
ತಾರತಮ್ಯ - ಕಥೆ
Tuesday, July 27, 2021
Edit
ತ್ರಿಷಾ ಎಂ. ಎಸ್. 9ನೇ ತರಗತಿ
ಶಾರದಾ ಗಣಪತಿ ವಿದ್ಯಾ ಕೇಂದ್ರ ಕೈರಂಗಳ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ತಾರತಮ್ಯ - ಕಥೆ
ಒಂದಾನೊಂದು ಊರು. ಆ ಊರಿನಲ್ಲಿ ರಾಮುವಿನ ಪರಿವಾರ ಇತ್ತು. ಅವನ ಹೆಂಡತಿ ಕಮಲ. ಅವರಿಗೆ 3 ಮಕ್ಕಳಿದ್ದರು. ಎರಡು ಹೆಣ್ಣು ಮಕ್ಕಳು ಮತ್ತು ಕೊನೆಯ ಗಂಡು ಮಗು. ರಾಮುವಿಗೆ ಹೆಣ್ಣು ಮಕ್ಕಳನ್ನು ಕಂಡರೆ ಆಗುತ್ತಿರಲಿಲ್ಲ. ಅವನು ತನ್ನ ದೊಡ್ಡ ಮಗಳನ್ನು ಮಾತ್ರ ತನ್ನ ಮಗಳೆಂದು ನೋಡಿಕೊಳ್ಳುತ್ತಿದ್ದನು. ಎರಡನೇ ಮಗಳನ್ನು ಬೇರೆ ಮಕ್ಕಳತರ ನೋಡಿಕೊಂಡನು. ಮೂರನೇ ಮಗನನ್ನು ಚಕ್ರವರ್ತಿ ಥರ ನೋಡಿಕೊಂಡನು.
ಎರಡನೇ ಮಗಳು ಅವರಿಬ್ಬರಕ್ಕಿಂತ ಬುದ್ದಿವಂತಳು ಹಾಗೂ ತುಂಬಾ ಶಾಂತಿಯಿಂದ ಇರುತ್ತಿದ್ದಳು. ಅವಳು ಚಿತ್ರಕಲೆಯಲ್ಲೂ ತುಂಬಾ ಚುರುಕು. ರಾಮು ತನ್ನ ಎರಡನೇ ಮಗಳ ಮುಖವನ್ನೇ ನೋಡುತ್ತಿರಲಿಲ್ಲ. ಆ ಕಾರಣಕ್ಕೆ ಮಗಳಿಗೆ ತುಂಬಾ ಬೇಸರವಾಗುತಿತ್ತು. ಹಾಗೇ ದಿನಗಳು ಕಳೆಯಿತು..... ಮಕ್ಕಳು ಬೆಳೆದರು. ಮೊದಲನೇ ಮಗಳಿಗೇ ಅಂಗನವಾಡಿಯಲ್ಲಿ ಟೀಚರ್ ಕೆಲಸ ಸಿಕ್ಕಿತು. ಎರಡನೇ ಮಗಳನ್ನು ಶಾಲೆಗೆ ಕಳಿಸಲಿಲ್ಲ. ಆ ಕಾರಣ ಅವಳ ಸ್ವಂತ ಬುದ್ದಿಯಿಂದ ಆರ್ಟಿಸ್ಟ್ ಆದಳು..... ಮೂರನೇ ಮಗನನ್ನು ತಲೆಯ ಮೇಲೆ ಇಟ್ಟು ಸಾಕಿದ್ದರಿಂದ ಅವನು ಕುಡುಕನಾದ. ಯಾವ ಕೆಲಸಕ್ಕೂ ಸೇರಲಿಲ್ಲ. ಅತಿ ಆಸೆಯಿಂದ ಅವನು ಎಲ್ಲ ಮನೆಗಳಿಂದ ಹಣ ಚಿನ್ನ ಕದ್ದು ಕೊನೆಗೆ ಜೈಲಿಗೆ ಸೇರಿದ. ಎರಡನೇ ಮಗಳು ಬೆಳೆದು ಈಗ ಇಡೀ ದೇಶದ ಪ್ರಖ್ಯಾತ ಆರ್ಟಿಸ್ಟ್ ಆದಳು.
........................ತ್ರಿಷಾ ಎಂ. ಎಸ್. 9ನೇ ತರಗತಿ
ಶಾರದಾ ಗಣಪತಿ ವಿದ್ಯಾ ಕೇಂದ್ರ ಕೈರಂಗಳ
ಬಂಟ್ವಾಳ ತಾಲೂಕು , ಕನ್ನಡ ಜಿಲ್ಲೆ
ಚಿತ್ರರಚನೆ : ಅಶ್ವಿನ್ ಕೃಷ್ಣ
ಮಂಚಿ ಕೊಳ್ನಡು ಪ್ರೌಢಶಾಲೆ
ಬಂಟ್ವಾಳ ತಾಲೂಕು ದ.ಕ.
********************************************