ಫಲ ತೂಗಿದ ಗಿಡ
Sunday, June 27, 2021
Edit
ಭಾರತಿ ಸಿ (ತುಳಸಿ ಕೈರಂಗಳ )
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಫಲ ತೂಗಿದ ಗಿಡ
ನಮ್ಮ ಯಾವುದೇ ಕೆಲಸ - ಕಾರ್ಯಗಳಲ್ಲಿ ಕಾರಣ ಅಥವಾ ಉದ್ದೇಶವೊಂದಿದ್ದರೆ ಅದು ಹೆಚ್ಚು ಫಲಪ್ರದವಾಗುತ್ತದೆ ಎನ್ನುವುದರಲ್ಲಿ ನನಗೆ ಹೆಚ್ಚು ನಂಬಿಕೆ. ನಮ್ಮ ಸ್ವಂತ ಜಾಗದಲ್ಲಿ ಬೇಕಾದಷ್ಟು ಗಿಡಗಳನ್ನು ನೆಡುತ್ತೇವೆ. ಆದರೆ ನಾವು ಕರ್ತವ್ಯ ನಿರ್ವಹಿಸುವ ಜಾಗದಲ್ಲೂ ಗಿಡ ನೆಡಬೇಕೆನ್ನುವುದು ಯೋಚನೆಯಾಗಿತ್ತು. ಒಂದು ಕಾರಣದಿಂದ ಒಂದು ಗಿಡ ಬೆಳೆಯುವುದಾದರೆ ನಾವ್ಯಾಕೆ ಕಾರಣಗಳನ್ನು ಸೃಷ್ಟಿಸಬಾರದು ಎಂದು ಆಲೋಚಿಸಿದೆ. ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನನಗೆ ಪ್ರೌಢಶಾಲೆಗೆ ಭಡ್ತಿ ಹೊಂದುವ ಸಂಭ್ರಮ ಇನ್ನಷ್ಟು ನನ್ನಲ್ಲಿ ಉತ್ತೇಜನ ತುಂಬಿತು.
2020 ಸೆಪ್ಟೆಂಬರ್ 4 ರಂದು ನನ್ನ ಮೂಲ ಶಾಲೆಯಿಂದ ಭಡ್ತಿಗೊಂಡು ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢ ಶಾಲೆ ನಾರ್ಶ ಮೈದಾನ ಇಲ್ಲಿಗೆ ಬಂದೆ. ಬಂದವಳೇ ಸಹೋದ್ಯೋಗಿಗಳನ್ನು ಒಪ್ಪಿಸಿ ಸವಿ ನೆನಪಿಗಾಗಿ ಅವರ ಜೊತೆ ಸೇರಿ ಒಂದು ಗಿಡ ನೆಟ್ಟೆ. ನಾನು ನೆಟ್ಟ ಪುಟ್ಟ ಚೆರ್ರಿ ಹಣ್ಣಿನ ಗಿಡ .......!! ಮಕ್ಕಳನ್ನು ಯಾವ ರೀತಿ ಕಾಳಜಿ ಪ್ರೀತಿಯಿಂದ ನೋಡಿಕೊಂಡಿದ್ದೇನೋ ಅದೇ ರೀತಿ ಪುಟ್ಟ ಮಗುವಿನಂತೆ ಲಾಲನೆ.. ಪಾಲನೆ ... ಪೋಷಣೆ ಮಾಡಿದೆ ನನ್ನ ಗಿಡವನ್ನು... ಗಿಡವೂ ನಳನಳಿಸುತ್ತಾ .... ದಿನದಿಂದ ದಿನಕ್ಕೆ ಬಾನೆತ್ತರ ಬೆಳೆಯಲಾರಂಭಿಸಿತು .... ಪ್ರತಿನಿತ್ಯ ಶಾಲೆಯಲ್ಲಿ ಗಾಡಿ ನಿಲ್ಲಿಸಿ ಒಮ್ಮೆ ನನ್ನ ಗಿಡದತ್ತ ಕಣ್ಣು ಹಾಯಿಸಿ ಅದರ ಬೆಳವಣಿಗೆಯನ್ನು ಕಂಡು ಮನದಲ್ಲೇ ಹರ್ಷಿಸುತ್ತಿದ್ದೆ .....! ಅತೀ ಬೇಗನೆ ಬೆಳೆಯುತ್ತಾ ಸಣ್ಣ ಸಣ್ಣ ಬಿಳಿಯ ಹೂಗಳನ್ನು ಬಿಡಲಾರಂಭಿಸಿತು ನನ್ನ ಪ್ರೀತಿಯ ಗಿಡ...! ಸಣ್ಣ ಸಣ್ಣ ಬಾನಾಡಿಗಳೂ ಒಂದು ದಿನ ಚಿಲಿಪಿಲಿಗುಟ್ಟುತ್ತಾ ಹಣ್ಣು ಯಾವಾಗ ನೀಡುವೆ...? ಎಂದು ಪ್ರಶ್ನಿಸಲಾರಂಭಿಸಿದವು...!! ನಾನೂ ಕೂಡಾ ಕಾತರದಿಂದ ಕಾಯುತ್ತಿದ್ದೆ ನನ್ನ ಗಿಡ ಬಿಡುವ ಹಣ್ಣಿಗಾಗಿ....!!
ಮೊನ್ನೆ 21ನೇ ಜೂನ್ 2021 ರಂದು ಲಾಕ್ ಡೌನ್ ಮುಗಿದು ಶಾಲೆಯತ್ತ ನಡೆದಾಗ ಉದ್ದುದ್ದ ರೆಂಬೆಗಳಲ್ಲಿ ಕಾಯಿ ಬಿಟ್ಟು ನನಗಾಗಿಯೇ ಕಾಯುತ್ತಿತ್ತು....! ನನ್ನ ಪ್ರೀತಿಯ ಗಿಡ....! ಸಣ್ಣ ಗಿಡ...!! ಸಣ್ಣ ಹಣ್ಣುಗಳಾದರೂ ಅದು ನೀಡಿದ ಸಂತಸ ಸಂಭ್ರಮ ಹೇಳತೀರದು.... ಬೆಲೆ ಕಟ್ಟಲಾಗದ್ದು ......!!
......................ಭಾರತಿ ಸಿ (ತುಳಸಿ ಕೈರಂಗಳ )
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ