
ಕಾಡಿನ ಮಹತ್ವ - ಕಥೆ
Monday, July 12, 2021
Edit
ನಂದನ್ ಕೆ ಹೆಚ್
7ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ.ಕುದ್ಮಾರು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
ಒಂದು ಹಳ್ಳಿ. ಹಳ್ಳಿಯ ಪಕ್ಕದಲ್ಲಿ ಒಂದು ದಟ್ಟವಾದ ಕಾಡಿತ್ತು. ಜನರೆಲ್ಲಾ ಕಾಡಿನ ಮರಗಳನ್ನು ತಮ್ಮ ಉಪಯೋಗಕ್ಕೆ ಬಳಸುತ್ತಿದ್ದರು. ಕಾಡು ಅವನತಿಯತ್ತ ಸಾಗುತ್ತಿತ್ತು. ಹೀಗಿರುವಾಗ ಒಂದು...... ಒಂದು ಮಳೆಗಾಲ..... ವಿಪರೀತ ಗಾಳಿ , ಮಳೆ , ನೆರೆ ಬಂದು ಹಳ್ಳಿಯ ಜನರು ಬೆಳೆದ ಬೆಳೆಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಯಿತು. ಪ್ರಗತಿಯತ್ತ ಸಾಗುತ್ತಿದ್ದ ಹಳ್ಳಿ ಮತ್ತೆ ಕಷ್ಟದಲ್ಲಿ ಕಾಲ ಕಳೆಯುವಂತಾಯಿತು. ಈಗವರಿಗೆ ಕಾಡಿನಲ್ಲಿರುವ ಗೆಡ್ಡೆಗೆಣಸುಗಳು ಕಾಡಿನ ಉತ್ಪನ್ನಗಳೇ ಹೊಟ್ಟೆ ತುಂಬಿಸಿ ಕೊಳ್ಳಲು ಸಹಾಯವಾಯಿತು. ಇದನ್ನು ಯೋಚಿಸಿದ ಜನರು ಒಂದು ವೇಳೆ ಆ ಕಾಡು ನಮ್ಮಿಂದ ಪೂರ್ತಿ ನಾಶವಾಗುತ್ತಿದ್ದರೆ ಇವತ್ತು ನಾವು ಹಸಿವಿನಿಂದ ಸಾಯಬೇಕಿತ್ತು . ತಪ್ಪು ಮಾಡಿಬಿಟ್ಟೆವು . ಮರಗಳನ್ನು ಕಡಿಯಬಾರದಿತ್ತು. ಇನ್ನು ಮುಂದೆ ಹೀಗಾಗಬಾರದು ಎಂದು ಆ ಕಾಡಿನಲ್ಲಿ ಇನ್ನಷ್ಟು ಗಿಡಗಳನ್ನು ಬೆಳೆಸಿ ಹಳ್ಳಿಯ ಸುತ್ತ ಪರಿಸರವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದರು. ಮುಂದೆ ಹಳ್ಳಿಯು ಪ್ರಗತಿ ಹೊಂದವುದರ ಜೊತೆ ಕಾಡನ್ನು ರಕ್ಷಣೆ ಮಾಡುತ್ತಾ ಸಂತಸದಿಂದ ಜೀವಿಸತೊಡಗಿದರು.
ನೀತಿ: ಕಾಡನ್ನು ನಾಶ ಮಾಡಬಾರದು.
ರಚನೆ ನಂದನ್ ಕೆ ಹೆಚ್
7ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ.ಕುದ್ಮಾರು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
ಚಿತ್ರ : ಅಖಿಲ್ ಶರ್ಮ 8ನೇತರಗತಿ ಮಂಗಳೂರು
***********************************************