ಗುಬ್ಬಿ ಮರಿ - ಕವನ
Wednesday, July 21, 2021
Edit
ಲಾವಣ್ಯ
10ನೇ ತರಗತಿ
ಸರಕಾರಿ ಪ್ರೌಢ ಶಾಲೆ ಕೊಳ್ನಾಡು ಕಾಡುಮಠ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಗುಬ್ಬಿ ಮರಿ - ಕವನ
****************************************
ಚಂದದ ಮುದ್ದಿನ ಗುಬ್ಬಿ ಮರಿ
ಕೊಡಲೇ ನಿನಗೆ ಕಡ್ಲೆಪುರಿ
ಚಿಂವ್ ಚಿಂವ್ ಎನ್ನುತ ಹಾಡುತ ಬಾರೆ
ಹಾಡುತ ಬಂದು ಎನ್ನ ಸಂಗವ ಸೇರೆ
ಗೂಡಿನಲ್ಲಿ ಮರಿಗಳ ಸಂಗ
ಕಾಯುತಿದೆ ನಿನ್ನಯ ಕಾಣಲು
ಊಟ ಮಾಡಿಸಿ ಬೇಗ ಬಾರೆ
ಬಂದು ಎನ್ನಯ ಸಂಗವ ಸೇರೆ
ಹಾರುವ ಸ್ಪರ್ಧೆಯ ಆಡೋಣ ನಾವು
ನಿನ್ನ ರೆಕ್ಕೆಯ ನೀಡೆನಗೆ
ಆದರೂ ರೆಕ್ಕೆಯು ಚಿಕ್ಕದೆಂಬ ಭಯವು
ಮನಸಿನ ಒಳಗೊಳಗೆ
ಬೇಡ ಗುಬ್ಬಿಮರಿ ನಿನ್ನಯ ರೆಕ್ಕೆ....
ಆದರೂ ಆಗಸದಲ್ಲಿ ಹಾರುವ ಆಸೆ
ಜಗವ ಒಮ್ಮೆ ಸುತ್ತುವ ಆಸೆ..!
ಮರಿಗಳ ಕೂಗು ಕೇಳಿತ್ತು
ಗುಬ್ಬಿ ಗೂಡಿಗೆ ಹಾರಿತ್ತು
ತುಸುಹೊತ್ತು ಮರಿಗಳ ಮಲಗಿಸಿ
ಎನ್ನಯ ಸಂಗವ ಸೇರಿತ್ತು
ಅಕ್ಕಿಕಾಳು ಕೊಟ್ಟೆನು ಅದಕೆ
ಸಂತೋಷದಿಂದ ತಿಂದಿತ್ತು
ಮರಿಗಳಿಗೂ ಸ್ವಲ್ಪ ಉಣಿಸಿತ್ತು..
ಹಾರುತ ಹಾರುತ ಹೊರಟಿತ್ತು
.............................................ಲಾವಣ್ಯ
10ನೇ ತರಗತಿ
ಸರಕಾರಿ ಪ್ರೌಢ ಶಾಲೆ ಕೊಳ್ನಾಡು ಕಾಡುಮಠ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************