
ಗುರುವೇ ನಮಃ
Friday, July 23, 2021
Edit
ಸಪ್ತಮಿ ಅಶೋಕ್ ದೇವಾಡಿಗ .
7ನೇ ತರಗತಿ
ಶುಭದ ಆಂಗ್ಲ ಮಾಧ್ಯಮ ಶಾಲೆ
ಕಿರಿಮಂಜೇಶ್ವರ , ಉಡುಪಿ ಜಿಲ್ಲೆ
ಗುರುವೇ ನಮಃ
*****************************************
ಸುಂದರ ಸಮಾಜವೆಂಬ ತೋಟದ ಯಾಜಮಾನನೇ ಶಿಕ್ಷಕರು. ವಿದ್ಯಾರ್ಥಿ ಎಂಬ ಗಾಳಿಪಟಕ್ಕೆ ಶಿಕ್ಷಕರೇ ಸೂತ್ರದಾರರು. ಪ್ರಪಂಚದ ಬೆಳಕು, ಕತ್ತಲೆಯ ದಾರಿ ದೀಪ ಮತ್ತು ನಮಗೆ ಶಕ್ತಿ ನೀಡುವ ಭರವಸೆ ನಮ್ಮ ಶಿಕ್ಷಕರು. ಪೋಷಕರು ಮಗುವಿಗೆ ಜನ್ಮ ನೀಡುತ್ತಾರೆ ಆದರೆ ಶಿಕ್ಷಕರು ಮಗುವಿಗೆ ಬದುಕನ್ನು ರೂಪಿಸುತ್ತಾರೆ. ನಾವು ಮುಂದೆ ಹಲವಾರು ಕ್ಷೇತ್ರಗಳಲ್ಲಿ ಕೆಲಸಮಾಡಲು ಶಿಕ್ಷಕರೇ ಕಾರಣರಾಗುತ್ತಾರೆ. ಹೊಸ ತರಗತಿಗೆ ಬರುವ ನಮಗೆ ಹೊಸ ಶಿಕ್ಷಣದ ಸವಾಲಿನ ಸಮಸ್ಯೆಗಳನ್ನು ಶಿಕ್ಷಕರೇ ಬಗೆಹರಿಸುತ್ತಾರೆ. ಇಂಥ ಶಿಕ್ಷಕರನ್ನು ನಾವು ನಮ್ಮ ಜೀವನದ ಆಧಾರವೆಂದು ತಿಳಿದು ಅವರನ್ನು ಗೌರವಿಸುತ್ತಾ ಗುರುವೇ ನಮಃ. ಸರ್ವರೊಳ ಗುರು ಸರ್ವೋತ್ತಮ ಆಚಾರ್ಯ ದೇವೋ ಭವ. ಎಂಬಂಥ ಲೋಕೋಕ್ತಿಯು ಗುರು ಸ್ಥಾನದ ಶ್ರೇಷ್ಠತೆಯನ್ನು ತಿಳಿಸುತ್ತದೆ. ನಮ್ಮ ಮತ್ತು ಗುರುಗಳ ಸಂಬಂಧ ಚೆನ್ನಾಗಿರಲು ಈ ಕರೋನ ಅಡ್ಡಿಯಾಗಿದೆ. ಓ ದೇವರೇ ಆದಷ್ಟು ಬೇಗ ಕರೋನ ದೂರವಾಗಲಿ. ನಾವು ಎಂದಿನಂತೆ ಶಾಲೆ ಕಡೆ ಹೋಗುವಂತಾಗಲಿ ಎಂದು ಬಯಸುತ್ತಿದ್ದೇನೆ
.......................ಸಪ್ತಮಿ ಅಶೋಕ್ ದೇವಾಡಿಗ .
7ನೇ ತರಗತಿ
ಶುಭದ ಆಂಗ್ಲ ಮಾಧ್ಯಮ ಶಾಲೆ
ಕಿರಿಮಂಜೇಶ್ವರ , ಉಡುಪಿ ಜಿಲ್ಲೆ