
ಹಂಚಿ ತಿಂದಾಗ ಗೆಳೆತನ ಹೆಚ್ಚಾಗುತ್ತದೆ - ಕಥೆ
Friday, June 18, 2021
Edit
ಪ್ರಥಮ್ ಪದ್ಯಾಣ 6ನೇ ತರಗತಿ
ರೋಟರಿ ಸೆಂಟ್ರಲ್ ಸ್ಕೂಲ್ ಮೂಡಬಿದ್ರಿ
ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಒಂದಾನೊಂದು ಊರಿನಲ್ಲಿ ಒಂದು ಇಲಿ ಇತ್ತು. ಆ ಇಲಿಗೆ ಇಬ್ಬರು ಗೆಳೆಯರಿದ್ದರು. ಒಂದು ಮೊಲ, ಇನ್ನೊಂದು ಗುಬ್ಬಚ್ಚಿ. ಮೂವರಲ್ಲಿ ಮೊಲ ತುಂಬ ಸ್ವಾರ್ಥಿಯಾಗಿತ್ತು. ಮೊಲ ಹೇಳಿತು. ನಾಳೆ ನನ್ನ ಜನ್ಮದಿನ. ನಾವೆಲ್ಲರೂ ನಾಳೆ ಪಾಯಸ ಮಾಡಿ ಹಂಚಿ ತಿನ್ನುವ ಎಂದು ಹೇಳಿತು. ಇಲಿಯು ಪಾಯಸ ಮಾಡಿ ಮೂವರಿಗೂ ಹಂಚಿ ಬಡಿಸಿತು. ಆದರೆ ಮೊಲಕ್ಕೆ ತನ್ನ ಮನಸ್ಸಿನಲ್ಲಿ ನಾನು ಸ್ವಲ್ಪ ಹೆಚ್ಚು ತಿನ್ನಬೇಕು..... ಇದು ನನ್ನ ಹುಟ್ಟುಹಬ್ಬ ಅಂದುಕೊಂಡಿತು. ಅಷ್ಟರಲ್ಲಿ ಇಲಿ ತನ್ನ ಉಳಿದ ಗೆಳೆಯರನ್ನು ಕರೆದುಕೊಂಡು ಬರುತ್ತೇನೆ. ಇನ್ನೂ ತಿನಿಸುಗಳನ್ನು ತರುತ್ತೇನೆ ಎಂದು ಹೇಳಿ ಹೊರಟಿತು. ಬರುವಾಗ ಎಲ್ಲರ ತಟ್ಟೆಯನ್ನು ಖಾಲಿ ಮಾಡಿತು ಮೊಲ. ಸ್ವಲ್ಪ ದಿನಗಳ ನಂತರ ಇಲಿಯ ಹುಟ್ಟುಹಬ್ಬ ಬಂದಿತು. ಆ ದಿನ ಇಲಿ ತನ್ನೆಲ್ಲ ಗೆಳೆಯರನ್ನು ಕರೆದು ತಿಂಡಿಯನ್ನು ಹಂಚಿ ತಿಂದಿತು. ಆಗ ಮೊಲಕ್ಕೆ ತನ್ನ ತಪ್ಪಿನ ಅರಿವಾಯಿತು.
..................ಪ್ರಥಮ್ ಪದ್ಯಾಣ 6ನೇ ತರಗತಿ
ರೋಟರಿ ಸೆಂಟ್ರಲ್ ಸ್ಕೂಲ್ ಮೂಡಬಿದ್ರಿ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ