ಸಂತೆ - ಕವನ
Friday, July 16, 2021
Edit
ಧೃತಿ 9 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಗ್ರಾಮ ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಸಂತೆ -ಕವನ
***********************
ಸೋಮವಾರ ಊರಿನ ಸಂತೆ
ತುಂಬಾ ಜನ ಸೇರಿರುವರಂತೆ
ಇದನು ಕೇಳಿ ಅಪ್ಪನ ಜೊತೆಗೆ
ಹೊರಟಿಹ ಪುಟ್ಟ ಸಂತೆಯ ಕಡೆಗೆ
ಬಲೂನು ಪೀಪಿ ವಾದ್ಯದ ರಾಗ
ಓಡುವರಲ್ಲಿಗೆ ಮಕ್ಕಳು ಬೇಗ
ಸೋರೆ ,ಬದನೆ, ಹೀರೆಯ ಸುಗ್ಗಿ
ಆಯಿತಲಿದ್ದರು ಬಗ್ಗಿ ಬಗ್ಗಿ
ಬಗೆ ಬಗೆ ಹಣ್ಣುಗಳ ರಾಶಿ ಇತ್ತು
ವ್ಯಾಪಾರಿ ಕೂಗುವ ಶೈಲಿಯ ಮತ್ತು
ಮೀನನು ಮಾರಲು ಮೂಲೆಯ ಜಾಗ
ಕುಕ್ಕಿ ತಿನ್ನುವ ಕಾಗೆಯ ಯೋಗ
ವಿವಿಧ ಆಟಿಕೆ - ಸಿಹಿ ತಿಂಡಿಯನು
ಸಂತಸದಿ ಪುಟ್ಟ ಕೊಂಡಿಹನು
...............................ಧೃತಿ 9 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************