-->
ಮಳೆರಾಯ - ಕವನ

ಮಳೆರಾಯ - ಕವನ

ಲಹರಿ ಜಿ.ಕೆ. 7 ನೇ ತರಗತಿ 
ತುಂಬೆ ಸೆಂಟ್ರಲ್ ಸ್ಕೂಲ್ ,
ಬಂಟ್ವಾಳ ತಾಲೂಕು  , ದಕ್ಷಿಣ ಕನ್ನಡ ಜಿಲ್ಲೆ


ಮಳೆರಾಯ
---------------- 
ಗುಡುಗು ಮಿಂಚು ಅಂದರೆ ಭಯ,
ಆದರೂ ಬರಲೇಬೇಕು ನೀ ಮಳೆರಾಯ,
ಈ ಭೂಮಿಯ ತಂಪಾಗಿಸಲು;
ನೀನಿಲ್ಲದಿರೆ ನಾವಿಲ್ಲ,
ನೀನಿಲ್ಲದಿರೆ ಬಾಳಿಲ್ಲ,
ನೀನಿಲ್ಲದಿರೆ ಈ ಧರೆಯೂ 
ಬರಡೂ.....ಬರಡೂ....

ಸಸ್ಯಸಂಕುಲಕೆ ನೀ ವರವು,
ನೀನಿದ್ದರೆ ಅವುಗಳು ಹಚ್ಚಹಸಿರು,
ನೀ ಮುನಿದರೆ ಮಾತ್ರ ಎಲ್ಲವೂ,
ನಾಶವೋ....ನಾಶ.....

ಕೈ ಮುಗಿಯುವೆವು ನಾವುಗಳು,
 ನೀ ಮುನಿಯದೆ ಭೂಮಿಗೆ ಬಂದುಬಿಡು,
ಈ ಭೂಮಿಯ ತಂಪಾಗಿಸಲು.....
 
      ..............ಲಹರಿ ಜಿ.ಕೆ. 7 ನೇ ತರಗತಿ 
      ತುಂಬೆ ಸೆಂಟ್ರಲ್ ಸ್ಕೂಲ್ ,
    ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ


Ads on article

Advertise in articles 1

advertising articles 2

Advertise under the article