
ಅಂದು.. ಇಂದು (ಕವನ)
Sunday, July 25, 2021
Edit
ವಿಖ್ಯಾತಿ ಬೆಜ್ಜಂಗಳ. 9 ನೇ ತರಗತಿ
ಸುದಾನ ವಸತಿಯುತ ಶಾಲೆ ಪುತ್ತೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಅಂದು.. ಇಂದು (ಕವನ)
****************************************
ಅಂದು
ಅಮ್ಮನ ಕೂಗಿವ ಏಳುವ ನಾವು
ಸ್ನಾನವ ಮಾಡಿ ದೀಪವ ಹಚ್ಚಿ
ತಿಂಡಿಯ ತಿಂದು ಓದಿದೆವು
ಪುಸ್ತಕ ತುಂಬಿಸಿ ಹೋದೆವು ಶಾಲೆಗೆ
ಮಾಡಿದ ತಪ್ಪಿಗೆ ಪೆಟ್ಟನು ತಿಂದು
ಬುತ್ತಿಯಲಿದ್ದ ಊಟವ ಸವಿದು
ಆಡುತ ಕುಣಿದೆವು ಶಾಲೆಯಲಿ.
ಇಂದು
ಬಂದಿತು ಕೊರೊನಾ
ಮುಚ್ಚಿತು ಶಾಲೆಯು
ಕುಳಿತೆವು ತೆಪ್ಪಗೆ ಮನೆಯಲ್ಲಿ
ಆಟವೂ ಇಲ್ಲ ಪಾಠವೂ ಇಲ್ಲ
ದಿನಗಳ ದೂಡುತ ಬೇಸರದಲಿ
ಬರುತ್ತಿತ್ತು ಪಾಠ ಮೊಬೈಲ್ ನಲ್ಲಿ
ಬರಲಿಲ್ಲ ನಗೆ ವಿನೋದ ತುಂಟಾಟ
ಆಗಾಗ ಗುರುಗಳ ಗದರುವಿಕೆ
ಮುಖಕೆ ಕೈ ಇಟ್ಟ ನಮ್ಮ ನಗು
ಹೇಗೆ ಮರೆಯಲಿ ತರಗತಿಯ ತರ್ಲೆ
ಖುಷಿಯ ಕೊಡುತ್ತಿತ್ತು ವಾರದ ರಜೆ
ಬೇಸರ ಕೊಡುತ್ತಿದೆ ಮುಗಿಯದ ಈ ರಜೆ ...!!!
...................ವಿಖ್ಯಾತಿ ಬೆಜ್ಜಂಗಳ. 9 ನೇ ತರಗತಿ
ಸುದಾನ ವಸತಿಯುತ ಶಾಲೆ ಪುತ್ತೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************