ಹಸಿರು ಯೋಧರು - 34
Saturday, July 10, 2021
Edit
ಜೂನ್ - 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರು ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ಸವೋ೯ದಯ ಪ್ರೌಢಶಾಲೆ ಪೆರಿಯಡ್ಕ, ಉಪ್ಪಿನಂಗಡಿ
ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು:- ಬೇವಿನ ಗಿಡ
ಬೇವಿನ ಗಿಡವನ್ನು ಒಳ್ಳೆ ಬೇವು, ಕಹಿ ಬೇವು, ಬೇವು, ಎಂದು ಹೀಗೆ ಹಲವು ಹೆಸರುಗಳಿಂದ ಗುರುತಿಸುತ್ತಾರೆ. ಬೇವಿನ ಮರ ಮಾಚ್೯ ಏಪ್ರಿಲ್ ತಿಂಗಳಿನಲ್ಲಿ ಗೊಂಚಲು ಗೊಂಚಲಾಗಿ ಸಣ್ಣ ಬಿಳಿಹೂಗಳನ್ನು ಬಿಡುತ್ತದೆ. ಭಾರತೀಯರು ಚಾಂದ್ರಮಾನ ಯುಗಾದಿ ಆಚರಣೆಯಲ್ಲಿ ಬೇವು ಬೆಲ್ಲವನ್ನು ಜೀವನದಲ್ಲಿ ಸಿಹಿ ಕಹಿಗಳನ್ನು ಸಮಾನವಾಗಿ ಪರಿಗಣಿಸಬೇಕೆಂದು ಸಾಂಕೇತಿಕವಾಗಿ ಬಳಸುತ್ತಾರೆ. ಬೇವಿನ ಗಿಡದ ಅಂಗಗಳಾದ ಎಲೆ, ತೊಗಟೆ, ಹೂ, ಕಡ್ಡಿ, ಬೀಜ, ಎಣ್ಣೆ ಹಾಗೂ ಬೇರುಗಳು ಔಷಧೀಯ ಗುಣಗಳನ್ನು ಹೊಂದಿದೆ. ವೈದ್ಯಕೀಯ ಲೋಕಕ್ಕೆ ಬೇವು ಒಂದು ಅದ್ಭುತ ಮರ. ಕಣ್ಣಿನ ತೊಂದರೆ, ಹೊಟ್ಟೆ ನೋವು, ಕೆಮ್ಮು, ಉಬ್ಬಸ, ನಿವಾರಣೆಗೆ ಬಳಸಲ್ಪಡುತ್ತದೆ.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಜ್ಞೋಡಿ , ಗುಂಡೂರಿ , ವೇಣೂರು ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅತ್ತಿ ಮರ
ಚಳಿಗಾಲದಲ್ಲಿ ಈ ಮರದ ಎಲೆಯು ಉದುರಿ ಹೊಸ ಚಿಗುರು ಬರುತ್ತದೆ. ತಂಪಾದ ಪ್ರದೇಶದಲ್ಲಿ ಕಂಡುಬರುತ್ತದೆ. ಎಲೆಗಳು ಗಾಢವಾದ ಹಸಿರು ಬಣ್ಣವಿರುತ್ತದೆ. ಗುಂಪು ಗುಂಪಾಗಿ ಕಾಯಿ ಬಿಡುತ್ತದೆ . ಈ ಮರದ ಎಲ್ಲಾ ಭಾಗಗಳು ಉಪಯೋಗವಾಗುತ್ತದೆ
ಎಳೆಯ ಕಾಯಿಗಳು ಪಲ್ಯ ಮಾಡಲು ಉಪಯೋಗವಾಗುತ್ತದೆ. ಈ ಗಿಡವು ಅನೇಕ ಬಗೆಯ ಔಷಧೀಯ ಗುಣಗಳನ್ನು ಹೊಂದಿದೆ
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ಸಿ ಬಿ ಎಸ್ ಇ)
ನೆಹರೂ ನಗರ, ಪುತ್ತೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಶೋಕ ವೃಕ್ಷದ ಗಿಡ
ನಾನು ಇಂದು ವಿಶ್ವ ಪರಿಸರ ದಿನದ ಅಂಗವಾಗಿ ಅಶೋಕ ವೃಕ್ಷದ ಗಿಡವನ್ನು ನಮ್ಮ ಮನೆಯ ತೋಟದಲ್ಲಿ ನೆಟ್ಟೆನು. ಈ ಅಶೋಕ ವೃಕ್ಷವು ಮಧ್ಯಮ ಗಾತ್ರದ ನಿತ್ಯ ಹಸುರಿನ ಒಂದು ಸುಂದರವಾದ ಮರ. ೬-೮ ಮೀಟರ್ ಎತ್ತರ ಬೆಳೆಯುತ್ತದೆ. ನೀಳವಾಗಿ ಚೂಪಾಗಿರುವ ಎಲೆಗಳಿಂದ ಕೂಡಿದ ಮರದ ತುಂಬಾ ಗೊಂಚಲು ಗೊಂಚಲು ಹೂಗಳು ಮನಸ್ಸಿಗೆ ಮುದ ನೀಡುತ್ತದೆ. ಈ ಗಿಡದ ಕಾಯಿಗಳು ಕಂದು ಬಣ್ಣದವು. ೧೦ ಸೆಂಟಿಮೀಟರ್ ಉದ್ದವಾಗಿರುವ ಕಾಯಿಗಳ ಒಳಗಡೆ ಸಾಲಾಗಿ ಬೀಜಗಳಿರುತ್ತವೆ. ಪೂರ್ವ- ಈಶಾನ್ಯ ಭಾರತದ ಕಾಡುಗಳಲ್ಲಿ ಇದು ಹೇರಳವಾಗಿ ಕಂಡುಬರುತ್ತದೆ.
ಚರಕ ಸಂಹಿತೆಯಲ್ಲಿ ಅಶೋಕ ವೃಕ್ಷದ ಔಷಧೀಯ ಗುಣಗಳ ಉಲ್ಲೇಖವಿದೆ. ಅಶೋಕ ವೃಕ್ಷದ ತೊಗಟೆ, ಹೂ, ಬೀಜಗಳು ಒಣಗಿಸಿ, ಪುಡಿ ಮಾಡಿ ಔಷಧಿಗಾಗಿ ಬಳಸುತ್ತಾರೆ. 'ಅಶೋಕಾರಿಷ್ಟ', 'ಅಶೋಕಘೃತ' ಎಂಬ ಔಷಧಿಗಳನ್ನು ತಯಾರಿಸುತ್ತಾರೆ.
ಹೀಗೆ ಅಶೋಕ ವೃಕ್ಷವು ಒಂದು ಬಹುಪಯೋಗಿ ವೃಕ್ಷವಾಗಿದೆ.
ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಲೋವೆರಾ ಗಿಡ
ಶ್ರೀ ಗುರುದೇವ ವಿದ್ಯಾ ಪೀಠ ಒಡಿಯೂರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು; ಹಲಸಿನ ಗಿಡ
ಹಲಸಿನ ಹಣ್ಣಿನಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಹಲಸಿನ ಮರದಿಂದ ವಿವಿಧ ರೀತಿಯ ಮರದ ಪೀಠೋಪಕರಣಗಳನ್ನು ತಯಾರಿಸುತ್ತಾರೆ.
ಹಸಿದಾಗ ಹಲಸಿನ ಹಣ್ಣು ತಿನ್ನು ಎಂಬ ಗಾದೆ ಮಾತಿದೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ.ಮೂಡ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪಪ್ಪಾಯಿ ಗಿಡ
ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಪೆರಾಜೆ
ಬಂಟ್ವಾಳ ತಾಲೂಕು ದ. ಕ. ಜಿಲ್ಲೆ
ಗಿಡದ ಹೆಸರು : ದಾಸವಾಳ.
ದೇವಾಮಾತಾ ಆಂಗ್ಲ ಮಾಧ್ಯಮ ಶಾಲೆ ಕರಿಂಗಾನ, ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅರಸಿನ ಗಿಡ
ರಕ್ತ ದ ಸೋರಿಕೆಯನ್ನು ತಡೆಯಲು ಈ ಅರಸಿನದ ಹುಡಿ ಉಪಯೋಗವಾಗುತ್ತದೆ. ಮದುಮೇಹ ರೋಗವನ್ನು ಹೊಂದಿರುವವರು ಈ ಅರಸಿನ ದ ಹುಡಿಯನ್ನು ಹಾಲಿಗೆ ಹಾಕಿ ಸೇವನೆ ಮಾಡಿದರೆ ರೋಗ ಸ್ವಲ್ಪ ನಿಯಂತ್ರಣ ಕ್ಕೆ ಬರುವುದು. ಮಹಿಳೆಯರು ತಮ್ಮ ಮುಖದ ಕಾಂತೀಯ ಸೌಂದರ್ಯಕ್ಕೂ ಉಪಯೋಗಿಸಬಹುದು.
ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಪೆರಾಜೆ
ಬಂಟ್ವಾಳ ತಾಲೂಕು ದ. ಕ. ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
ಶ್ರೀ ಗುರುದೇವ ವಿದ್ಯಾ ಪೀಠ ಒಡಿಯೂರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನೇರಳಕಟ್ಟೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು; ಮಾವಿನ ಗಿಡ
ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಪೆರಾಜೆ
ಬಂಟ್ವಾಳ ತಾಲೂಕು ದ. ಕ. ಜಿಲ್ಲೆ
ಸರಕಾರಿ ಪ್ರೌಢಶಾಲೆ ನೀರ್ಕೆರೆ
ದಕ್ಷಿಣ ಕನ್ನಡ ಜಿಲ್ಲೆ
ಸೈಂಟ್ ಆಂಟನಿ ಹಿರಿಯ ಪ್ರಾಥಮಿಕ ಶಾಲೆ ಅಲ್ಲಿಪಾದೆ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ