-->
ಬಡವನ ಅದೃಷ್ಟ - ಕಥೆ

ಬಡವನ ಅದೃಷ್ಟ - ಕಥೆ

ಗಗನ್ ದಯಾ ಖಾರ್ವಿ      7 ನೇ ತರಗತಿ  
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ ಕುಂದಾಪುರ ತಾಲೂಕು , ಉಡುಪಿ ಜಿಲ್ಲೆ



                       ಬಡವನ ಅದೃಷ್ಟ - ಕಥೆ
      ಒಂದು ಊರಿನಲ್ಲಿ ಒಬ್ಬ ಬಡವ ಪುಟ್ಟ ಗುಡಿಸಲಿನಲ್ಲಿ ವಾಸವಾಗಿದ್ದ. ಭಿಕ್ಷೆ ಬೇಡಿ ಜೀವನ ಮಾಡುತಿದ್ದ. ಒಂದು ದಿನ ಭಿಕ್ಷೆ ಸಿಗದೇ ಅಂಗಡಿಗೆ ಹೋಗಿ ಸಾಲದಲ್ಲಿ ಸ್ವಲ್ಪ ಸಾಮಾನು ಕೇಳಿದ. ಅಂಗಡಿಯವನು ಸಾಮಾನು ಕೊಡದೆ ಹೋಗು ಎಂದು ತಳ್ಳಿ ಬಿಟ್ಟ. ಬಡವ ಅವಮಾನದಿಂದ ದೂರ ಹೋಗಿ ಒಂದು ಮರದ ಕೆಳಗೆ ಅಳುತ್ತ ಕುಳಿತ. ಸ್ವಲ್ಪ ಸಮಯದಲ್ಲಿ ಮುಖದ ಮೇಲೆ ಯಾರೋ ನೀರು ಚೆಲ್ಲಿದಂತೆ ಆಯಿತು. ಮುಖದ ಮೇಲೆ ಬಿದ್ದ ನೀರನ್ನು ಕೈಯಿಂದ ಒರೆಸಿ ಬಿಸಾಕಿದ. ಬಿಸಾಕಿದ ಆ ನೀರು ಒಂದು ಗಿಡದ ಎಲಯ ಮೇಲೆ ಬಿತ್ತು . ಎಲೆಯ ಮೇಲೆ ಬಿದ್ದ ನೀರು ಒಂದು ವಜ್ರವಾಗಿ ಬಡವನ ಕೈಯಲ್ಲಿ ಬಿತ್ತು. ಆಗ ಆ ಬಡವ ವಜ್ರವನ್ನು ತೆಗೆದು ಕೊಂಡು ಸಂತೋಷದಿಂದ ಅಂಗಡಿಗೆ ಹೋಗಿ ಸ್ವಲ್ಪ ಹಣಕ್ಕೆ ಮಾರಿದ. ಮಾರಿದ ಹಣದಿಂದ ಸ್ವಲ್ಪ ಸಾಮಾನು ತಂದು ಮನೆಯಲ್ಲಿ ಅಡುಗೆ ಮಾಡಿ ಊಟ ಮಾಡಿ ನೆಮ್ಮದಿಯಿಂದ ಮಲಗಿದ. ಸ್ವಲ್ಪ ಸಮಯದ ನಂತರ ಎಚ್ಚರವಾಗಿ ನೋಡಿದಾಗ ಆ ವಜ್ರ ಕೈಯಲ್ಲಿ ಇತ್ತು. ಗಾಬರಿಯಾಗಿ ಆ ವಜ್ರವನ್ನು ಪುನ: ಅಂಗಡಿಯವನಿಗೆ ಹೋಗಿ ಕೊಟ್ಟ. ಮನೆಗೆ ಬಂದು ರಾತ್ರಿ ಊಟ ಮಾಡಿ ಮಲಗಿದ. ಆಗ ಬಡವನಿಗೆ ಒಂದು ಕನಸು ಬಿತ್ತು. ಕನಸಿನಲ್ಲಿ ದೇವತೆ ಬಂದು ಆ ಬಡವನಿಗೆ , ಮಗು ಆ ವಜ್ರ ನಿನಗೋಸ್ಕರ ಕೊಟ್ಟಿದ್ದೇನೆ. ಆ ವಜ್ರದಿಂದ ನಿನ್ನ ಜೀವನ, ಬದುಕು, ವ್ಯಕ್ತಿತ್ವ ಎಲ್ಲ ಬದಲಾಗಿ , ದೊಡ್ಡ ವ್ಯಕ್ತಿಯಾಗಿ ಊರಿನ ಜನರಿಗೆ ಒಳಿತು ಮಾಡುವ ಮುನುಷ್ಯನಾಗುತ್ತೀಯ. ನಿನ್ನ ಒಳ್ಳೆಯ ಗುಣ, ನಡತೆ, ಸತ್ಯ, ಧರ್ಮ ಇವೆಲ್ಲದರ ಕಾರಣ ನಿನಗೆ ಈ ವಜ್ರ ಪ್ರಾಪ್ತಿಯಾಗಿದೆ. ಅದರ ಸದುಪಯೋಗ ಮಾಡಿ ಜನರಿಗೆ ಒಳ್ಳೆಯದನ್ನು ಮಾಡು, ಎಂದು ಹೇಳಿ ಮಾಯವಾಯಿತು. ಬಡವ ಎಚ್ಚರವಾಗಿ ಎದ್ದು ನೋಡಿದಾಗ ಆ ವಜ್ರ ಮತ್ತೆ ಅವನ ಕೈಯಲ್ಲಿ ಇತ್ತು. ಆ ವಜ್ರವನ್ನು ತೆಗೆದು ಮನೆಯಲ್ಲಿ ದೇವರ ಮುಂದೆ ಇಟ್ಟು ಪೂಜೆ ಮಾಡಿದನು. ನಂತರ ವಜ್ರವನ್ನು ಮಾರಿದ ಅಂಗಡಿಯವನಿಗೆ ತಂದ ಹಣವನ್ನು ಹಿಂತಿರುಗಿಸಿದ. ಅಂದಿನಿಂದ ಅವನು ಊರಿ ನಲ್ಲಿ ದೊಡ್ಡ ವ್ಯಕ್ತಿಯಾಗಿ ದೇವತೆ ಹೇಳಿದಂತೆ ಜನರಿಗೆ ಒಳ್ಳೆಯದನ್ನು ಮಾಡಿದ.

ನೀತಿ : ನಮ್ಮಲಿದ್ದ ಸತ್ಯ, ಧರ್ಮವೇ ನಮ್ಮ ಒಳಿತಿಗೆ ಕಾರಣ.

...............ಗಗನ್ ದಯಾ ಖಾರ್ವಿ 7 ನೇ ತರಗತಿ  
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ 
ಕುಂದಾಪುರ ತಾಲೂಕು ಉಡುಪಿ ಜಿಲ್ಲೆ

ಚಿತ್ರ : ಅಶ್ವಿನ್ ಕೃಷ್ಣ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಡು 
ಬಂಟ್ವಾಳ ತಾಲೂಕು

**********************************************


Ads on article

Advertise in articles 1

advertising articles 2

Advertise under the article