ಪರಿಸರ ಸಂರಕ್ಷಣೆ - ಕವನ
Saturday, June 12, 2021
Edit
ಅನುಲಕ್ಷ್ಮಿ 9 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ-ಕೊಳ್ನಾಡು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಪರಿಸರ ಸಂರಕ್ಷಣೆ - ಕವನ
ಗಿಡ-ಮರಗಳನ್ನು ನೆಡೋಣ
ನೀರು,ಮಣ್ಣು ಹಾಕಿ ಪೋಷಿಸೋಣ...!
ಇದರಿಂದ ಶುದ್ಧ ಗಾಳಿಯ ಸೇವಿಸೋಣ
ಆರೋಗ್ಯವಂತರಾಗಿ ಬಾಳೋಣ...!
ಗಿಡ-ಮರಗಳನ್ನು ಕಡಿಯದಿರೋಣ.
ಕಡಿದರೂ ಆ ಜಾಗದಲ್ಲಿ ಗಿಡಗಳನ್ನು ನೆಡೋಣ....!
ಪ್ರಾಣಿ-ಪಕ್ಷಿಗಳನ್ನು ಜೀವಿಸಲು ಬಿಡೋಣ
ಅವುಗಳು ವಾಸಿಸಲು ಮರಗಳನ್ನು ಕಡಿಯುವುದನ್ನು
ನಿಲ್ಲಿಸೋಣ...!!
ಅದರ ಬದಲು ಲಭ್ಯ ಸ್ಥಳಗಳಲ್ಲಿ ಗಿಡಗಳನ್ನು ಬೆಳೆಸೋಣ...!
ಅದರ ಹತ್ತು ಹಲವು ಉಪಯೋಗಗಳನು ತಿಳಿಯೋಣ...!!
ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ನಿಲ್ಲಿಸೋಣ
ಕಸವನ್ನು ಕಸದ ತೊಟ್ಟಿಗೆ ಹಾಕೋಣ...!
ಪರಿಸರ ಮಾಲಿನ್ಯ ಮಾಡುವುದನ್ನು ನಿಲ್ಲಿಸೋಣ...!
ಪರಿಸರವನ್ನು ಸ್ವಚ್ಚವಾಗಿರಿಸೋಣ...!!
ಗಿಡ-ಮರಗಳನ್ನು ನೆಡಲು ಎಲ್ಲರಲ್ಲೂ ಜಾಗೃತಿ ಮೂಡಿಸೋಣ..!
ಗಿಡಗಳನ್ನು ಬೆಳೆಸುವಲ್ಲಿ ಮಹತ್ತರವಾದ ಪಾತ್ರ ವಹಿಸೋಣ...!
ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸೋಣ..!
ಗಿಡಗಳನು ಬೆಳೆಸಿ ಪರಿಸರವನ್ನು ಹಚ್ಚ-ಹಸಿರಾಗಿಸೋಣ...!!
..............ಅನುಲಕ್ಷ್ಮಿ 9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ-ಕೊಳ್ನಾಡು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ