ಟಂಕಾಗಳು
Saturday, July 24, 2021
Edit
ಕುಮಾರಿ. ರಂಜಿತಾ ಶೇತಸನದಿ.
ಹತ್ತನೇ ತರಗತಿ.
ಶಿಕ್ಷಣ ಸಮಿತಿ ಮಹಾತ್ಮಾ ಗಾಂಧೀ ಪ್ರೌಢ ಶಾಲೆ ದೇವಗಿರಿ , ದೇವಗಿರಿ ಗ್ರಾಮ
ತಾ/ಜಿ /ಹಾವೇರಿ.
ಟಂಕಾಗಳು
*****************************
ಟಂಕಾ: ರಂಗವಲ್ಲಿ
ಮನೆಯ ಮುಂದೆ
ರಂಗವಲ್ಲಿಯನ್ನೀಕ್ಕಿ
ಕಣ್ವಡಲಿಗೆ
ಸುಮಧುರತೆಯಿಂದ
ಕಂಗೊಳಿಸುತಲಿದೇ.
ಟಂಕಾ:ಕವಿ
ಮನದಾಸೆಗೆ
ಕಲ್ಪನೆ ಮೂಡಿ ಬಂದ
ವಿಷಯವನ್ನು
ಮನಕಲಕುವಂತೆ
ತಾ ಗೀಚುತಲಿಹನು.
ಟಂಕಾ:ತಾಯಿ
ತಾಯಿ ನಾ ನಿನ್ನ
ಪೂಜಿಸಲಿಯೇನು
ನವ ಮಾಸದಿ
ತಾ ಕಷ್ಟಗಳನ್ನುಂಡು
ಗರ್ಭದಲ್ಲಿರಿಸಿದೆ.
ಟಂಕಾ:ಮಳೆ
ಬೋರ್ಗರೆಯುವ
ಮಳೆ ಹನಿಗಳಿಗೆ
ಕೈ ಒಡ್ಡಿ ನಾನು
ನೃತ್ಯದಾಗಸದಲ್ಲಿ
ತಾ ಹಿಗ್ಗುತಲಿಯೇನು
ಟಂಕಾ:ಸೌಂದರ್ಯ
ಒಡವೆಗಳೇ
ಹೆಣ್ಣಿಗೆ ಸೌಂದರ್ಯ
ಅಲಂಕಾರವೆ
ಆಕೆಗೆ ಯವ್ವನವು
ಇದೆಂದು ಮುಗಿಯದು .
......................ಕುಮಾರಿ. ರಂಜಿತಾ ಶೇತಸನದಿ.
ಹತ್ತನೇ ತರಗತಿ.
ಶಿಕ್ಷಣ ಸಮಿತಿ ಮಹಾತ್ಮಾ ಗಾಂಧೀ ಪ್ರೌಢ ಶಾಲೆ ದೇವಗಿರಿ , ದೇವಗಿರಿ ಗ್ರಾಮ
ತಾ/ಜಿ /ಹಾವೇರಿ.
************************************************