
ಬುದ್ಧಿವಂತ ರಾಜು - ಕಥೆ
Monday, July 12, 2021
Edit
ನಂದನ್ ಕೆ ಹೆಚ್
7 ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ ಶಾಲೆ ಕುದ್ಮಾರು
ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಒಂದು ಹಳ್ಳಿ. ಆ ಹಳ್ಳಿಯಲ್ಲಿ ರಾಜು ಎಂಬ ಹುಡುಗ ವಾಸಿಸುತ್ತಿದ್ದ. ಅವನು ಬಹಳ ಚುರುಕು ಸ್ವಭಾವದವ. ಎಲ್ಲಾ ಕೆಲಸಗಳನ್ನು ಬಹಳ ಆಲೋಚನೆ ಮಾಡಿ ಮಾಡುತಿದ್ದ. ಅವನಿಗೆ ಸೈಕಲ್ ಎಂದರೆ ಬಹಳ ಇಷ್ಟ. ಒಂದು ದಿನ ಅವನ ಬಳಿ ಇರುವ ಸೈಕಲ್ ಕಳವಾಯಿತು. ತನ್ನ ಇಷ್ಟದ ಸೈಕಲನ್ನು ಕಳೆದುಕೊಂಡದ್ದಕ್ಕೆ ಅವನು ಬಹಳ ಬೇಸರ ಪಟ್ಟ. ಆದರೆ ಆ ಸೈಕಲ್ ಏನಾಯಿತು ಎಂಬುದನ್ನು ಅವನಿಗೆ ಕಂಡು ಹುಡುಕಬೇಕಿತ್ತು. ಬಹಳ ಆಲೋಚನೆಯ ನಂತರ ಅವನಿಗೆ ಒಂದು ಉಪಾಯ ಹೊಳೆಯಿತು. ಅವನು ಸ್ವಲ್ಪ ದಿನಗಳ ಹಿಂದೆಯಷ್ಟೇ ಸೈಕಲ್ ಗೆ ಹೊಸ ಟೈಯರ್ ಅನ್ನು ಹಾಕಿದ್ದು ಆ ಟಯರಿನ ಗುರುತು ಅವನಿಗೆ ತಿಳಿದಿತ್ತು. ಹಾಗೂ ಅದು ವಿಭಿನ್ನವಾಗಿತ್ತು. ಅವನು ಆ ಟಯರು ಸಾಗಿದ ದಾರಿಯ ಬೆನ್ನು ಹಿಡಿದು ಹೊರಟ. ಸುಮಾರು ಒಂದು ಕಿಲೋಮೀಟರ್ ಚಲಿಸಿದ ಮೇಲೆ ಒಂದು ಪುಟ್ಟ ಕೊಠಡಿಯ ಬಳಿ ಸೈಕಲ್ ನ ಟಯರಿನ ಗುರುತು ಕೊನೆಗೊಂಡದನ್ನು ಗುರುತು ಹಿಡಿದ. ಆ ಕೋಣೆ ತುಂಬಾ ಕತ್ತಲಾಗಿತ್ತು. ತನ್ನ ಬಳಿ ಇದ್ದ ಮೊಬೈಲ್ ಅನ್ನು ಉಪಯೋಗಿಸಿ ಬೆಳಕು ಹಾಯಿಸಿ ಕಿಟಕಿ ಮೂಲಕ ನೋಡಿದಾಗ ಅಲ್ಲಿ ತುಂಬಾ ಸೈಕಲ್ ಗಳು ಇದ್ದವು. ಜೊತೆಗೆ ಇವನ ಸೈಕಲ್ ಕೂಡ ಇತ್ತು ಆದರೆ ಆ ಕೊಠಡಿಗೆ ಬೀಗ ಹಾಕಿತ್ತು. ಏನು ಮಾಡುವುದೆಂದು ತಿಳಿಯಲಿಲ್ಲ. ಕೊನೆಗೆ ಅವನ ಪರಿಚಯದ ಒಬ್ಬ ಪೋಲೀಸ್ ನನ್ನು ಕರೆದುಕೊಂಡು ಮರುದಿನ ಅದೇ ಕೋಣೆಗೆ ಹೋದ. ನೋಡಿದರೆ ಅದೇ ಸೈಕಲ್ ಕಳ್ಳರಿಗಾಗಿ ಪೊಲೀಸರು ಹುಡುಕುತ್ತಿದ್ದರು. ಕಳ್ಳ ಮಕ್ಕಳ ಸೈಕಲ್ಲನ್ನು ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದ. ರಾಜುವಿನ ಬುದ್ಧಿವಂತಿಕೆಯಿಂದ ಈ ಕಳ್ಳರು ಪೊಲೀಸರಿಗೆ ಅತ್ಯಂತ ಸುಲಭವಾಗಿ ದೊರಕಿದರು. ಆ ಕಳ್ಳನನ್ನು ಹಿಡಿದುಕೊಡುವುದರ ಜೊತೆ ರಾಜು ತನ್ನ ಸೈಕಲನ್ನು ಪಡೆದುಕೊಂಡು ಬಹಳ ಖುಷಿ ಪಟ್ಟ. ಜೊತೆಗೆ ಆಸುಪಾಸಿನ ಮನೆಯ ಕಳೆದುಹೋದ ಸೈಕಲ್ ಗಳೂ ಸಹ ಆ ಮಕ್ಕಳಿಗೆ ದೊರಕಿತು.
ನೀತಿ: ಯಾವುದೇ ಕೆಲಸವನ್ನು ಆಲೋಚಿಸಿ ಬುದ್ಧಿವಂತಿಕೆಯಿಂದ ಮಾಡಬೇಕು.
ನಂದನ್ ಕೆ ಹೆಚ್
7 ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ ಶಾಲೆ ಕುದ್ಮಾರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಚಿತ್ರ : ಅಖಿಲ್ ಶರ್ಮ 8ನೇ ತರಗತಿ ಮಂಗಳೂರು
*********************************************