
ಅಜ್ಜಿಯ ಮನೆ - ಕಥೆ
Wednesday, July 21, 2021
Edit
ಬಿಂದು ಶ್ರೀ
10 ನೇ ತರಗತಿ
ಶ್ರೀ ರಾಮ ಪ್ರೌಡ ಶಾಲೆ, ಕಲ್ಲಡ್ಕ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ನನಗೆ ಆ ಸೆಪ್ಟೆಂಬರಿನ ರಜಾ ದಿನ ಬಂದರೆ ಸಾಕು. ನಾನು ಅಜ್ಜಿ ಮನೆಗೆ ಹೋಗುವ ಖುಷಿ. ಆ ದಿನ ನಾನು ಮತ್ತು ನನ್ನ ತಮ್ಮ ಅಜ್ಜಿ ಮನೆಗೆ ಹೋಗುತ್ತಿದ್ದೆವು. ನಮ್ಮ ಅಜ್ಜಿ ಮನೆ ವಿಟ್ಲ ದಿಂದ ಸ್ವಲ್ಪ ದೂರ ಪುಣಚ ಎಂಬ ಚಿಕ್ಕ ಊರಿನಲ್ಲಿ. ಅಲ್ಲಿ ಒಂದು ಚಿಕ್ಕ ದೇವಸ್ಥಾನವಿದೆ. ಆ ದೇವಸ್ಥಾನದ ಹೆಸರು ಮಹಿಷಮರ್ದಿನೀ. ಅಲ್ಲಿ ಏಪ್ರಿಲ್ ತಿಂಗಳಲ್ಲಿ ಜಾತ್ರೆಯ ಖುಷಿ.
ನಾನು ಈಗ ಸೆಪ್ಟೆಂಬರಲ್ಲಿ ಅಜ್ಜಿ ಮನೆಯಲ್ಲಿ ಕಳೆದ ದಿನವನ್ನು ಹೇಳುತ್ತೇನೆ. ಹೌದು ಅಜ್ಜಿ ಮನೆ ಎಂದರೆ ಎಲ್ಲಾ ಮಕ್ಕಳಿಗೂ ಇಷ್ಟ. ನಮ್ಮ ಅಜ್ಜಿ ಮನೆಯಲ್ಲಿ ನನಗೆ ತುಂಬಾ ಫ್ರೆಂಡ್ಸ್ ಇದ್ಧಾರೆ. ನನ್ನ ಅಜ್ಜಿ ಮನೆಯಲ್ಲಿ ಮಾಡುವ ಮೊಸರು ಎಂದರೆ ನನಗೆ ತುಂಬಾ ಇಷ್ಟ. ಅಜ್ಜಿ ನಮಗೆ ಯಾವಾಗಲು ತಿಂಡಿ ತಿನಿಸುಗಳನ್ನು ಮತ್ತು ಮೊಸರು ಕೊಡುತ್ತಾರೆ. ನಾವು ಅದನ್ನು ಹಂಚಿ ತಿನ್ನುತ್ತೇವೆ. ನಾವೆಲ್ಲರೂ ಒಟ್ಟು ಸೇರಿ ಸಂತೋಷದಿಂದ ಆಟ ಆಡುತ್ತೇವೆ.
ಒಂದು ದಿನ ನಮ್ಮ ಅಜ್ಜಿ ನಮ್ಮನ್ನು ಒಂದು ಕಾಡಿಗೆ ಕರೆದುಕೊಂಡು ಹೋದರು. ತುಂಬಾ ಸುಂದರವಾದ ಕಾಡು. ತುಂಬಾ ಮರ, ಗಿಡಗಳು ಇದ್ದವು. ನಾವು ಅಜ್ಜಿಯ ಹಿಂದೇನೇ ಹೋಗುತಿದ್ದೆವು. ಹೀಗೆ ಮುಂದೆ ಸಾಗುವಾಗ ನಮಗೆ ಒಂದು ಹಾವು ಸಿಕ್ಕಿತು. ಅದನ್ನು ನೋಡಿದ ನಮಗೆ ತುಂಬಾ ಭಯವಾಯಿತು. ಅಜ್ಜಿ ಹೇಳಿದರು "ಮಕ್ಕಳೇ ನೀವು ಭಯ ಪಡಬೇಡಿ ಅದು ನಮಗೆ ಏನು ಮಾಡುವುದಿಲ್ಲ. ಅದಕ್ಕೆ ನಾವು ಹಿಂಸೆ ಕೊಡಬಾರದು. ಅದು ಕೂಡ ನಮ್ಮಂತೆಯೇ ಒಂದು ಜೀವಿ. ಅದು ಅದರಪಾಡಿಗೆ ಹೋಗಲಿ " ಎಂದು ಹೇಳಿದರು. ನಾವು ಮುಂದೆ ಸಾಗಿದೆವು.
ಅಲ್ಲಿಯೇ ಒಂದು ಗಿಡದಲ್ಲಿ ಒಂದು ಸುಂದರವಾದ ಚಿಟ್ಟೆ ಕುಳಿತಿತ್ತು. ಅದನ್ನು ನೋಡಿದ ನನ್ನ ಗೆಳತಿ ಅದನ್ನು ಹಿಡಿಯಲು ಹೋದಳು. ಆದರೆ ನಾನು "ಅದನ್ನು ಹಿಡಿಯಬೇಡ. ಅದು ತುಂಬಾ ಸುಂದರವಾಗಿದೆ. ಅದನ್ನು ಹಿಡಿದರೆ ತುಂಬಾ ನೋವಾಾಗುತ್ತೆ" ಎಂದು ಹೇಳಿದೆ. ಅದಕ್ಕೆ ಗೆಳತಿ....... ಸರಿ ಗೆಳತಿ ತಪ್ಪಾಯ್ತು ಎಂದಳು. ಹೀಗೆ ನಾವು ಮರ, ಗಿಡಗಳ ಸುಂದರವನ್ನು ನೋಡುತ್ತಾ ಮನೆಯ ಕಡೆ ಹೊರಟೆವು. ಹೀಗೆ ದಿನಕಳೆದಂತೆ ರಜಾ ದಿನವೂ ಮುಗಿಯುತ್ತಾ ಬಂತು. ತುಂಬಾ ಬೇಸರ. ನಾನು ನನ್ನ ಮನೆಯ ಕಡೆ ಹೊರಡುವ ದಿನ. ಅಜ್ಜಿ ನನಗೆ ಏನಾದರು ತಿಂಡಿ ಕಟ್ಟಿ ಕೊಡುತ್ತಾರೆ. ಒಂದು ಕಡೆ ಗೆಳತಿಯರನ್ನು ಬಿಟ್ಟು ಹೋಗಬೇಕೆಂಬ ಬೇಸರ. ಇನ್ನೊಂದು ಕಡೆ ಶಾಲೆ ಪ್ರಾರಂಭವಾಗುತ್ತದೆ ಎಂಬ ಸಂತೋಷ. ಅಜ್ಜಿ ಮನೆಯಲ್ಲಿ ಕಳೆದ ದಿನ ತುಂಬಾ ಸಂತೋಷದ ದಿನವಾಗಿತ್ತು.
.............................................ಕೆ ಬಿಂದು ಶ್ರೀ
10 ನೇ ತರಗತಿ
ಶ್ರೀ ರಾಮ ಪ್ರೌಡ ಶಾಲೆ, ಕಲ್ಲಡ್ಕ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಕಂಚಿಲ ಮನೆ, ಮಂಚಿ ಗ್ರಾಮ D. K
**********************************************