ಅವಳು - ಕವನ
Wednesday, June 30, 2021
Edit
ಸುಹಾನ್ ನಾಯಕ್ 7ನೇ ತರಗತಿ
ಬಿ.ಎಂ.ಅ.ಹಿ.ಪ್ರಾ. ಶಾಲೆ, ಮೂರೂರು,
ಹಿರ್ಗಾನ , ಕಾರ್ಕಳ ತಾಲೂಕು ಉಡುಪಿ ಜಿಲ್ಲೆ
ಅವಳು
ಸುಖದಲ್ಲಿ ಕಂಡೆ ನಾನವಳ ನಗೆಯ
ದುಃಖದಲ್ಲೂ ಕಂಡೆ ಅವಳ ಮುಗುಳ್ನಗೆಯ...!
ಕಲಿತೆನೊಂದು ಪಾಠವ ನಾನು ಅವಳಿಂದ
ಸುಖದಲ್ಲೂ ದುಃಖದಲ್ಲೂ ನಗುತಿರುವುದಂದ..!!
ಯಾರೆಷ್ಟೇ ಅಂದವಿದ್ದರೂ ನನಗವಳೇ ಸುಂದರ
ಅವಳಂದ ನೋಡಿ ನಾಚಿಕೊಂಡನು
ಹುಣ್ಣಿಮೆಯ ಚಂದಿರ...!!
ಅವಳೊಂದು ಹಾಡಿದರೆ ಕಲಿಯುಗವು ದ್ವಾಪರ
ಅವಳ ನಾಟ್ಯವು ಎನಗೆ ಕಲ್ಪಿಸುವುದೇ ಮನೋಹರ....!!
ಅವಳೇನೇ ಬೈದರೂ ನನಗದು ಹೊಗಳಿಕೆ
ಅವಳ ಸಂಗಡವಿರಲು ಭಾಸವು
ಹೋದಂತೆ ನಾಕಕೆ..!!
ಬೆಳಕು ಕೊಡುವವನು ಸೂರ್ಯ ಈ ಲೋಕಕೆ
ನನ್ನ ಜೀವನದ ದಿವ್ಯಜ್ಯೋತಿ ಆಕೆ...!!
ಪುಟ್ಟ ಗೆಲುವಿಗೂ ನನಗಿಂತ ಹಿಗ್ಗುವವಳು
ಸೋತು ನಾ ಎದೆಗುಂದಿದರು ಪ್ರೋತ್ಸಾಹಿಸುವವಳು...!!
ನನ್ನ ಜೀವನಕೆ ಮಾರ್ಗದರ್ಶನವವಳು
ಅವಳಾರೂ ಅಲ್ಲ ಅವಳೇ ನನ್ನ ಹೆತ್ತವಳು..!!!
........ಸುಹಾನ್ ನಾಯಕ್ 7ನೇ ತರಗತಿ
ಬಿ.ಎಂ.ಅ.ಹಿ.ಪ್ರಾ. ಶಾಲೆ, ಮೂರೂರು,
ಹಿರ್ಗಾನ , ಕಾರ್ಕಳ ತಾಲೂಕು ಉಡುಪಿ ಜಿಲ್ಲೆ