-->
ಪ್ರಕೃತಿ - ಕವನ

ಪ್ರಕೃತಿ - ಕವನ

ಧೃತಿ    8 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಗ್ರಾಮ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ


ಪ್ರಕೃತಿ - ಕವನ

ಉಳಿದರೆ ಕಾಡು
ಉಳಿಯುವುದು ನಾಡು
ಮಾಡದಿರು ಪ್ರಾಣಿಗಳಿಗೆ ಕೇಡು
ಪ್ರಕೃತಿಗೆ ಬೆಳೆಯಲು ಬಿಡು
ನೀ ಕೇಳು ಓ ಮನುಜ...!

ಹಸಿರನು ಉಳಿಸಿ
ಹಸಿರನು ಬೆಳೆಸಿ 
ಕಾಡಿನ ನಾಶ
ಪ್ರಕೃತಿಯ ವಿನಾಶ
ನೀ ತಿಳಿದುಕೋ ಓ ಮನುಜ...!

ಪ್ರವಾಹ ಬರುವುವು
ಎಲ್ಲಾ ಕೊಚ್ಚಿ ಹೋಗುವುವು
ನೀ ಉಳಿಯಬೇಕಾದರೆ
ಪ್ರಕೃತಿಯ ನಾಶ ಮಾಡದಿರು
ನೀ ಅರ್ಥಮಾಡಿಕೋ‌ ಓ ಮನುಜ...!

ನೀ ಉಸಿರಾಡುವ ಗಾಳಿ
ಸಿಗುವುವು ಈ ಪ್ರಕೃತಿಯಿಂದ
ನೀ ಏನಾದರೂ ನಾಶ ಮಾಡಿದೆಯೋ
ಜೀವ ಸಂಕುಲಗಳ ನಾಶವಾಗುವುವು
ಅಳಿವಿಗೆ ನೀ ಕಾರಣವಾಗದಿರು
ನೀ ನೆನಪಿಡೋ ಓ ಮನುಜ....!!!

........................ಧೃತಿ 8 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಗ್ರಾಮ ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article