
ಸಣ್ಣ ಕಥೆ
Wednesday, July 28, 2021
Edit
ನಿಭಾ 8ನೇ ತರಗತಿ
ಸ. ಹಿ. ಪ್ರಾ. ಶಾಲೆ. ನೇರಳಕಟ್ಟೆ
ಬಂಟ್ಟಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಸಣ್ಣ ಕಥೆ
ಒಂದು ಊರಲ್ಲಿ ಶಾಮ್ ಮತ್ತು ಅವನ ಅಜ್ಜಿ ವಾಸವಾಗಿದ್ದರು. ಶಾಮ್ ತುಂಬಾ ಸೋಮಾರಿ ಆಗಿದ್ದನು. ಅವನು ತಿನ್ನುವುದು ಬಿಟ್ಟರೆ ಬೇರೇನೂ ಮಾಡುತ್ತಿರಲಿಲ್ಲ. ಒಂದು ದಿನ ಅವನ ಅಜ್ಜಿ ಅವನ ಬಳಿ ನಮ್ಮ ಮನೆಯ ರಸ್ತೆಯ ಬದಿಯಲ್ಲಿ ಇರುವ ಬಿದಿರಿನ ಮುಳ್ಳಿನ ಪೊದೆಯನ್ನು ಬಿಡಿಸಿ ಬಾ ಎಂದು ಹೇಳಿದರು. ಅದಕ್ಕೆ ಅವನು ಆಯಿತು ಎಂದು ಹೇಳಿ ಅಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಹೋದ. ಅಲ್ಲಿಗೆ ಹೋಗಿ ಸ್ವಲ್ಪ ಹೊತ್ತಿನಲ್ಲಿಯೇ ಮನೆಗೆ ಬಂದ. ಆಗ ಅಜ್ಜಿ ಇಷ್ಟು ಬೇಗ ಕೆಲಸ ಮುಗಿಯಿತೇ ಎಂದು ಕೇಳಿದರು. ಅದಕ್ಕೆ ಅವನು ಇಲ್ಲ ಅಜ್ಜಿ ಅದನ್ನು ನನಗೆ ಬಿಡಿಸಲು ಸಾಧ್ಯವಿಲ್ಲ ಅದರಲ್ಲಿ ತುಂಬಾ ಮುಳ್ಳುಗಳಿವೆ. ಆಗ ಅಜ್ಜಿ ಬಿಸಿ ಬಿಸಿ ಊಟವನ್ನು ಬಟ್ಟಲು ತುಂಬಾ ಹಾಕಿ ಕೊಟ್ಟರು. ಅದನ್ನು ಅವನು ಸುತ್ತಲು ಬಿಡಿಸಿ ಬಿಡಿಸಿ ತಿಂದನು. ಆಗ ಅಜ್ಜಿ ಹೇಳಿದಳು ನೀನು ಹೇಗೆ ಈ ಊಟವನ್ನು ಸುತ್ತಲು ಬಿಡಿಸಿ ತಿಂದೆಯೋ ಹಾಗೆ ಆ ಬಿದಿರಿನ ಮುಳ್ಳನ್ನು ಸುತ್ತಲೂ ಬಿಡಿಸಿ ಬಿಡಿಸಿ ತೆಗೆ ಎಂದಳು. ಆಗ ಅವನಿಗೆ ಅರ್ಥವಾಯಿತು. ಅಂದಿನಿಂದ ಶಾಮ್ ಸೋಮಾರಿತನವನ್ನು ಬಿಟ್ಟು ದುಡಿಯುವುದನ್ನು ಕಲಿತ.
ಇದರಿಂದ ನಮಗೆ ಅರ್ಥವಾಗುವುದು ಏನೆಂದರೆ ನಾವು ಬರೀ ತಿನ್ನಲು ಕಲಿತರೆ ಸಾಲದು ದುಡಿಯುವುದೂ ಕಲಿಯಬೇಕು.
........................................... ನಿಭಾ 8ನೇ ತರಗತಿ
ಸ. ಹಿ ಪ್ರಾ. ಶಾಲೆ ನೇರಳಕಟ್ಟೆ
ಬಂಟ್ಟಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಚಿತ್ರ : ಅಶ್ವಿನ್ ಕೃಷ್ಣ
ಸರ್ಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು
*********************************************