-->
ವರ್ಣಿಸಲಸಾಧ್ಯ - ಕವನ

ವರ್ಣಿಸಲಸಾಧ್ಯ - ಕವನ

ಲಾವಣ್ಯ
10ನೇ ತರಗತಿ
ಸರಕಾರಿ ಪ್ರೌಢ ಶಾಲೆ ಕೊಳ್ನಾಡು ಕಾಡುಮಠ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ


               ವರ್ಣಿಸಲಸಾಧ್ಯ - ಕವನ
*********************************************
ನೇಸರನುದಯಿಸಿದನಾ ಬಾನಿನಲ್ಲಿ|
ಹಕ್ಕಿಗಳ ಚಿಲಿಪಿಲಿ ಮಧುರ ಗಾಯನ ಆಗಸದಲ್ಲಿ|
ನವ ಚೇತನ, ನವ ಹುರುಪಿನಿಂದ ಶುರುವಾದವು ದಿನಳು ನೇಸರನ ಕಿರಣದಿ|
ಕಂಗೊಳಿಸುವ ಪ್ರಕೃತಿಮಾತೆಯ ವರ್ಣಿಸಲಾಗದ ಸೊಬಗದು|

ಆ ಸೊಬಗ ಕಾಣುತಲಿ ಕಳೆದೇ ಹೋದವು
ನನ್ನೆರಡು ಕಂಗಳು|
ಉಸಿರ ನೀಡಿ, ಹಸಿವು ನೀಗಿಸಿ,
ಸಲಹುತಿಹಳು ಪ್ರಕೃತಿಮಾತೆ |
ಅವಳಿಗೆಂದಿಗೂ ನಾವು ಚಿರಋಣಿ|
ಸಾಗರದ ಅಲೆಗಳ ಸದ್ದು ಶಾಂತವಾಗಿ
ಶುಭ್ರವಾದ ನೀರು ಕಂಗೊಳಿಸುತ್ತಾ
ಮನ ಸೆಳೆದವು|

ಸಾಗರದ ಸೊಬಗ ಕಂಡು ನನ್ನ ನಯನಗಳು ಕಳೆದೇ ಹೋದವು|
ಮನಸು ಪ್ರಶಾಂತವಾಯಿತು, ನವಹುರಿಪಿನಿಂದ|
ಕನಸುಗಳು ಜನಿಸ ತೊಡಗಿದವು
ತೃಪ್ತಿಕರ ಮನಸ್ಸಿನಿಂದ|
ನೋವನ್ನು ಮರೆಸುವ ಶಕ್ತಿ,
ನಗುವನ್ನು ತೃಪ್ತಿಕರ ಮನೋಭಾವನೆಯನ್ನು ನೀಡುವ ಶಕ್ತಿ ನಿನ್ನಲ್ಲಿದೆ ಓ ಪ್ರಕೃತಿಮಾತೆ|

ನೀ ನೀಡಿದೆ ಉಸಿರು ಅದಕ್ಕೆ ನೀನೇ ಒಡತಿಯು|
ಕಳೆದುಹೋದ ಕ್ಷಣಗಳನ್ನು
ಸಿಹಿ ನೆನಪುಗಳ
ತೋರಣವನ್ನು ಕಟ್ಟಿದವು ಸಾಗರದಂಚಿನ
ಅಲೆಗಳು|
ಮತ್ತೆ ಹುಮ್ಮಸ್ಸು ತುಂಬಲು ಪ್ರಕೃತಿಮಾತೆಯ ನವಿರಾದ ಚೇತನಗಳು |
ಪೂರ್ವ ಜನ್ಮದ ಪುಣ್ಯವೋ ಏನೋ
ಈ ಕರುನಾಡಿನಲ್ಲಿ ಜನಿಸಿದ್ದು
ಮಗುದೊಮ್ಮೆ ಪ್ರಕೃತಿ ಮಾತೆಯ ಮಡಿಲಲ್ಲಿ ಮಗುವಾಗಿದ್ದು|

ನಿಸರ್ಗದ ಪರಿಯ ವರ್ಣಿಸಲಸಾಧ್ಯ|
ಅದರ ಸೊಬಗ ವಿವರಿಸಲಸಾಧ್ಯ|
ಕಂಗೊಳಿಸುವ ಭೂರಮೆಯ ಸೊಬಗದು|
ಕಣ್ಮನ ಸೆಳೆಯುವ, ನವ ಉಲ್ಲಾಸದ ಹುರುಪನ್ನುoಟು ಮಾಡುವ ಚೆಲುವದು ವರ್ಣಿಸಲಸಾಧ್ಯ|

..............................................ಲಾವಣ್ಯ
10ನೇ ತರಗತಿ
ಸರಕಾರಿ ಪ್ರೌಢ ಶಾಲೆ ಕೊಳ್ನಾಡು ಕಾಡುಮಠ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

*******************************************

Ads on article

Advertise in articles 1

advertising articles 2

Advertise under the article