
ನನ್ನ ಅಪ್ಪಯ್ಯ - ಕವನ
Wednesday, July 21, 2021
Edit
ಚೈತ್ರ ಸಿ. ಕೆ 9 ನೇ ತರಗತಿ
ಪ್ರಿಯದರ್ಶಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೆಟ್ಟಂಪಾಡಿ ಪುತ್ತೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ನನಗೆ ಜಗಧೀರ
ಮನೆಯಲ್ಲಿ ಮಗಧೀರ
ಯಾರಿದು ಧೀರ....?
ಅವರೇ ನನ್ನ ಅಪ್ಪಯ್ಯ....!
ಅಪ್ಪಾ ಎನ್ನಲು ನೀ ನನ್ನ ಮುಂದಿರುವೆ
ಅಮ್ಮನ ಗದರಿಗೆ ಹೆದರಿ ನಿನ್ನಲ್ಲಿ ಬರುವೆ
ಅಮ್ಮನ ದೂರನ್ನು ನಿನ್ನಲ್ಲಿ ನಾನು ಹೇಳುವೆ
ನನ್ನೊಂದಿಗೆ ಎಂದು ನೀನು ಗೆಳೆಯನಾಗಿರುವೆ..!!
ನಾ ಅತ್ತರೆ ನೀ ಅಳುವೆ
ನಾ ನೊಂದರೆ ನಿನಗೆ ನೋಯುತ್ತೆ
ಎನ್ನ ಬೇಡಿಕೆಯನ್ನು ನೀ ಕೊಡಿಸುವೆ
ಎಂದೂ ನಾ ನಿನ್ನ ಮರೆಯಲಾರೆ..!!
ನಿನ್ನ ಕೈ ಹಿಡಿದು ನಾ ಮೊದಲ ಬಾರಿ ನಡೆದೆ
ನಿನ್ನ ಕೈ ಹಿಡಿದು ನಾ ಶಾಲೆಗೆ ತೆರಳಿದೆ....!
........................ಚೈತ್ರ ಸಿ. ಕೆ 9 ನೇ ತರಗತಿ
ಪ್ರಿಯದರ್ಶಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೆಟ್ಟಂಪಾಡಿ ಪುತ್ತೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*********************************************