ಧೂಳು ಹಿಡಿದಿದೆ ವೀಣೆ - ಕವನ
Wednesday, June 23, 2021
Edit
ಸುಹಾನ್ ನಾಯಕ್ 7ನೇ ತರಗತಿ
ಬಿ.ಎಂ.ಅ.ಹಿ.ಪ್ರಾ. ಶಾಲೆ, ಮೂರೂರು,
ಹಿರ್ಗಾನ, ಕಾರ್ಕಳ
ಉಡುಪಿ ಜಿಲ್ಲೆ
ಧೂಳು ಹಿಡಿದಿದೆ ವೀಣೆ - ಕವನ
ಪ್ರತಿ ವರ್ಷ ರಜೆ ಕಳೆದು
ಶಾಲಾರಂಭವಾಗುವ ಸಮಯ
ಮುಂದಿನ ತರಗತಿಗೆಂದು
ಹರ್ಷಿಸುವ ಸಮಯ
ಆದರೆ ಈ ವರುಷ
ತೆರೆಯಲಿಲ್ಲ ಬಾಗಿಲು
ಧೈರ್ಯವಿಲ್ಲ ಯಾರಿಗೂ
ದಾಟಲು ಮನೆ ಬಾಗಿಲು
ಯಾರದೋ ತಪ್ಪಿಗೆ
ಮಕ್ಕಳಿಗೇಕೆ ಈ ಶಿಕ್ಷೆ..?
ರೋಗದ ಪಾಲಾಯಿತೆಲ್ಲ
ಆಸೆ ಆಕಾಂಕ್ಷೆ..
ಧೂಳು ಹಿಡಿದಿದೆ ಸರಸ್ವತಿಯ
ವಿದ್ಯೆಯೆಂಬ ವೀಣೆಯು
ಮತ್ತೆ ಮೀಟಲಿ ತಂತಿ
ತೆರೆಯಲಿ ಶಾಲೆಯು..
...................ಸುಹಾನ್ ನಾಯಕ್ 7ನೇ ತರಗತಿ
ಬಿ.ಎಂ.ಅ.ಹಿ.ಪ್ರಾ. ಶಾಲೆ, ಮೂರೂರು,
ಹಿರ್ಗಾನ, ಕಾರ್ಕಳ ಉಡುಪಿ ಜಿಲ್ಲೆ