ಹಸಿರು ಯೋಧರು - 31
Sunday, June 27, 2021
Edit
ಜೂನ್ 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರು ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ಎಸ್.ಎಲ್.ಎನ್.ಪಿ. ವಿದ್ಯಾಲಯ ಪಾಣೆಮಂಗಳೂರು, ಬಂಟ್ವಾಳ ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹೊಂಗೆ ಗಿಡ.
ತಂಪಾದ ನೆರಳನ್ನು ಕೊಡುವ ಗಿಡ. ಹಾಸನಕ್ಕೆ ಹೋಗಿದ್ದಾಗ ದೊಡ್ಡ ಹೊಂಗೆ ಮರದ ತಂಪಾದ ನೆರಳಿಗೆ ಮನ ಸೋತು ಅದರ ಬೀಜಗಳನ್ನು ಹೆಕ್ಕಿ ಮನೆಗೆ ತಂದು ಸಸಿ ಮಾಡಿ ನಾನು ಮತ್ತು ನನ್ನ ಅಣ್ಣ ಸೇರಿ ನೆಟ್ಟು ಬೆಳೆಸುತ್ತಿರುವ ನಮ್ಮ ಪ್ರೀತಿಯ ಗಿಡ. ಇದರ. ವೈಜ್ಞಾನಿಕ ಹೆಸರು ಮಿಲೆಟಿಯ ಪಿನ್ನಾಟ. ನಾನು ಪತ್ರಿಕೆಯಲ್ಲಿ ಓದಿದ ಪ್ರಕಾರ ಈ ಗಿಡದಿಂದ ಅನೇಕ ಉಪಯೋಗಗಳಿವೆ. ಇದರ ಬೀಜಗಳಿಂದ ಹೊಂಗೆ ಎಣ್ಣೆಯನ್ನು ತಯಾರಿಸುತ್ತಾರೆ. ಇದು ಅನೇಕ ಔಷಧಿ ತಯಾರಿಸುವಲ್ಲಿ ಹಾಗೂ ಜೈವಿಕ ಇಂಧನ ತಯಾರಿಕೆಯಲ್ಲಿ ಬಳಕೆ ಯಾಗುತ್ತದೆ. ಇದರ ಎಲೆ ಮತ್ತು ಬೀಜವನ್ನು ಜೈವಿಕ ಗೊಬ್ಬರವಾಗಿ ಉಪಯೋಗಿಸುತ್ತಾರೆ. ಈ ಗಿಡವು ನಮ್ಮ ಭೂಮಿಯ ಅಂತರ್ಜಲ ಮಟ್ಟವನ್ನೂ ವಾತಾವರಣದ ಸಮತೋಲನವನ್ನು ಕಾಪಾಡುತ್ತದೆ. ಇದಲ್ಲದೇ ನಮ್ಮ ಮನೆಯ ಪುಟ್ಟ ಪರಿಸರದಲ್ಲಿ ೩೦ ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದೇವೆ.
ಗುಣಶ್ರೀ ವಿದ್ಯಾಲಯ ಸಿದ್ಧಕಟ್ಟೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ನೆಲ್ಲಿಕಾಯಿ ಗಿಡ
ನಾನು ಈ ಸಾರಿ ನೆಲ್ಲಿಕಾಯಿ ಮರವನ್ನು ನನ್ನ ತೋಟದಲ್ಲಿ ತಮ್ಮನ ಜೊತೆ ನೆಟ್ಟಿದ್ದೇನೆ. ನೆಲ್ಲಿಕಾಯಿ ಮರದಲ್ಲಿ ನೆಲ್ಲಿಕಾಯಿ ಆಗುತ್ತದೆ ಇದರಲ್ಲಿ ಕಬ್ಬಿಣ, ರಂಜಕ,ಮತ್ತು ಕ್ರೋಮಿಯಂ ನಂತಹ ಖನಿಜಗಳ ಜೊತೆ ವಿಟಮಿನ್ 'ಸಿ' ಮತ್ತು ಕ್ಯಾಲ್ಸಿಯಂ ಅಂಶಗಳು ಹೇರಳವಾಗಿದೆ. ಇದು ಮನುಷ್ಯನ ದೇಹದ ಸಂಪೂರ್ಣ ಆರೋಗ್ಯಕ್ಕೆ ಉತ್ತಮ. ಇದನ್ನೂ ಆಯವೇ೯ದ ಔಷಧ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಚರ್ಮ, ಕೂದಲಿನ ಹಾಗೂ ದೇಹದ ತೂಕ ನಿವ೯ಹಣೆಗೂ ಸಹಕಾರಿ, ಮುಖ್ಯವಾಗಿ ಮಧುಮೇಹಿಗಳು ನೆಲ್ಲಿ ಕಾಯಿಯನ್ನು ಉಪಯೋಗಿಸುದರಿಂದ ರಕ್ತದಲ್ಲಿ ಸಕ್ಕರೆಯಂಶ ಹತೋಟಿಗೆ ಬರುತ್ತದೆ.
ತರಗತಿ :6
ಶಾಲೆಯ ಹೆಸರು : ಗುಣಶ್ರೀ ವಿದ್ಯಾಲಯ ಸಿದ್ದಕಟ್ಟೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ನಿಂಬೆಗಿಡ
ಇಂದು ನನ್ನ ಮನೆಯ ಹಿತ್ತಿಲಿನಲ್ಲಿ ಲಿಂಬೆ ಹಣ್ಣಿನ ಗಿಡವನ್ನು ನೆಟ್ಟಿನಿರುತ್ತೇನೆ. ಈ ಮರವು ನೈಸರ್ಗಿಕ ಹಣ್ಣನ್ನು ಕೊಟ್ಟು ನಮ್ಮ ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಇದರ ರುಚಿ ಹುಳಿಯಾಗಿದ್ದು ಬಾಯಾರಿಕೆಯ ದಣಿವನ್ನು ನೀಗಿಸುತ್ತದೆ ಆದ್ಯಾತ್ಮ್ಮಿಕ ವಿಚಾರದಲ್ಲಿ ಕೂಡ ಲಿಂಬೆ ಹಣ್ಣಿಗೆ ಬಹಳ ಪ್ರಾಮುಖ್ಯತೆ ಇರುತ್ತದೆ.ಇದು ಆಯುರ್ವೇದ ಮದ್ದಿನ ಗುಣಗಳನ್ನು ಹೊಂದಿದೆ. ಹಳದಿ ಬಣ್ಣದ ಹಣ್ಣುಗಳನ್ನು ತಂಪು ಪಾನೀಯವಾಗಿ ಹಾಗೂ ಅಡಿಗೆಗೂ ಕೂಡ ಹೇರಳವಾಗಿ ಬಳಸುತ್ತಾರೆ. ಮಾವಿನ ನಂತರ ಅತಿ ಹೆಚ್ಚು ಬೇಡಿಕೆ ಇರುವ ಹಣ್ಣಿನ ಬೆಳೆಯೇ ನಿಂಬೆ. ತೋಟಗಾರಿಕೆ ಬೆಳೆಯಾಗಿರುವ ಇದು ಕಡಿಮೆ ಫಲವತ್ತತೆಯ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವ ಗುಣ ಹೊಂದಿದೆ. ಇದು ವಿಟಮಿನ್ ಸಿ ಅನ್ನು ಹೊಂದಿದೆ.
ಶಾರದಾ ಗಣಪತಿ ವಿದ್ಯಾ ಕೇಂದ್ರ ಕೈರಂಗಳ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಶಾರದಾ ಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿ ನಗರ ಕೈರಂಗಳ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಲಕ್ಷ್ಮಣ ಫಲ
ಈ ಗಿಡದಲ್ಲಿ ಬೇಳೆಯುವ ಹಣ್ಣು ಎಲ್ಲಾ ರೀತಿಯ ಕ್ಯಾನ್ಸರ್ ರೋಗಗಳಿಗೆ ರಾಮಬಾಣ. ಈ ಹಣ್ಣಿನ ಸೇವನೆಯಿಂದ ಕ್ಯಾನ್ಸರ್ ರೋಗ ಬಹಳ ಬೇಗ ಗುಣಮುಖವಾಗುತ್ತದೆ. ಈ ಗೀಡದ ಎಲೆಯ ರಸ ತುಂಬಾನೇ ಉಪಯೋಗ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸುತಯತ್ತದೆ. ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇರುತ್ತದೆ. ಕ್ಯಾನ್ಸರ ರೋಗಕ್ಕೆ ಮಾಡುವ ಕೀಮೋಥೇರಪಿಗಿಂತ ಬಹಳ ಬೇಗ ರೋಗವನ್ನು ಉಪಶಮನ ಮಾಡುತ್ತದೆ. ಚರ್ಮದ ಕಾಂತಿ ಹೆಚ್ಚುತ್ತದೆ. ಕೂದಲಿನ ಬೇಳವಣಿಗೆಗೆ ತುಂಬಾನೇ ಉಪಕಾರಿ.
ಸರಕಾರಿ ಪ್ರೌಢಶಾಲೆ ಸಿದ್ಧಕಟ್ಟೆ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕಹಿ ಬೇವಿನ ಗಿಡ
ಬೇವಿನ ಉಪಯೋಗ ಯುಗಾದಿಯಿಂದ ಆರಂಭವಾಗಿ ಚೈತ್ರ ಮಾಸವಿಡೀ ಮುಂಜಾನೆ ಬೇವಿನ ಎಲೆಗಳನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇಡೀ ವರ್ಷ ರೋಗ ಬರವುದಿಲ್ಲ ಎಂಬುದು ಹಿರಿಯರ ಮಾತು. ಹಾನಿಕಾರಕ ಜೀವಿಗಳಿಂದ ಹರಡುವ ಸೋಂಕುಗಳ ತಡೆಗೆ ಬೇವು ಉತ್ತಮ ಮದ್ದು. ಬೇವಿನ ಸೊಪ್ಪಿನ ಎಣ್ಣೆಯಲ್ಲಿ ಕಿಮಿನಾಶಕ ಗುಣವಿದೆ. ಬೇವಿನಕಡ್ಡಿಯನ್ನು ಕುಂಚದಂತೆ ಮಾಡಿ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆ ಬರುವುದಿಲ್ಲ.
ಕಡಿಮೆ ಮಳೆ ಬೀಳುವ ಮತ್ತು ಬಿಸಿಲಿನ ತಾಪ ಅಧಿವಾಗಿರುವ ಪ್ರದೇಶದಲ್ಲಿ ಬೇವಿನ ಮರ ಬೆಳೆಯುತ್ತವೆ. ಸೀಮೆಎಣ್ಣೆಯೊಂದಿಗೆ ಬೇವಿನ ಎಣ್ಣೆ ಬೆರೆಸಿ ದೀಪ ಉರಿಸುವುದರಿಂದ ಸೊಳ್ಳೆಗಳ ಕಾಟ ತಪ್ಪಿಸ ಬಹುವುದು. ಎಣ್ಣೆಯೊಂದಿಗೆ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ದೇಹಕ್ಕೆ ಲೇಪಿಸಿದರೆ ಸೊಳ್ಳೆಗಳು ಹತ್ತಿರಕ್ಕೆ ಬರುವುದಿಲ್ಲ.
ಸೈಂಟ್ ಥೋಮಸ್ ಆಂಗ್ಲ ಮಾದ್ಯಮ ಶಾಲೆ ಅಲಂಗಾರು ಮೂಡಬಿದ್ರೆ
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪಪ್ಪಾಯಿ ಗಿಡ
ಶಾಲೆಯ ಹೆಸರು : ಸರಕಾರಿ ಪ್ರೌಢ ಶಾಲೆ ಸರಪಾಡಿ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ವೀಳ್ಯೆದೆಲೆ
ಭಾರತೀಯ ಸಂಪ್ರದಾಯದಲ್ಲಿ
ವೀಳ್ಯೆದೆಲೆಗೆ ಹೆಚ್ಚಿನ ಮಹತ್ವವಿದೆ. ಕರಾವಳಿ ಕರ್ನಾಟಕದಲ್ಲಿ ಶುಭಕಾರ್ಯಗಳಿಗೂ ಎಲೆ ಅಡಿಕೆ ಬೇಕೆ ಬೇಕು ವೀಳ್ಯೆದೆಲೆ ಜೀವಸತ್ವ ಹೊಂದಿದ್ದು ಇದನ್ನು ನಿತ್ಯ ಊಟವಾದ ಬಳಿಕ ತಾಂಬೂಲದ ರೂಪದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಮುಖ್ಯವಾಗಿ ಮಕ್ಕಳ ಆರೋಗ್ಯಕ್ಕೆ ವೀಳ್ಯೆದೆಲೆ ಬಹಳ ಉಪಯುಕ್ತ.
● ಒಂದು ಚಮಚದಷ್ಟು ವೀಳ್ಯೆದೆಲೆ ರಸವನ್ನು ಮಕ್ಕಳಿಗೆ ಕೊಡುವುದರಿಂದ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಬಹುದು.
● ವೀಳ್ಯದೆಲೆಯನ್ನು ಅರೆದು ತೆಗೆದು ರಸವನ್ನು ಗಾಯಗಳಿಗೆ ಹಚ್ಚಿದರೆ ಗಾಯಗಳು ಶೀಘ್ರ ಗುಣವಾಗುತ್ತದೆ .
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳರಿಂಗೆ ಕಿನ್ಯ ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಚೆಂಡು ಹೂವಿನ ಗಿಡ
ಇನ್ಫೆಂಟ್ ಜೀಸಸ್ ಹಿರಿಯ ಪ್ರಾಥಮಿಕ ಶಾಲೆ ಮೊಡಂಕಾಪು ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ನುಗ್ಗೆಕಾಯಿ ಗಿಡ
ಸುದಾನ ವಸತಿಯುತ ಶಾಲೆ ಪುತ್ತೂರು
ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅರಶಿನ ಗಿಡ
ಶಾಲೆಯ ಹೆಸರು: ಸೈಂಟ್ ಜೋಸೆಫರ ಪ್ರೌಢಶಾಲೆ ಕಂಕನಾಡಿ, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ದಾಸವಾಳ ಗಿಡ
ರೊಜಾ ಮಿಸ್ತಿಕಾ ಪ್ರೌಢಶಾಲೆ ಕಿನ್ನಿಕಂಬಳ
ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
ರೊಜಾ ಮಿಸ್ತಿಕಾ ಪ್ರೌಢಶಾಲೆ ಕಿನ್ನಿಕಂಬಳ
ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಡಿಕೆ ಗಿಡ
ರೊಜಾ ಮಿಸ್ತಿಕಾ ಪ್ರೌಢಶಾಲೆ ಕಿನ್ನಿಕಂಬಳ
ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಾವಿನ ಗಿಡ
ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ರೊಜಾ ಮಿಸ್ತಿಕಾ ಪ್ರೌಢಶಾಲೆ ಕಿನ್ನಿಕಂಬಳ
ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮೊಟ್ಟೆ ಹಣ್ಣಿನ ಗಿಡ
ಸರಕಾರಿ ಪ್ರೌಢಶಾಲೆ ಕೊಕ್ರಾಡಿ
ದಕ್ಷಿಣ ಕನ್ನಡ ಜಿಲ್ಲೆ