ಸೈನಿಕರು - ಕವನ
Saturday, June 12, 2021
Edit
ಅನುಲಕ್ಷ್ಮಿ 9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ-ಕೊಳ್ನಾಡು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಸೈನಿಕರು - ಕವನ
ನಮ್ಮೀ ಹೆಮ್ಮೆಯ ಸೈನಿಕರು
ದೇಶವ ಕಾಯುವ ಸೈನಿಕರು
ದೇಶವ ನಂಬಿ ಹೊರಟರು...!!!
ತನ್ನ ಕುಟುಂಬವನ್ನೇ ತೊರೆದು
ಹಗಲು-ರಾತ್ರಿ ದುಡಿದು...!!!
ಮಳೆಯಲಿ ನೆಂದು
ಬಿಸಿಲಲಿ ಬೆಂದು...!!!
ಹಿಮಬಂಡೆಗಳ ನಡುವಲ್ಲಿ ಕೊರೆದು
ಚಳಿಗಳನ್ನು ತಡೆದು...!!!
ಗಡಿಯ ಕಾಯಲು ಹೋಗುವರು
ನಿಖವಾದ ನಮ್ಮ ಆರಕ್ಷಕರು...!!!
ನಮ್ಮೀ ದೇಶದ ಸೈನಿಕರು
ದೇಶಕ್ಕಾಗಿ ಅದೆಷ್ಟೋ ಪ್ರಾಣವ ತೆತ್ತರು...!!!
ಶತ್ರುಗಳ ವಿರುದ್ಧ ಹೋರಾಡಿದರು
ನಮ್ಮಲ್ಲಿರುವ ಭಯವ ಓಡಿಸಿದರು...!!!
ರಕ್ತವ ಹರಿಸಿ ಇತಿಹಾಸದಿ ಅಮರರಾದರು
ನಮ್ಮೀ ಹೆಮ್ಮೆಯ ಸೈನಿಕರು...!!!
….................ಅನುಲಕ್ಷ್ಮಿ 9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ-ಕೊಳ್ನಾಡು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ