
ಅಂದ ಚಂದ ದೇವರ ಲೀಲೆ - ಕಥೆ
Monday, July 26, 2021
Edit
ಜೀವಿತಾ 9ನೇ ತರಗತಿ
ಸರಕಾರಿ ಪ್ರೌಢಶಾಲೆ ಪಂಜಿಕಲ್ಲು.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಅಂದ ಚಂದ ದೇವರ ಲೀಲೆ - ಕಥೆ
ಒಂದು ಊರಿನಲ್ಲಿ ಸುಂದರವಾದ ಲಕ್ಷ್ಮೀ ದೇವಾಲಯವಿತ್ತು. ಆ ದೇವಾಲಯದ ಮುಂದೆ ಮಲ್ಲಿಗೆ, ಗುಲಾಬಿ, ತಾವರೆ ಗಿಡಗಳಿದ್ದವು. ಅದರಲ್ಲಿ ಮಲ್ಲಿಗೆಯು ತುಂಬಾ ಸೊಂಪಾಗಿ ಬೆಳೆದಿತ್ತು. ಗುಲಾಬಿಯಲ್ಲಿ ಮೊಗ್ಗುಗಳಿದ್ದವು. ತಾವರೆ ಕೆಸರಿನಲ್ಲಿತ್ತು. ದೇವಾಲಯಕ್ಕೆ ಬರುವ ಭಕ್ತಾದಿಗಳು ಯಾವಾಗಲೂ ಮಲ್ಲಿಗೆಯನ್ನೆ ಹೊಗಳುತ್ತಿದ್ದರು ಮತ್ತು ಅದನ್ನೇ ಪ್ರತಿನಿತ್ಯ ಕೊಯ್ದು ದೇವರಿಗೆ ಅರ್ಪಿಸುತ್ತಿದ್ದರು.
ಒಂದು ದಿನ ಮಲ್ಲಿಗೆಗೆ ಜಂಭ ಬಂದು ತಾವರೆಯನ್ನು ನೋಡಿ ನಗುತ್ತಾ ಹೇಳುತ್ತದೆ " ಹೇ.... ತಾವರೆಯೆ , ನೀನು ಬರೀ ಕೇಸರಿನಲ್ಲೇ ಇರುವೆ. ನಿನ್ನನ್ನು ಯಾರೂ ನೋಡುವುದೇ ಇಲ್ಲ." ಎಂದು ಜೋರಾಗಿ ನಗಾಡಿತು. ತಾವರೆಗೆ ಬೇಸರವಾದರೂ ಏನೂ ಮಾತನಾಡಲಿಲ್ಲ. ಆದರೆ ಇದನ್ನು ಗುಲಾಬಿ ಕೇಳಿಸಿಕೊಳ್ಳುತಿತ್ತು. ಹೀಗೆ ಸಮಯ ಉರುಳುತಿತ್ತು. ಗುಲಾಬಿ ಹೂಗಳು ಸೊಂಪಾಗಿ ಅರಳಿ ನಿಂತು ಎಲ್ಲರ ಮನವನ್ನು ಆಕರ್ಷಿಸಿತು. ಆ ದಿನ ದೇವಾಲಯಕ್ಕೆ ಬಂದ ಭಕ್ತಾದಿಗಳು ಗುಲಾಬಿ ಹೂವನ್ನು ನೋಡಿ ಮನಸೋತು ಅದನ್ನು ಕೊಯ್ದು ದೇವಾಲಯಕ್ಕೆ ಅರ್ಪಿಸಿದರು. ಇದನ್ನು ನೋಡಿದ ಮಲ್ಲಿಗೆ ಗಿಡ ಗುಲಾಬಿ ಗಿಡವನ್ನು ಕೇಳಿತು " ಇಂದು ಎಲ್ಲರೂ ನಿನ್ನನ್ನು ಹೊಗಳುತ್ತಿದ್ದಾರಲ್ಲ..... ಕಾರಣವೇನು?" ಆಗ ಗುಲಾಬಿ ಗಿಡ ಉತ್ತರಿಸಿತು.... " ನೋಡು ಇಲ್ಲಿ ಯಾವುದೂ ಶಾಶ್ವತವಲ್ಲ . ನೀನು ಅಂದು ತಾವರೆಗೆ ಹೇಳಿದ ಮಾತು ನೆನಪಿಸಿಕೋ. ಕಾಲ ಒಂದೇ ರೀತಿ ಇರುವುದಿಲ್ಲ. ನಿನ್ನನ್ನು ಪರಿಮಳಕ್ಕಾಗಿ, ನನ್ನನ್ನು ಚಂದಕ್ಕಾಗಿ ದೇವರಿಗೆ ಅರ್ಪಿಸುವರು. ಆದರೆ ತಾವರೆಯಲ್ಲಿ ಸದಾ ಲಕ್ಷ್ಮೀ ತಾಯಿಯು ವಾಸವಿರುತ್ತಾರೆ. ನಾವೆಲ್ಲ ಒಂದೇ ಇಲ್ಲಿ. ಬೇರೆ ಬೇರೆ ಅಲ್ಲ. ಎಲ್ಲರೂ ಒಂದು ದಿನ ದೇವರ ಪಾದವನ್ನೇ ಸೇರುತ್ತೇವೆ " ಎಂದಿತು.
ನೀತಿ : ಯಾರನ್ನೂ ಕೀಳಾಗಿ ಕಾಣಬೇಡಿ. ನಾವೆಲ್ಲ ಭೂಮಿ ತಾಯಿಯ ಮಕ್ಕಳಷ್ಟೆ. ನಮ್ಮ ವ್ಯಕ್ತಿತ್ವವನ್ನು ಯಾರಿಗೂ ಪರಿಚಯಿಸಬೇಕಿಲ್ಲ. ಕಾಲ ಬಂದಾಗ ನಾವು ಹೇಳದಿದ್ದರೂ ಎಲ್ಲರಿಗೂ ತಿಳಿಯುತ್ತದೆ. ಗುಣವೇ ಶ್ರೇಷ್ಠ."
" ಸರ್ವೇ ಜನೋ ಸುಖಿನೋ ಭವಂತು"
...........................ಜೀವಿತಾ 9ನೇ ತರಗತಿ
ಸರಕಾರಿ ಪ್ರೌಢಶಾಲೆ ಪಂಜಿಕಲ್ಲು.
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
******************************************