-->
ಕೊರೋನ ವೈರಸ್ - ಲೇಖನ

ಕೊರೋನ ವೈರಸ್ - ಲೇಖನ

ಪೂಜಾ. ಎಂ.ಎಸ್     9 ನೇ ತರಗತಿ
 ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢಶಾಲೆ 
ವಾಣಿವಿಹಾರ ಅಳಿಕೆ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ


               ಕೊರೋನ ವೈರಸ್‌ 

ಜಗತ್ತಿನಾದ್ಯಂತ ಹರಡುತ್ತಿರುವ *ಕೋರೋನ ವೈರಸ್* ಭಾರತದಲ್ಲಿ ಜನಿಸಿದ್ದಲ್ಲ. ಇದು ಚೀನಾದ ವುಹಾನ್ ನಗರದಲ್ಲಿ ಹುಟ್ಟಿಕೊಂಡು ಭಾರತಕ್ಕೂ ಕಾಲಿಟ್ಟಿದೆ. ೨೦೦೩ರಲ್ಲಿ *ಸಾರ್ಸ್* ಎಂಬ ರೋಗವು ಕಾಣಿಸಿಕೊಂಡಿತ್ತು. ಈ ರೋಗ ಕೂಡ ಕೊರೊನ ವೈರಸನಿಂದಲೇ ಕೂಡಿತ್ತು. ಆಗ ಭಾರತೀಯರು ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ. ಸಾರ್ಸ್ ರೋಗಕ್ಕೆ ಹೋಲಿಸಿದರೆ ಕೊರೋನ ವೇಗವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಆದರಿಂದ ಇದು ತೀವ್ರತೆಯನ್ನು ಪಡೆದುಕೊಂಡಿದೆ.
         ೨೦೨೦ರ ಫೆಬ್ರುವರಿ ತಿಂಗಳ ಮೊದಲನೇ ವಾರದಲ್ಲಿ ಬದುಕು ಎಂದಿನಂತೆ ವೇಗದಲ್ಲಿ ಸಾಗುತ್ತಿತ್ತು. ಎಲ್ಲೆಡೆ ಮದುವೆ ಮುಂಜಿ ಮುಂತಾದ ಕಾರ್ಯಕ್ರಮಗಳ ಭರಾಟೆ. ಅಂಗಡಿಗಳು, ದೇವಸ್ಥಾನಗಳು, ಕಲ್ಯಾಣ ಮಂಟಪಗಳು ಜನಜಂಗುಳಿಯಿಂದ ಗಿಜುಗುಟ್ಟುತ್ತಿದ್ದವು. ಬಸ್ಸುಗಳು, ವಿಮಾನಗಳು, ರೈಲುಗಳು ಎಲ್ಲಿ ನೋಡಿದರಲ್ಲಿ ಜನ. ಇದ್ದಕ್ಕಿದ್ದಂತೆ ತೇಲಿಬಂದ 'ಚೀನಾದಿಂದ ರೋಗವೊಂದು ಹೊರಟಿದೆಯಂತೆ' ಎಂಬ ಮಾಹಿತಿ ಜನರ ಕಿವಿಗಳನ್ನು ತಲುಪಲೇ ಇಲ್ಲ. ಈ ರೋಗ ವೇಗವನ್ನು ಪಡೆದುಕೊಂಡು ಭಾರತವನ್ನು ಪ್ರವೇಶಿಸಿದ್ದು ಯಾರಿಗೂ ಗೊತ್ತಾಗಲಿಲ್ಲ. ಮಾರ್ಚ್ ೧೫ ರ ಹೊತ್ತಿಗೆ ನಮ್ಮ ದೇಶದಲ್ಲಿ ವೇಗ ಪಡೆದುಕೊಂಡ ಈ ಕೋರೋನ ರೋಗ ೧೫ ದಿನಗಳಲ್ಲಿ ೫೦೦ ಜನರಿಗೆ ಯಾವಾಗ ಅಂಟಿತೋ, ಸರಕಾರ ಜಾಗೃತವಾಯಿತು. ಪ್ರಧಾನಮಂತ್ರಿಯವರು ದೇಶವನ್ನುದ್ದೇಶಿಸಿ ಭಾಷಣ ಮಾಡಿ ' ಈ ರೋಗದಿಂದ ತಪ್ಪಿಸಿಕೊಳ್ಳಬೇಕಾದರೆ ಒಬ್ಬರಿಂದ ಒಬ್ಬರು ಅಂತರ ಕಾಪಾಡಿಕೊಳ್ಳಬೇಕು, ಇಲ್ಲದಿದ್ದರೆ ಈ ರೋಗ ಮಾರಣ ಹೋಮ ಮಾಡುತ್ತದೆ ' ಎಂದು ತಿಳಿಸಿದಾಗಲೆ ಜನರೆಲ್ಲ ಬೆಚ್ಚಿಬಿದ್ದರು. ' ರೋಗ ಬಂದವರ ಹತ್ತಿರ ಹೋದರೆ ಸಾಕಂತೆ ಇನ್ನೊಬ್ಬರಿಗೆ ರೋಗ ಹರಡುತ್ತದೆ, ಅವರು ಕೆಮ್ಮಿದರೆ , ಸೀನಿದರೆ, ಅವರಿಂದ ಗಾಳಿ ಬೀಸಿದರೆ ರೋಗ ಹರಡುವುದು ಖಾತ್ರಿ. ರೋಗ ಬಂದರೆ ಉಸಿರಾಡಲು ತೊಂದರೆ, 
 ಸಾವು ಅನಿವಾರ್ಯ. ಸತ್ತವರನ್ನು ಮುಟ್ಟಲು ಸಾಧ್ಯವಿಲ್ಲ , ಶವಸಂಸ್ಕಾರವೇ ಕಷ್ಟಸಾಧ್ಯ.' ಎಂಬಷ್ಟರ ಮಟ್ಟಿಗೆ ವರದಿಗಳು ಬಂದಾಗ ಜನರು ಭಯಭೀತರಾದರು. ಒಬ್ಬರಿಂದೊಬ್ಬರು ದೂರ ಇರುವಂತೆ ಮಾಡಲು ರೋಗದ ಪ್ರಸಾರವನ್ನು ತಡೆಗಟ್ಟಲು ಸರಕಾರವು ಘೋಷಿಸಿದ ಉಪಾಯವೇ *ಲಾಕಡೌನ್*.
      ಹೌದು.' ಲಾಕ್ ಡೌನ್ ' ಇಂತಹದ್ದೊಂದು ಶಬ್ದವನ್ನು ನಾವು ಕೇಳಿಯೇ ಇರಲಿಲ್ಲ. ರೈಲು ಬಂದ್, ವಿಮಾನ ಬಂದ್, ಬಸ್ಸು ಬಂದ್, ಟ್ಯಾಕ್ಸಿ ಬಂದ್, ಆಟೋ ಬಂದ್, ಜನರು ಹೊರಗೆ ಬರುವುದು ಬಂದ್. ಹೊರಬಂದವರಿಗೆ ಪೊಲೀಸರ ಲಾಠಿ ಪೆಟ್ಟು. ಇಂತಹ ಜನಭರಿತ ದೇಶದಲ್ಲಿ ಇಂತಹದ್ದೊಂದು ಆದೇಶವನ್ನು ಪಾಲಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರ ಸಿಕ್ಕಿತು. ಜನರೆಲ್ಲ ಮನೆಯ ಒಳಗೇ ಕುಳಿತರು. ಹೊರಗೆ ಬಂದವರು ಪೆಟ್ಟು ತಿಂದರು. ಹಳ್ಳಿಗಳು, ಪೇಟೆಗಳು, ನಗರಗಳು ಮೌನವಾದವು. ವಾಹನಗಳು ನಿಂತಿದ್ದರಿಂದ ವಾಯುಮಾಲಿನ್ಯ ಕಡಿಮೆಯಾಯಿತು. ರಸ್ತೆಗಳು ಸುಂದರಗೊಂಡವು. ಪೆಟ್ರೋಲ್ ಬೆಲೆ ಜಾಗತಿಕ ಮಟ್ಟದಲ್ಲಿ ಬಿದ್ದು ಹೋಯಿತು. ಷೇರು ಮಾರುಕಟ್ಟೆ ಒಂದೇ ವಾರದಲ್ಲಿ ಪಾತಾಳಕ್ಕೆ ಇಳಿಯಿತು. ಉತ್ಪಾದನೆ ಇಲ್ಲ, ಮಾರಾಟವೂ ಇಲ್ಲ. ಆದರೂ ಬದುಕು ಸಾಗಬೇಕಲ್ಲವೇ, ಹೊಟ್ಟೆ ಹೊರೆಯಬೇಕಲ್ಲವೇ. ಹೀಗಾಗಿ ಕೆಲವು ಅಗತ್ಯ ಸೇವೆಗಳಿಗೆ ಈ ಲಾಕ್ಡೌನ್ನಿಂದ ವಿನಾಯಿತಿ ನೀಡಲಾಯಿತು.
         
        ಹಿಂದೆ ಬಡವ ವೈನ್ - ಶಾಪ್ ನಲ್ಲಿ ಶರಾಬು ಕುಡಿದರೆ, ಶ್ರೀಮಂತ ಐಶಾರಾಮಿ ಮೊರೆ ಹೋಗುತ್ತಿದ್ದ. ಜನಸಾಮಾನ್ಯರು ಮಾರುತಿ - 800 ನಲ್ಲಿ ಓಡಾಡುತ್ತಿದ್ದರೆ , ಉಳ್ಳವರು ಬಿ.ಎಂ. ಡಬ್ಲ್ಯೂ ಕಾರಿನಲ್ಲಿ ಓಡಾಡುತ್ತಿದ್ದರು. ಆದರೆ *ಕೋರೋನ* ಸಮಾಜಕ್ಕೆ ಹಲವಾರು ರೀತಿಯ ಜೀವನ ಶೈಲಿಯನ್ನು ಪರಿಚಯಿಸಿದೆ. ಸರಳತೆಯ ಬದುಕನ್ನು ಕಲಿಸಿದೆ. ಜಗತ್ತಿಗೆ ಸಮಾನತೆಯ ಮಂತ್ರವನ್ನು ಸಾರಿದೆ. ಎಷ್ಟೇ ಶ್ರೀಮಂತನದರೂ, ಬಡವನಾದರೂ ಮನೆಯೊಳಗೆ ಬಂಧಿಯಾಗಲೇ ಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಮಾಸ್ಕ್, ಗ್ಲೌಸ್, ಕೈ ತೊಳೆಯುವ ದ್ರಾವಣ ಗಳನ್ನು ಬಳಸಲೇ ಬೇಕು. ಮನೆಯಲ್ಲೇ ಇರುವ ಆಹಾರ ಸಾಮಗ್ರಿಗಳನ್ನೆ ಊಟ ಮಾಡಬೇಕು. ಬ್ರ್ಯಾಂಡೆಡ್ ವಸ್ತುಗಳಂತು ಸಿಗುವುದು ಅಸಾಧ್ಯವೇ. ಕೋರೋನ ೧೪೦ ಕೋಟಿ ಭಾರತೀಯರ ಜಿವನ ಚಕ್ರವನ್ನು ಬದಲಿಸಿದೆ. ಸರಳವಾಗಿ ಬದುಕಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದೆ.

       ಕೋರೋನ ಪೀಡಿತರಿಗೆ ಉಸಿರಾಟದ ತೊಂದರೆ ಉಂಟಾಗುತ್ತದೆ. ಅವರಿಗೆ ಆಮ್ಲಜನಕ ನೀಡಬೇಕಾಗುತ್ತದೆ. ಆದರೆ ಈ ವರ್ಷ ಕೋರೋನಾವು ಭೀಕರವಾಗಿ ವ್ಯಾಪಿಸುತ್ತಿದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಮ್ಲಜನಕ ಮತ್ತು ಬೆಡ್ ವ್ಯವಸ್ಥೆ ಕೊರತೆಯಿದೆ. ದಿನಕ್ಕೆ ಸುಮಾರು ಜನ ತಮ್ಮ ಪ್ರಾಣಗಳನ್ನು ಬಿಡುತ್ತಿದ್ದಾರೆ. ನಮಗೆ ಕೋರೋನ ಸೋಂಕು ಹರಡುವ ಮುನ್ನ ನಾವು ಸರಿಯಾಗಿ ಮುನ್ನೆಚ್ಚರಿಕೆ ವಹಿಸಬೇಕು.

 ಎಲ್ಲರೂ ಮನೆಯಲ್ಲೇ ಇದ್ದು ಸುರಕ್ಷಿತವಾಗಿ ಇರಿ.
              
  ..............ಪೂಜಾ. ಎಂ.ಎಸ್ 9 ನೇ ತರಗತಿ
 ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢಶಾಲೆ ವಾಣಿವಿಹಾರ ಅಳಿಕೆ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ವಿಳಾಸ : ಮೂಡಾಯಿಬೆಟ್ಟು ಮನೆ,ಅಳಿಕೆ ಗ್ರಾಮ ಮತ್ತು ಅಂಚೆ,ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ.

Ads on article

Advertise in articles 1

advertising articles 2

Advertise under the article