-->
ನಮ್ಮದೊಂದು ಪುಟ್ಟ ಚಾರಣ

ನಮ್ಮದೊಂದು ಪುಟ್ಟ ಚಾರಣ

ಸಾನ್ವಿ ಸಿ ಎಸ್     4 ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು , 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ


               ನಮ್ಮದೊಂದು ಪುಟ್ಟ ಚಾರಣ

              ಅಂದು ಭಾನುವಾರ. ನಾವು ನಮ್ಮ ಮನೆಯ ಹತ್ತಿರದ ಒಂದು ಗುಡ್ಡಕ್ಕೆ ಹೋಗಲು ತೀರ್ಮಾನಿಸಿದೆವು. ನಾವು ಹೋಗಲು ತೀರ್ಮಾನಿಸಿದ ಗುಡ್ಡದ ಹೆಸರು ಮುಗುಳಿ ಗುಡ್ಡೆ. ನಾವು ಒಟ್ಟು 30 ಜನರಿದ್ದೆವು. ಅದು ಕಡಿದಾದ ದಾರಿಯಾಗಿತ್ತು. ಅಲ್ಲಿ ಸಣ್ಣಪುಟ್ಟ ಗುಂಡಿಗಳಿದ್ದವು. ಹೀಗೆ ಹತ್ತಿ ಹತ್ತಿ ಕೊನೆಗೆ ಗುಡ್ಡದ ತುದಿಗೆ ತಲುಪಿದೆವು. ಆ ಗುಡ್ಡದಲ್ಲಿದ್ದ ನೋಟ ರಮಣೀಯವಾಗಿತ್ತು. ಒಂದು ಕಡೆ ಧರೆಯಾಗಿದ್ದರೆ ಮತ್ತೊಂದು ಕಡೆ ಗಿಡಮರಗಳು. ಇನ್ನೊಂದು ಕಡೆ ಗದ್ದೆ, ಕೆಲವು ಮನೆಗಳು ಮತ್ತು ಶಿರಂಕಲ್ಲು ರಸ್ತೆ ಚಿಕ್ಕದಾಗಿ ಕಾಣಿಸುತ್ತಿತ್ತು. ಒಬ್ಬರು ಮಾವ ಮನೆಯಲ್ಲೇ ಮಾಡಿದ ಹಲಸಿನ ಕಾಯಿ ಚಿಪ್ಸ್ ತಂದಿದ್ದರು. ಅದು ತುಂಬಾ ರುಚಿಯಾಗಿತ್ತು. ನನ್ನ ಗೆಳತಿಯೊಬ್ಬಳು ಚೋಕ್ಲೇಟ್ ತಂದಿದ್ದಳು. ಎಲ್ಲರೂ ಹಂಚಿ ತಿಂದು ನೀರು ಕುಡಿದೆವು. ನಂತರ ನಾವು ಬೇರೊಂದು ದಾರಿಯಾಗಿ ಚಾರಣ ಮುಂದುವರಿಸಿದೆವು. ಹೀಗೆ ಹೋಗುವಾಗ ನಮಗೊಂದು ಕೊಳ ಕಾಣಿಸಿತು. ನಾವೆಲ್ಲರೂ ಕೊಳಕ್ಕೆ ಚಿಕ್ಕ ಚಿಕ್ಕ ಕಲ್ಲುಗಳನ್ನು ಹಾಕಿದಾಗ ನೀರು ಚಿಮ್ಮುವುದನ್ನು ನೋಡಿ ಆನಂದಿಸಿದೆವು. ನಂತರ ನಾವು ತುಂಬಾ ಬಂಡೆಕಲ್ಲುಗಳಿರುವ ಒಂದು ಪ್ರದೇಶಕ್ಕೆ ಬಂದೆವು. ಆ ಕಲ್ಲುಗಳಲ್ಲಿ ನಡೆದುಕೊಂಡೇ ನಾವು ಒಂದು ಬಯಲು ಪ್ರದೇಶಕ್ಕೆ ಬಂದೆವು. ನಂತರ ಎಲ್ಲರೂ ಮನೆಗೆ ಬಂದೆವು. ನನಗೆ ತುಂಬಾ ಆಯಾಸವಾಗಿತ್ತು ಜೊತೆಗೆ ಮಜವೂ ಆಗಿತ್ತು. ಇದುವೇ ನನ್ನ ಮೊದಲ ಅನುಭವ. ಈಗ ಶಾಲೆ ಇಲ್ಲದ ಕಾರಣ ಎಲ್ಲರೂ ಸೇರಿದ್ದು ಖುಷಿ ತಂದಿತು.

.............................ಸಾನ್ವಿ ಸಿ ಎಸ್ 4 ನೇ ತರಗತಿ
               ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
                 ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

Ads on article

Advertise in articles 1

advertising articles 2

Advertise under the article