
ಕೊರೋನ - ಕವನ
Friday, July 16, 2021
Edit
ಅನುಲಕ್ಷ್ಮಿ 9ನೇ ತರಗತಿ
ಮಂಚಿ-ಕೊಳ್ನಾಡು ಪ್ರೌಢಶಾಲೆ. ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಕೊರೋನ - ಕವನ
********************************
ಮುಖಕ್ಕೆ ಮಾಸ್ಕ್ ಹಾಕೋಣ
ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ..
ಕೈಗೆ ಸ್ಯಾನಿಟೈಸರ್ ಹಾಕೋಣ
ಸ್ವಚ್ಛತೆಯನ್ನು ಕಾಪಾಡೋಣ..
ಶೀತ,ಜ್ವರ ಬಂದಲ್ಲಿ ಸೂಕ್ತ ಚಿಕಿತ್ಸೆಯ ಪಡೆಯೋಣ
ಕೊರೋನಾದ ವಿರುದ್ಧ ಹೋರಾಡೋಣ..
ಅನಗತ್ಯ ಓಡಾಟವನ್ನು ನಿಲ್ಲಿಸೋಣ
ಪೋಲಿಸರಿಗೆ ಸಹಕರಿಸೋಣ..
ಅನ್ಯಜನರ ಸಂಪರ್ಕ ದೂರವಾಗಲಿ
ಇತರೆ ಕಾರ್ಯಕ್ರಮ ನಿಲ್ಲಿಸೋಣ
ಬಡವರಿಗೆ ಸಹಾಯ ಮಾಡೋಣ
ಮಾನವೀಯತೆಯನ್ನು ಮೆರೆಯೋಣ..
ಕೊರೋನಾ ಲಸಿಕೆಯನ್ನೆಲ್ಲರೂ ಪಡೆಯೋಣ
ಕೊರೋನ ಮುಕ್ತರಾಗಿ ಸುಖವಾಗೋಣ..
ಜನರಲ್ಲಿ ಜಾಗೃತಿ ಮೂಡಿಸೋಣ
ಮನೆಯಲ್ಲಿದ್ದು ಸುರಕ್ಷಿತವಾಗೋಣ.
ಓದುತಾ ಕಲಿಯುತಾ ಸಾಗೋಣ
ಸಮಯವ ಹೀಗೆ ಕಳೆಯೋಣ.....
.................................ಅನುಲಕ್ಷ್ಮಿ 9ನೇ ತರಗತಿ
ಮಂಚಿ-ಕೊಳ್ನಾಡು ಪ್ರೌಢಶಾಲೆ. ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************