
ಬೆಕ್ಕಿನ ದ್ವೇಷ - ಕಥೆ
Monday, July 12, 2021
Edit
ತನ್ಮಯ್ ಕೃಷ್ಣ .ಜಿ.ಎಸ್. ನೇರಳಕಟ್ಟೆ
9 ನೇ ತರಗತಿ
ವಿವೇಕಾನಂದ ಪ್ರೌಢಶಾಲೆ ತೆಂಕಿಲ ಪುತ್ತೂರು
ದಕ್ಷಿಣ ಕನ್ನಡ ಜಿಲ್ಲೆ
ಒಂದೂರಿನಲ್ಲಿ ಎರಡು ಬೆಕ್ಕುಗಳಿದ್ದವು. ಒಂದು ಕರಿಬೆಕ್ಕು ಮತ್ತೊಂದು ಬಿಳಿಬೆಕ್ಕು. ಮೊದಲು ಆ ಎರಡೂ ಬೆಕ್ಕುಗಳು ಗೆಳೆಯರಾಗಿದ್ದವು. ಒಂದು ದಿನ ಬಿಳಿಬೆಕ್ಕು ಕಷ್ಟ ಪಟ್ಟು ರೊಟ್ಟಿಯ ತುಂಡನ್ನು ತಂದಾಗ ಸೋಮಾರಿ ಕರಿಬೆಕ್ಕು ಅದನ್ನು ಬಲತ್ಕಾರದಿಂದ ಕಸಿದುಕೊಂಡು ತಿಂದಿತು. ಇದರಿಂದಾಗಿ ಅವುಗಳು ಜಗಳ ಮಾಡಿ ಪರಸ್ಪರ ಶತ್ರುಗಳಾದವು. ಒಂದು ದಿನ ಮನೆಯವರು ಕರಿಬೆಕ್ಕಿನ ಕಾಟ ತಾಳಲಾರದೆ ಒಂದು ರೊಟ್ಟಿಯ ತುಂಡಿಗೆ ವಿಷ ಬೆರೆಸಿಟ್ಟರು. ಕರಿಬೆಕ್ಕು ಆ ರೊಟ್ಟಿಯ ತುಂಡನ್ನು ಕದ್ದುಕೊಂಡು ಬಂದು ದಾರಿಯಲ್ಲಿ ತಿನ್ನತೊಡಗಿತು. ಆದರೆ ವಿಷದ ಕಾರಣ ರೊಟ್ಟಿಯ ಅರ್ಧ ಭಾಗ ತಿಂದ ಕೂಡಲೇ ಕರಿಬೆಕ್ಕು ಸತ್ತುಹೋಯಿತು. ಅದೇ ದಾರಿಯಲ್ಲಿ ಬಿಳಿಬೆಕ್ಕು ಬರುತ್ತಿರುವಾಗ ಅದಕ್ಕೆ ಸತ್ತಿರುವ ಕರಿಬೆಕ್ಕು ಮಲಗಿದಂತೆ ಕಂಡಿತು. ಕೂಡಲೇ ಅಲ್ಲಿಗೆ ಬಂದು ಹಿಂದಿನ ರೊಟ್ಟಿ ಕದ್ದ ದ್ವೇಷದ ನೆನಪಾಗಿ ಅಲ್ಲಿ ಉಳಿದಿದ್ದ ಅರ್ಧ ರೊಟ್ಟಿಯನ್ನು ಕಚ್ಚಿ ಸ್ವಲ್ಪದೂರ ಹೋಗಿ ತಿಂದು ಸತ್ತುಹೋಯಿತು. ಹೀಗೆ ಪರಸ್ಪರ ದ್ವೇಷದಿಂದಾಗಿ ಎರಡೂ ಬೆಕ್ಕು ಸತ್ತಿತು.
ನೀತಿ: ಇದರಿಂದ ತಿಳಿದು ಬರುವ ನೀತಿ ಎಂದರೆ ನಮ್ಮ ದ್ವೇಷವು ನಮ್ಮನ್ನೇ ಕೊಲ್ಲುತ್ತದೆ. ದ್ವೇಷ ಮಾಡದೇ ಪ್ರೀತಿಯಿಂದ ಬದುಕಬೇಕು .
............ತನ್ಮಯ್ ಕೃಷ್ಣ .ಜಿ.ಎಸ್. ನೇರಳಕಟ್ಟೆ
9 ನೇ ತರಗತಿ
ವಿವೇಕಾನಂದ ಪ್ರೌಢಶಾಲೆ ತೆಂಕಿಲ ಪುತ್ತೂರು
ದಕ್ಷಿಣ ಕನ್ನಡ ಜಿಲ್ಲೆ
**********************************************