತ್ತಾರೆ.....
ಸರಿ ಅಕ್ಕ,.... ಬಗ್ಗೆ ತಿಳಿಸಿದಿರಿ....
"ಅಮ್ಮ ತುಂಬಾ ಕಷ್ಖ ಪಡುತ್ತಾರೆ, ನಾನು ಪ್ರೀತಿಸುತ್ತೇನೆ...... ಯಾವಾಗಲು........"
ವಂದನೆಗಳು.
ತರಗತಿ - ೧
ಲೇಡಿ ಹಿಲ್ ಇಂಗ್ಲೀಷ್ ಪ್ರೈಮರಿ
ಶಾಲೆ - ಮಂಗಳೂರು - ದಕ್ಷಿಣ ಕನ್ನಡ
*********************************************
ಅಕ್ಕನ ಪತ್ರ...
ಅಕ್ಕ ಎಲ್ಲ ನಿಜವನ್ನೇ ಹೇಳಿದ್ದಾರೆ....... ಯಾಕೆಂದರೆ
ನಾನು ಒಮ್ಮೆ ನಮ್ಮ ಮನೆಯ ಹತ್ತಿರ ಇರುವ ಅಂಗಡಿಗೆ ವಸ್ತು ಖರೀದಿಸಲು ಹೋಗಿದ್ದೆ.....ಅಲ್ಲಿ ಅಂಗಡಿ ಮಾಲೀಕನು ಹಾಳಾದ ತರಕಾರಿ, ಹಣ್ಣುಗಳನ್ನು ಹೊರಗಡೆ ಎಸೆದನು....... ಅ ತರಕಾರಿಯನ್ನು ಕಂಡು ನನಗೆ ಬೇಸರವಾಯಿತು ಯಾಕೆಂದರೆ ಅ ತರಕಾರಿ ಕೊಳೆತ ಮೇಲೆ ಅದರಲ್ಲಿ ಸೊಳ್ಳೆ , ನೊಣಗಳು ಬರಲು ಶುರುವಾಗುತ್ತದೆ..... ಸೊಳ್ಳೆಗಳು ತುಂಬಾ ಆದರೆ ನಮಗೆಲ್ಲ ಕಷ್ಟ.
ಆದರಿಂದ ನಾವು ಆದಷ್ಟು ಕೊಳೆಯುವ ವಸ್ತುಗಳನ್ನು ಬೀದಿಯ ಬಳಿ ಬಿಸಾಡಬಾರದು.
ತ್ರಿಷಾ ಎಂ.ಎಸ್
9ನೇ ತರಗತಿ
ಶಾರದೆ ಗಣಪತಿ ವಿದ್ಯಾ ಕೇಂದ್ರ ಕೈರಂಗಳ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************