ಕೊರೋನ - ಕವನ
Wednesday, June 30, 2021
Edit
ಧನ್ಯಶ್ರೀ 10ನೇ ತರಗತಿ
ಸರಕಾರಿ ಪ್ರೌಢಶಾಲೆ ಬಡಗ ಯೆಕ್ಕಾರು.
ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಕೊರೋನ - ಕವನ
ನಮ್ಮ ಈ ಸುಂದರ ಜೀವನ...
ಬಂದೇ ಬಿಟ್ಟಿತು ದುಷ್ಟ ಕೊರೋನ....
ಚೀನಾದಿಂದ ಆಯಿತು ಇದರ ಆಗಮನ...
ಶೀತ, ಜ್ವರ, ಕೆಮ್ಮು ಇದರ ಲಕ್ಷಣ...
ನಾವಾಗಿ ಬಿಟ್ಟೆವು ಅದರ ಮುಂದೆ ಸಾಧಾರಣ....
ನಾಯಕರು ಹೇಳುತ್ತಿದ್ದಾರೆ ಮನೆಯಲ್ಲೇ ಕುಳಿತು ಸ್ವತಃ ಮಾಡಿ ಕೊಳ್ಳಿ ಜೋಪಾನ...
ಸಾವಿಗೀಡಾಗಿ ಹೋಗಿದೆ ಸಾವಿರಾರು ಪ್ರಾಣ....
ಸ್ಮಶಾನಕ್ಕೂ ಪ್ರವೇಶವಿಲ್ಲ ಕಾಣಲು ಮರಣ...
ಭಗವಂತ ಯಾಕಿಷ್ಟು ನಿಧಾನ...
ಬಲವಾಗಲಿ ನಮ್ಮ ತಂತ್ರಜ್ಞಾನ....
ಕಂಡುಹಿಡಿಯಲಿ ಉತ್ತಮ ಇಂಜೆಕ್ಷನ...
ಆಗಿ ಬಿಡಲಿ ಕೊರೋನದ ಮರಣ...
ಸಂತೋಷದಿಂದ ಇರಲಿ ನಾಡಿನ ಜನ....!!!
................ಧನ್ಯಶ್ರೀ 10ನೇ ತರಗತಿ
ಸರಕಾರಿ ಪ್ರೌಢಶಾಲೆ ಬಡಗ ಯೆಕ್ಕಾರು.
ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ