
ಹಸಿರು ಯೋಧರು - 37
Wednesday, July 21, 2021
Edit
ಜೂನ್ 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರು ಲೇಖನಮಾಲೆ
ಮಕ್ಕಳ ಜಗಲಿಯ
ಹಸಿರು ಯೋಧರು - 37
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನಗಿಡ
ಸದಾ ಹಸಿರು ಎಲೆಗಳಿಂದ ಕೂಡಿದ ಮತ್ತು ಎತ್ತರವಾಗಿ ಬೆಳೆಯುವ ಮರ ಹಲಸು. ಇದು ದೊಡ್ಡ ಗಾತ್ರದ ಹಲಸಿನ ಕಾಯಿಗಳನ್ನು ಬಿಡುತ್ತದೆ. ಹಲಸಿನ ಕಾಯಿಯಿಂದ ಚಿಪ್ಸ್, ಹಪ್ಪಳ, ಉಪ್ಪಿನಕಾಯಿ ಮತ್ತು ತುಳುನಾಡಿನ ಪ್ರಸಿದ್ಧ ಉಪ್ಪಡ್ ಪಚ್ಚಿಲ್ ತಯಾರಿಸಬಹುದು. ಹಲಸಿನ ಹಣ್ಣು ತಿನ್ನಲು ತುಂಬಾ ರುಚಿ ಮತ್ತು ಪರಿಮಳವುಳ್ಳದ್ದು. ಕೃಷ್ಣಾ಼ಷ್ಟಮಿಯಂದು ಇವುಗಳ ಎಲೆಗಳಿಂದ ಕೊಟ್ಟಿಗೆ ತಯಾರಿಸುತ್ತಾರೆ. ಹಲಸಿನ ಹಣ್ಣಿನ ಗಟ್ಟಿ ,ಮುಳ್ಕ ಮತ್ತು ಪಾಯಸ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಹಲಸಿನ ಬೀಜಗಳಲ್ಲಿ ಕಬ್ಬಿಣದ ಸತ್ವ ಹೆಚ್ಚಾಗಿರುವುದರಿಂದ ಇದನ್ನು ಪುಡಿ ಮಾಡಿ ಮೈದದೊಂದಿಗೆ ಬೆರೆಸಿ ಚಪಾತಿ ಮಾಡುವರು.
ಆಯುರ್ವೇದದ ಪ್ರಕಾರ ಹಲಸಿನ ಹಣ್ಣು ಕ್ಯಾನ್ಸರ್ ನ್ನು ದೂರ ಮಾಡುತ್ತದೆ. ಅದೇ ರೀತಿ ರಕ್ತಪರಿಚಲನೆ ಮತ್ತು ಮಲಬದ್ದತೆ ನಿವಾರಣೆಗೆ ಪ್ರಯೋಜನಕಾರಿಯಾಗಿದೆ.
ಇದು ತುಂಬಾ ಬೆಲೆ ಬಾಳುವ ಮತ್ತು ಗಟ್ಟಿಮುಟ್ಟಾದ ಮರ. ಮನೆ ಸಾಮಾಗ್ರಿ ಮತ್ತು ಪೀಠೋಪಕರಣಗಳನ್ನು ಇದರಿಂದ ತಯಾರಿಸುತ್ತಾರೆ. ಮರದ ಕೊಂಬೆಗಳು ಮತ್ತು ಎಲೆಗಳನ್ನು ಪೂಜಾ ಸಮಯದಲ್ಲಿ ಉಪಯೋಗಿಸುತ್ತಾರೆ. ಈ ರೀತಿಯಾಗಿ ಹಲಸು ತುಂಬಾ ಪ್ರಯೋಜನಕಾರಿ ಮರ.
ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ನೆಲನೆಲ್ಲಿ
ನೆಲನೆಲ್ಲಿ ಗಿಡದ ಕಷಾಯವು ಕಾಮಾಲೆಗೂ ಅತ್ಯುತ್ತಮ ಔಷಧಿ. ಇದನ್ನು ಹೆಚ್ಚಾಗಿ ಜೀರಿಗೆಯೂಂದಿಗೆ ಬೇಯಿಸಿ ಕುಡಿಯುತ್ತಾರೆ. ಇದೊಂದು ಉತ್ತಮ ರೋಗ ನಿರೋಧಕ ಶಕ್ತಿಯುಳ್ಳ ಗಿಡವಾಗಿದೆ. ಈ ಕೊರೋನ ಕಾಲದಲ್ಲಿ ಇದರ ಕಷಾಯ ಅಥವಾ ರಸವು ಉತ್ತಮ ಪರಿಣಾಮಕಾರಿಯಾಗಿದೆ. ನೆಲನೆಲ್ಲಿ ಗಿಡದ ಎಲೆಯನ್ನು ಜಜ್ಜಿ ರಸ ತೆಗೆದು ಹಚ್ಚುವುದರಿಂದ ಚರ್ಮ ರೋಗಗಳು ನಿವಾರಣೆಯಾಗುತ್ತವೆ. ನಮ್ಮ ಸುತ್ತ ಮುತ್ತ ಗಿಡಗಳನ್ನು ನೆಟ್ಟು ನೈಸರ್ಗಿಕವಾಗಿ ನಮ್ಮ ಪರಿಸರದಿಂದ ಆಮ್ಲಜನಕ ದೊರೆಯುವಂತೆ ಮಾಡೋಣ .
ದ. ಕ. ಜಿ. ಪ. ಹಿ. ಪ್ರಾ. ಶಾಲೆ ನೆಟ್ಲ. ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕರಿಬೇವಿನ ಗಿಡ
ಕರಿಬೇವು ಇದು ಹೆಚ್ಚಾಗಿ ಹಿತ್ತಲಲ್ಲಿ ಬೆಳೆಯುವ ಬಹೂಪಯೋಗಿ ಔಷಧೀಯ ಗುಣಗಳು ಇರುವ ಸಸ್ಯ. ದಿನ ನಿತ್ಯದ ಅಡುಗೆಯಲ್ಲಿ ಕರಿಬೇವಿನ ಸೊಪ್ಪಿನ ಉಪಯೋಗ ತುಂಬಾ ಮಹತ್ವದ್ದು. ಒಗ್ಗರಣೆ,ಚಟ್ನಿ, ವಡೆ, ನಿರ್ಪಟ್ಟು ಮತ್ತು ಬೋಂಡ ತಯಾರಿಯಲ್ಲಿ ಕರಿಬೇವಿನ ಎಲೆಗಳು ರುಚಿಯನ್ನು ಹೆಚ್ಚಿಸುತ್ತವೆ.
ಕರಿಬೇವಿನ ಎಲೆಗಳು ಔಷಧೀಯ ಗುಣವನ್ನು ಹೊಂದಿವೆ. ಕೂದಲು ಉದ್ದವಾಗಿ,ದಪ್ಪವಾಗಿ ಮತ್ತು ಕಪ್ಪಾಗಿ ಬೆಳೆಯಲು ಕರಿಬೇವಿನ ಎಲೆಗಳಿಂದ ಮಾಡಿದ ಎಣ್ಣೆ,ಸಾಬೂನು ಮತ್ತು ಶ್ಯಾಂಪೂ ತಯಾರಿಸಿ ಉಪಯೋಗಿಸುವರು. ಇವುಗಳ ಎಲೆಗಳಿಂದ ಮಾಡಿದ ಕಷಾಯದಿಂದ ಜ್ವರ,ಶೀತ,ಕಫ ಮತ್ತು ಮೂತ್ರ ಸಂಬಂಧೀ ಕಾಯಿಲೆಗಳನ್ನು ಗುಣಪಡಿಸಬಹುದು.
ಇವುಗಳ ಬೀಜಗಳಿಂದ ಕರಿಬೇವಿನ ಹಿಂಡಿ ಮತ್ತು ಕೀಟನಾಶಕವನ್ನು ತಯಾರಿಸಬಹುದು. ಒಟ್ಟಾರೆಯಾಗಿ ಕರಿಬೇವು ಒಂದು ಬಹೂಪಯೋಗಿ ಪರಿಸರಸ್ನೇಹಿ ಸಸ್ಯ ಎನ್ನಬಹುದು.
ಸುದಾನ ವಸತಿಯುತ ಶಾಲೆ ಪುತ್ತೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಸುರಿಬೈಲು ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪಪ್ಪಾಯಿ ಗಿಡ
ಸರಕಾರಿ ಪ್ರೌಢಶಾಲೆ ಸಿದ್ದಕಟ್ಟೆ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತೆಂಗಿನಗಿಡ
ಸುದಾನ ವಸತಿಯುತ ಶಾಲೆ ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
ಮೌಂಟ್ ಕಾರ್ಮೆಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಶಿರ್ಥಾಡಿ ಮೂಡಬಿದ್ರೆ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಗೇರುಬೀಜದ ಗಿಡ
ಇನ್ಫ್ಯಾಂಟ್ ಜೀಸಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮೊಡಂಕಾಪು ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ.
ಗಿಡದ ಹೆಸರು : ದೊಡ್ಡಪತ್ರೆ
ಸರಕಾರಿ ಪ್ರೌಢಶಾಲೆ ನಾರಾವಿ. ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ
ತುಳಸಿಯಲ್ಲಿರುವ ಅನೇಕ ಔಷಧೀಯ ಗುಣಗಳು, ಧಾರ್ಮಿಕ ಮತ್ತು ಆರೋಗ್ಯದ ದೃಷ್ಟಿಯಿಂದ ಅನೇಕ ಮಹತ್ವವನ್ನು ಪಡೆಯಲು ಸಹಕಾರಿಯಾಗಿದೆ. '
ತುಳಸಿ ಗಿಡವು ವಾತಾವರಣ ದಲ್ಲಿರುವ ಇಂಗಾಲದ ಡೈ ಆಕ್ಸೈಡನ್ನು ಆಮ್ಲಜನಕ ವನ್ನಾಗಿ ಪರಿವರ್ತಿಸುವ ಗುಣವನ್ನು ಹೊಂದಿದೆ. ಈ ಔಷಧೀಯ ಸಸ್ಯವು ನಮ್ಮ ದೇಹಕ್ಕೆ ಅತ್ಯಂತ ಪ್ರಯೋಜನಕಾರಿ ಗಿಡಮೂಲಿಕೆಯಾಗಿದೆ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ದೇವ ಮಾತಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಮ್ಟೂರು , ಕರಿಂಗಾಣ, ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಅಲಿಶಾ ಪ್ರಿನ್ಸಿಯ ಸಿಕ್ವೇರಾ 6ನೇ ತರಗತಿ
ದೇವ ಮಾತಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಮ್ಟೂರು , ಕರಿಂಗಾಣ, ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಸೈಂಟ್ ಆನ್ಸ್ ಬೋಳಾರ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಸಿ ಮೆಣಸಿನ ಗಿಡ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೋಂತಿಮಾರು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸಿಲ್ವರ್ ಗಿಡ