
ಮುಂಜಾನೆ - ಕವನ
Friday, July 16, 2021
Edit
ಧೃತಿ 9 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಗ್ರಾಮ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಮುಂಜಾನೆ - ಕವನ
***********************************
ಮುಂಜಾನೆ ತಂಪಾದ ಗಾಳಿ
ಎಚ್ಚರಿಸಿತೆಲ್ಲರನು ಕೂಗುವ ಕೋಳಿ
ಮಂಜಿನ - ಸುಂದರ ವಾತಾವರಣ
ಉತ್ಸಾಹ ಮನ ತುಂಬಲಿ ಕಾರಣ
ಸಜ್ಜಾಗಿ ನಿಂತಿಹ ಪೂರ್ಣ ಸೂರ್ಯ
ಪೂರೈಸಲೆಲ್ಲರದು ಕೆಲಸ ಕಾರ್ಯ
ಬಿರಿದಿತ್ತು ಸುಂದರ ಪುಷ್ಪ ಮಲ್ಲಿಗೆ
ಸಂತಸದಿ ಬಂದಿತು ದುಂಬಿ ಅಲ್ಲಿಗೆ
ಚಿಲಿಪಿಲಿ ಎನ್ನುತಾ ಗುಂಪಲಿ ಹಕ್ಕಿ
ಕಾಳನು ತಿಂದಿತು ಕೊಕ್ಕಲಿ ಕುಕ್ಕಿ
ಮುಂಜಾನೆ ಪರಿಸರ ಬಲು ಸೊಗಸು
ಮುದವ ಕಂಡಿತು ನನ್ನ ಮನಸು...
................................ಧೃತಿ 9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************