
ಬದಲಾವಣೆ - ಕಥೆ
Monday, July 12, 2021
Edit
ವಂದನಾ.ಕೆ.ಹೆಚ್
3ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ.ಕುದ್ಮಾರು
ಪುತ್ತೂರು. ದಕ್ಷಿಣ ಕನ್ನಡ ಜಿಲ್ಲೆ
ಒಂದು ಊರು. ಆ ಊರಿನಲ್ಲಿ ರಾಮು ಮತ್ತು ರಾಜು ಎಂಬ ಇಬ್ಬರು ಗೆಳೆಯರು ವಾಸವಾಗಿದ್ದರು. ಅವರ ಮನೆಯೂ ಅಕ್ಕಪಕ್ಕದಲ್ಲಿ. ಶಾಲೆ ಮುಗಿಸಿ ಬಂದು ದಿನವೂ ಸಂಜೆ ಆಟವಾಡುತ್ತಿದ್ದರು. ಹೀಗೆ ಒಂದು ದಿನ ಸಂಜೆ ರಾಮುವಿನ ಅಮ್ಮ ರಾಮ ನಲ್ಲಿ..... ಅಂಗಡಿಗೆ ಹೋಗಿ ತರಕಾರಿ ತೆಗೆದುಕೊಂಡು ಬರಲು ಹೇಳಿದರು. ಆದರೆ ರಾಮು ಅಮ್ಮನ ಮಾತು ಕೇಳದೆ ರಾಜುವಿನ ಜೊತೆ ಆಟಕ್ಕೆ ಹೊರಟ. ರಾಜುವಿನ ಮನೆಯ ಪಕ್ಕದಲ್ಲಿ ಹೋಗಿ ರಾಜುವನ್ನು ಕರೆದ. ಇವನು ಆಟಕ್ಕೆ ಕರೆದರೂ ಅವನು ಬರಲಿಲ್ಲ. ರಾಜು ಅವನ ಅಮ್ಮನಿಗೆ ತರಕಾರಿ ಹೆಚ್ಚಿ ಕೊಡಲು ಹಾಗೂ ಮನೆ ಸ್ವಚ್ಛಗೊಳಿಸಲು ಸಹಾಯ ಮಾಡುತ್ತಿದ್ದ. ಮತ್ತೆ ಬರುತ್ತೇನೆ ಎಂದು ಹೇಳಿದ. ಇದನ್ನು ನೋಡಿದ ರಾಮುವಿಗೆ ತನ್ನ ಅಮ್ಮನನ್ನು ನೆನಪಿಸಿ ಬಹಳ ದುಃಖವಾಯಿತು. ಛೆ...! ಅಮ್ಮ ನಮಗಾಗಿ ಎಷ್ಟೆಲ್ಲ ಮಾಡುತ್ತಾಳೆ. ನಾನು ಅವಳಿಗೆ ಸಹಾಯ ಮಾಡಬೇಕು ಎಂದು ಸೀದಾ ಮನೆಗೆ ಹೋಗಿ ಅಮ್ಮನ ಬಳಿ ಕ್ಷಮೆ ಯಾಚಿಸಿ ಅಮ್ಮ ಅಮ್ಮ ಹೇಳಿದ..... ತರಕಾರಿ ತರಲು ಹೊರಟ.
ನೀತಿ : ಹಿರಿಯರಿಗೆ ಸಹಾಯ ಮಾಡಬೇಕು.
ವಂದನಾ.ಕೆ.ಹೆಚ್
3ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ.ಕುದ್ಮಾರು
ಪುತ್ತೂರು. ದಕ್ಷಿಣ ಕನ್ನಡ ಜಿಲ್ಲೆ
ಚಿತ್ರ : ಅಖಿಲ್ ಶರ್ಮ 8ನೇ ತರಗತಿ ಮಂಗಳೂರು