ಬಾಳ ಬೆಳಕಾದ ಮಕ್ಕಳ ಜಗಲಿ - ಕಥೆ
Wednesday, July 21, 2021
Edit
ಮೋಕ್ಷಾ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಾಣಿಲ
ಬಂಟ್ವಾಳ ತಾಲೂಕು
ದ.ಕ ಜಿಲ್ಲೆ
ಬಾಳ ಬೆಳಕಾದ ಮಕ್ಕಳ ಜಗಲಿ - ಕಥೆ
ಭೀಮಾಪುರ ಎಂಬ ಊರಿನಲ್ಲಿ ಸ್ವರೂಪ್ ತನ್ನ ಅಜ್ಜಿಯೊಂದಿಗೆ ವಾಸವಾಗಿದ್ದನು. ಅಜ್ಜಿಯು ಸ್ವರೂಪ್ ನನ್ನು ತುಂಬಾ ಮುದ್ದಿನಿಂದ ಸಾಕಿದ್ದಳು. ಮೊದಮೊದಲು ಸ್ವರೂಪ್ ತನ್ನ ಅಜ್ಜಿ ಮಾಡುವ ಎಲ್ಲಾ ಕೆಲಸಗಳಿಗೆ ಸಹಾಯ ಮಾಡುತ್ತಿದ್ದನು. ಯಾವಾಗ ಅವನ ಅಜ್ಜಿ ಅವನಿಗೊಂದು ಮೊಬೈಲನ್ನು ತೆಗೆದುಕೊಟ್ಟಳೋ ಅಂದಿನಿಂದ ಅವನು ತುಂಬಾ ಸೋಮಾರಿಯಾದನು. ಯಾವಾಗಲೂ ಮೊಬೈಲ್ ನಲ್ಲಿ ಅಟವಾಡುತ್ತಲೇ ಇರುತ್ತಿದ್ದ. ಊರಿನ ಎಲ್ಲಾ ಜನರು ಅವನನ್ನು "ಸೋಮಾರಿ ಸ್ವರೂಪ" ಎಂದೇ ಕರೆಯಲಾರಂಭಿಸಿದರು. ಹೀಗಿರಲು ಒಂದು ದಿನ ಸ್ವರೂಪ್ ನ ಮಾವ...... ಸ್ವರೂಪ್ ಮತ್ತು ಅಜ್ಜಿಯನ್ನು ಭೇಟಿಯಾಗಲು ಮನೆಗೆ ಬಂದಿದ್ದರು. ಆಗ ಸ್ವರೂಪ್ ಮೊಬೈಲ್ ನಲ್ಲಿ ಆಟವಾಡುತ್ತಲೇ ಇರುವುದನ್ನು ಕಂಡು ತುಂಬಾ ಬೇಸರಗೊಂಡರು. ಈ ಆಟದ ಜಾಲದಿಂದ ಸ್ವರೂಪ್ ನನ್ನು ಹೊರಬರುವಂತೆ ಮಾಡಲು ಒಂದು ಉಪಾಯ ಮಾಡಿದರು. ಅವರು ಅವನಿಗೆ "ಮಕ್ಕಳ ಜಗಲಿ" ಯೆಂಬ ಆನ್ಲೈನ್ ಪತ್ರಿಕೆಯ ಬಗೆಗೆ ತಿಳಿಸಿದರು. ಮತ್ತು ಚಿತ್ರ, ಕಥೆ, ಕವನ, ಲೇಖನಗಳನ್ನು ಬರೆಯುವಂತೆ ಒತ್ತಾಯಿಸಿದರು. ಅವರ ಒತ್ತಾಯಕ್ಕೆ ಮಣಿದು ಕಥೆ, ಲೇಖನ, ಚಿತ್ರ, ಕವನಗಳನ್ನು ಬರೆಯಲು ಪ್ರಯತ್ನಿಸಿದ. ದಿನಕಳೆದಂತೆ ಇದೇ ಅವನ ಹವ್ಯಾಸವಾಯಿತು. ಮಕ್ಕಳದ್ದೇ ವಾತಾವರಣದಂತಿದ್ದ ಮಕ್ಕಳ ಜಗಲಿಯನ್ನು ಸ್ವರೂಪ್ ತುಂಬಾ ಇಷ್ಟ ಪಟ್ಟನು. ಮತ್ತು ತನ್ನ ಬರಹಗಳನ್ನು ಕಳುಹಿಸಿದನು. ಅವನ ಬರಹಗಳು ಮಕ್ಕಳ ಜಗಲಿಯಲ್ಲಿ ಪ್ರಕಟವಾದವು. ಈ ವಿಷಯ ಊರಿನೆಲ್ಲೆಡೆ ಹಬ್ಬಿತು. ಊರಿನ ಮಕ್ಕಳಿಗೆಲ್ಲಾ ಸ್ವರೂಪ್ ಪ್ರೇರಣೆಯಾದನು. ಈಗ ಅವನು ಅತೀ ಅಗತ್ಯವಿದ್ದರೆ ಮಾತ್ರ ಮೊಬೈಲ್ ಬಳಸುತ್ತಿದ್ದ ಮತ್ತು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದ. ಮಕ್ಕಳ ಜಗಲಿಯಿಂದಾಗಿ ಸ್ವರೂಪ್ ನು ಸಸ್ಯ ಪೊಷಣೆ, ಉತ್ತಮ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡನು. ಸ್ವರೂಪ್ ನು ಊರಿನ ಜನರೆಲ್ಲರ ಮೆಚ್ಚುಗೆಗಳಿಸಿದ. ಹೀಗೆ "ಮಕ್ಕಳ ಜಗಲಿ" ಯು ಸ್ವರೂಪ್ ನ ಬಾಳ ಬೆಳಕಾಯಿತು ಮತ್ತು ಅವನ ಪ್ರತಿಭೆಗಳ ಅನಾವರಣಕ್ಕೆ "ಮಕ್ಕಳ ಜಗಲಿ"ಯೇ ಮೊದಲ ಮೆಟ್ಟಿಲಾಯಿತು.
..............................................ಮೋಕ್ಷಾ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಾಣಿಲ
ಬಂಟ್ವಾಳ ತಾಲೂಕು
ದ.ಕ ಜಿಲ್ಲೆ
ಚಿತ್ರ :ಅಖಿಲ್ ಶರ್ಮ 8 ನೇತರಗತಿ ಮಂಗಳೂರು
*********************************************