ಹಸಿರು ಯೋಧರು - 9
Tuesday, June 8, 2021
Edit
ಜೂನ್ 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರ ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ
ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಲಿಂಬೆ ಹಣ್ಣಿನ ಗಿಡ
ಪ್ರಯೋಜನ : ಲಿಂಬೆ ಹಣ್ಣು ಹಲವಾರು ಹೌಷದಿಯ ಗುಣಗಳನ್ನು ಹೊಂದಿರುವ ಹಣ್ಣುಗಳಲ್ಲಿ ಲಿಂಬೆಹಣ್ಣು ಒಂದು. ಈ ಭೂಮಿಯಲ್ಲಿರುವ ಪ್ರತಿ ಜೀವಿಗೂ ಈ ಲಿಂಬೆಹಣ್ಣಿನ ಅವಶ್ಯಕತೆ ಇದೆ. ಬೇಸಿಗೆಯಲ್ಲಿ ಈ ಲಿಂಬೆಹಣ್ಣಿನಿಂದ ಲಿಂಬುಜೂಸ್ ಮಾಡುತ್ತಾರೆ, ಅಡುಗೆಯಲ್ಲಿ ಬಳಸುತ್ತಾರೆ, ಪೂಜಾವಿದೀವಿಧಾನಗಳಲ್ಲಿ ಬಳಸುತ್ತಾರೆ, ಮಂತ್ರವಾದಿಗಳು ಮಾತಾಮಂತ್ರಗಳಲ್ಲಿ ಬಳಸುತ್ತಾರೆ, ಉಪ್ಪಿನಕಾಯಿ, ವಾಹನಗಳಿಗೆ, ಅಂಗಡಿಗಳಿಗೆ, ಮನೆಗಳಿಗೆ, ದೃಷ್ಟಿಯಾಗಬಾರದೆಂದು ಲಿಂಬೆಹಣ್ಣು ಕಟ್ಟುತ್ತಾರೆ. ಅದಲ್ಲದೆ ಇತೀಚಿಗೆ ಬಂದಿರುವ ಮಹಾಮಾರಿ ಕೊರೊನಕ್ಕೂ ಉಪಯುಕ್ತ ಎಂದು ಹೇಳಲಾಗುತ್ತದೆ. ಲಿಂಬುಮರದಿಂದ ಆಮ್ಲಜನಕ ಪರಿಸರಕ್ಕೆ ಸಿಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹಲವಾರು ಗುಣಗಳನ್ನು ಹೊಂದಿರುವ ಈ ಲಿಂಬು ಭೂಮಿಯಲ್ಲಿ ಅಮೃತ ಇದ್ದಂತೆ.
ಶ್ರೀ ಶಾರದಾ ಗಣಪತಿ ವಿದ್ಯಾ ಕೇಂದ್ರ ಕೈರಂಗಳ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ನೆಲನೆಲ್ಲಿ ಗಿಡ
ನಮ್ಮ ಮನೆಯ ಸುತ್ತಲೂ ಕಾಣಸಿಗುವ ಎಲ್ಲರಿಗೂ ಪರಿಚಿತವಾದ ಒಂದು ಔಷಧೀಯ
ಸಸ್ಯ ನೆಲನೆಲ್ಲಿಗಿಡ. ಇದರ ಎಲೆಗಳು, ಬೆಟ್ಟದ ನೆಲ್ಲಿಯ ಎಲೆಗಳನ್ನು ಹೋಲುತ್ತವೆ. ಮತ್ತು
ಎಲೆಗಳ ಅಡಿಭಾಗದಲ್ಲಿ ನೆಲ್ಲಿಯ ಕಾಯಿಯನ್ನು ಹೋಲುವ ಚಿಕ್ಕ ಚಿಕ್ಕ ಕಾಯಿಗಳು
ಇರುತ್ತವೆ. ಹಾಗಾಗಿ ಇದನ್ನು ನೆಲನೆಲ್ಲಿ ಎಂದು ಕರೆಯುತ್ತಾರೆ. ನಮ್ಮ ಪೂರ್ವಜರು ಅನೇಕ ರೋಗಗಳಿಗೆ ನೆಲನೆಲ್ಲಿಯನ್ನು ಔಷಧವಾಗಿ ಬಳಸುತ್ತಿದ್ದರಂತೆ. ಇದರ ಎಲೆ, ಕಾಂಡ, ಬೇರು ಎಲ್ಲವೂ ಔಷಧವಾಗಿ ಉಪಯೋಗವಾಗುತ್ತದೆ. ಇದು ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಮತ್ತು ದೇಹದ ರೋಗನಿರೋದಕ ಶಕ್ತಿಯನ್ನು ಹೆಚ್ಛಿಸುತ್ತದೆ.
ನಮ್ಮ ಪರಿಸರದಲ್ಲಿ ಕಾಣಸಿಗುವ ಇಂತಹ ನೂರಾರು
ಗಿಡಗಳನ್ನು ಗುರುತಿಸಿ, ನೆಟ್ಟು , ಬೆಳೆಸಿ, ಪೋಷಿಸಿ ಅವುಗಳ
ಉಪಯೋಗವನ್ನು ಪಡೆದುಕೊಂಡು ನಾವು ಆರೋಗ್ಯವಂತರಾಗೋಣ. ಪರಿಸರದ ಪಾವಿತ್ರತೆಯನ್ನು ಕಾಪಾಡೋಣ.
ಶ್ರೀ ಪಂಚದುರ್ಗ ಪ್ರೌಢಶಾಲೆ ಕಕ್ಯಬೀಡು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
ತರಗತಿ:೭ ನೇ ತರಗತಿ
ಶಾಲೆಯ ವಿಳಾಸ:ತುಂಬೆ ಸೆಂಟ್ರಲ್ ಸ್ಕೂಲ್, ತುಂಬೆ , ಬಂಟ್ವಾಳ ತಾಲೂಕು ೫೨೪೧೪೩
ಗಿಡದ ಹೆಸರು :ಲಕ್ಷ್ಮಣ ಫಲದ ಗಿಡ
ಈ ಗಿಡವು ಹಲವಾರು ಔಷಧೀಯ ಗುಣಗಳಿಂದ ಕೂಡಿದೆ. ಈ ಗಿಡದಲ್ಲಿ ಆಗುವ ಲಕ್ಷ್ಮಣ ಫಲವು ಹುಳಿ,ಸಿಹಿ ಮಿಶ್ರಿತ ವಾಗಿದ್ದು ತಿನ್ನಲು ಬಲು ರುಚಿ.ಇದರಲ್ಲಿ ವಿಟಮಿನ್ 'ಸಿ ' ಹೇರಳವಾಗಿದ್ದು ಕ್ಯಾಲ್ಸಿಯಂ, ಪ್ರಾಸ್ಪರಸ್,ಮೆಗ್ನೀಷಿಯಂ ಮುಂತಾದ ಅಂಶಗಳನ್ನು ಹೊಂದಿದೆ.ಕೊಲೆಸ್ಟರಾಲ್ ಪ್ರಮಾಣ ಇಳಿಕೆಗೆ ಇದು ಸಹಕಾರಿ ಹಾಗೂ ಇದರ ಎಲೆಗಳ ಕಷಾಯದಿಂದ ಬಾಯಿಹುಣ್ಣು ನಿವಾರಣೆ ಆಗುವುದು. ಮುಖ್ಯವಾಗಿ ಕ್ಯಾನ್ಸರ್ ರೋಗವು ಇದರ ಬಳಕೆಯಿಂದ ಮಾರುದೂರವಾಗುವುದು.ಇಂತಹ ಅತ್ಯುಪಕಾರಿ ಗಿಡಗಳನ್ನು ನೆಟ್ಟು ಬೆಳೆಸುವುದು, ಪ್ರಕೃತಿಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಶಾಲೆ:ಆನಂದಾಶ್ರಮ ಪ್ರೌಢಶಾಲೆ ಸೋಮೇಶ್ವರ,ಕೋಟೆಕಾರ್ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಾಳೆಗಿಡ
1ನೇ ತರಗತಿ
ಗುಣಶ್ರಿ ವಿದ್ಯಾಲಯ ಸಿದ್ದಕಟ್ಟೆ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಡಿಕೆ ಗಿಡ ಮತ್ತು ಪಪ್ಪಾಯಿ ಗಿಡ
ನನ್ನ ತಂದೆ ತಾಯಿಯ ಮಾರ್ಗದರ್ಶನದಲ್ಲಿ ಅವರ ಜೊತೆಗೂಡಿ ಪಪ್ಪಾಯಿ ಮತ್ತು ಅಡಿಕೆ ಗಿಡ ನೆಟ್ಟೆನು.
ತುಂಬಾ ಉಪಯೋಗ ಇರುವ ಈ ಗಿಡ ನೆಟ್ಟು ನಾನು ತುಂಬಾ ಖುಷಿ ಪಟ್ಟೆನು. ಪಪ್ಪಾಯಿ ಗಿಡ ತುಂಬಾ ಉಪಯೋಗ ಇರುವ ಸಸ್ಯ ಪರಿಸರಕ್ಕೆ ಉತ್ತಮ ಗಾಳಿ ನೀಡುತ್ತದೆ ಮತ್ತು ನಮಗೆ ಪ್ರಾಣಿ ಪಕ್ಷಿ ಗಳಿಗೆ ಆಹಾರವನ್ನು ನೀಡುತ್ತದೆ. ನಾವು ಇದನ್ನು ಸೇವಿಸುದರಿಂದ ವಿಟಮಿನ್ a ಮತ್ತು ನಾರಿನ ಅಂಶ ಜ್ಜಾಸ್ತಿ ಸಿಗುತ್ತದೆ ದೇಹಕ್ಕೆ ತಂಪು ಮತ್ತು ನಮ್ಮ ರಕ್ತದಲ್ಲಿ ಬಿಳಿ ರಕ್ತ ಕಣಗಳನ್ನು ಜಾಸ್ತಿ ಮಾಡುತ್ತದೆ. ಅದೇ ರೀತಿ ಅಡಿಕೆ ತುಂಬಾ ಆಮ್ಲಜನಕ ವನ್ನೂ ಉತ್ಪಾದಿಸುತ್ತದೆ ಮತ್ತು ಅಡಿಕೆ ನಮ್ಮ ಸಂಸೃತಿ ಯ ಪ್ರತೀಕ ಯಾವುದೇ ಶುಭ ಸಂದರ್ಭಕ್ಕೆ ಅಡಿಕೆ ಹೂ ಅಡಿಕೆ ತುಂಬಾ ಉಪಯೋಗ ಇದೆ.
ಶಾಲೆ: ಸರಕಾರಿ ಪ್ರೌಢಶಾಲೆ ನಾಲ್ಯಪದವು ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ನಿಂಬೆಗಿಡ
ಈ ಗಿಡ ನಿಂಬೆಹಣ್ಣನ್ನು ಮೊಟ್ಟ ಮೊದಲಿಗೆ ಅರಬ್ ದೇಶದಲ್ಲಿ ಕಾಣಲಾಗಿದೆ ಎಂದು ಹೇಳಲಾಗಿದೆ. ಭಾರತ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಅಸ್ಸಾಂನಲ್ಲಿ ಬೇಸಾಯ ಮಾಡಲಾಯಿತು. ನಿಂಬೆ ಪ್ರಕೃತಿ ನೀಡಿದಂತಹ ಅತ್ಯಂತ ಅದ್ಬುತ ವರ ಎಂದು ಹೇಳಬಹುದು. ಏಕೆಂದರೆ ಇದು ಅನೇಕ ರೋಗದ ಸಮಸ್ಯೆಗಳಿಗೆ ರಾಮಬಾಣವಾಗಿದೆ.
ಸರಕಾರಿ ಪ್ರೌಡಶಾಲೆ ಎಲಿಮಲೆ
ಸುಳ್ಯ ತಾಲೂಕು . ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸಾಂಬ್ರಾಣಿ
ಆವೆ ಮರಿಯಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪಜೀರು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ
ಹೋಲಿ ರೇಡಿಮೇರು ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪಪ್ಪಾಯಿ ಗಿಡ