ಹಸಿರು ಯೋಧರು - 7
Monday, June 7, 2021
Edit
ಜೂನ್ 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರ ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ಹೋಲಿ ಫ್ಯಾಮಿಲಿ ಸ್ಕೂಲ್, ಮೇರಾಮಜಲ್.
ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕೊತ್ತಂಬರಿ ಸೊಪ್ಪು
ಇದನ್ನು ಸಾಂಬಾರ್ ಮತ್ತು ಮುಂತಾದ ಹಲವು ಅಡುಗೆಗಳಿಗೆ ಬಳಸುತ್ತಾರೆ. ಅಡುಗೆ ರುಚಿ ಹೆಚ್ಚಿಸಲು ಬಳಸೊ ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೂ ಒಳ್ಳೆಯದು. ಅತ್ಯಂತ ಫೈಬರ್ ಅಂಶವಿರುವ ಈ ಸೊಪ್ಪಿನಲ್ಲಿ ಮ್ಯಾಂಗನೀಸ್, ಕಬ್ಬಿಣಾಂಶ ಮತ್ತು ಮ್ಯಾಗ್ನೇಷಿಯಂ ಅಧಿಕವಾಗಿದೆ.
ಶ್ರೀ ಗುರುದೇವ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಒಡಿಯೂರು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ
ತುಳಸಿ ಸಸ್ಯವು ಮೂಲತಃ ಇರಾನ್, ಭಾರತ ಹಾಗೂ ಏಷ್ಯಾದ ಉಷ್ಣವಲಯದ ಪ್ರದೇಶಗಳಲ್ಲಿ ೫,೦೦೦ಕ್ಕೂ ಹೆಚ್ಚಿನ ವರ್ಷಗಳಿಂದ ಬೆಳೆಯಲಾಗುತ್ತಿದೆ.
ತುಳಸಿ ಗಿಡವು ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ. ಈ ಗಿಡ ಆಮ್ಲಜನಕ ಉತ್ಪನ್ನ ಮಾಡುತ್ತದೆ ಹಾಗೂ ಕ್ರಿಮಿ—ಕೀಟಗಳನ್ನು ತಡೆಯುತ್ತದೆ. ತುಳಸಿಯಲ್ಲಿ ಪತ್ತೆಯಾಗುವ ಸಾರತೈಲಗಳು ಉಂಟುಮಾಡುವ ಆರೋಗ್ಯದ ಅನುಕೂಲಗಳ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ.
ನಿತ್ಯಾದರ್ ಆಂಗ್ಲ ಮಾಧ್ಯಮ ಶಾಲೆ . ಪೆರ್ಮನ್ನೂರು
ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಗೇರು ಮರ
ಸಸ್ಯಶಾಸ್ತ್ರೀಯ ಹೆಸರು: ಅನಕಾರ್‌ಡಿಯಂ ಓಕ್ಸಿಡೆಂಟೇಲ್. ( Anacardium Occidentale )
ಹೆಚ್ಚಾಗಿ ಬೆಳೆಯುವ ಪ್ರದೇಶಗಳು: ಬ್ರೆಜಿಲ್, ಭಾರತ ಮತ್ತು ಪೂರ್ವ ಆಫ್ರಿಕ . ಗೇರು ಮರದಲ್ಲಿ ಹಣ್ಣಿನ ಜೊತೆಗೆ ಹೊರಭಾಗದಲ್ಲಿ ಇರುವ ಮೂತ್ರಪಿಂಡದಂತಹ ರಚನೆಯುಳ್ಳ ಬೀಜದ ಗಟ್ಟಿ ಭಾಗದ ಒಳಗಡೆ ಇರುವ ಬಿಳಿಬಣ್ಣದ ಗೋಡಂಬಿ ಭಾರತೀಯ ಅಡುಗೆಗಳಲ್ಲಿ,ತಿಂಡಿ ತಿನಿಸುಗಳಲ್ಲಿ ಬಳಸಲ್ಪಡುವ ಅಪಾರ ಪೌಷ್ಟಿಕಾಂಶ ತುಂಬಿದ ಆಹಾರ ಪದಾರ್ಥ. ಗೋಡಂಬಿ ಬೀಜದ ಉಪಯೋಗಗಳು :
ಕಡಿಮೆ ಸಕ್ಕರೆ ಅಂಶ ಹೊಂದಿದ್ದು ಮಧುಮೇಹ ತಡೆಗಟ್ಟಲು ಸಹಕಾರಿ. ಉತ್ತಮ ನಾರಿನಂಶ ಹೊಂದಿದ್ದು, ಹೃದಯದ ಆರೋಗ್ಯಕ್ಕೆ ಬೇಕಾದ ಉತ್ತಮ ಕೊಬ್ಬು ಮತ್ತು ಪ್ರೊಟೀನ್‌ನಿಂದ ಸಮೃದ್ಧವಾಗಿದೆ. ಹೃದಯಾಘಾತದ ಸಂಭಾವ್ಯತೆಯನ್ನು ಕಡಿಮೆ ಮಾಡುತ್ತದೆ. ಶಕ್ತಿಯ ಉತ್ಪಾದನೆ,ಮೆದುಳು ಮತ್ತು ಮೂಳೆಯ ಆರೋಗ್ಯ, ರೋಗ ನಿರೋಧಕ ಶಕ್ತಿಯ ವೃದ್ಧಿಗೆ ಪೂರಕವಾದ ತಾಮ್ರ, ಮೆಗ್ನೀಷಿಯಂ, ಮ್ಯಾಂಗನೀಸ್ ಝಿಂಕ್ ಮತ್ತು ಫೆಲೆಟ್ಸ್ ಪೋಷಕಾಂಶಗಳು ಇದರಲ್ಲಿ ಹೇರಳವಾಗಿವೆ.
ಪಂಬತ್ತ ಮಜಲ್ ಹೌಸ್. ನೆಹರೂನಗರ
ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತೆಂಗಿನಗಿಡ
ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ನೆಟ್ಲ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕಹಿ ಬೇವಿನ ಗಿಡ.
ಈ ಗಿಡದ ಎಲೆಯನ್ನು ಹೊಸ ವರ್ಷವಾದ ಯುಗಾದಿಯಂದು ಬೇವು-ಬೆಲ್ಲ ವಾಗಿ ಸೇವಿಸುತ್ತೇವೆ. ಈ ಗಿಡವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.
ಎಸ್.ವಿ. ಎಸ್. ಟೆಂಪಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ
ಸೈಂಟ್ ರೀಟಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿಟ್ಲ ಬಂಟ್ವಾಳ ತಾಲೂಕು
ಗಿಡದ ಹೆಸರು : ಕರಿಮೆಣಸು
ಕರಿಮೆಣಸು ಒಂದು ಸಾಂಬಾರ ಬೆಳೆಯಾಗಿದ್ದು, ಆಯುರ್ವೇದ
ಔಷಧಗಳಲ್ಲೂ ಉಪಯೋಗಿಸುತ್ತಾರೆ. ಇದನ್ನು ಆಂಗ್ಲ ಭಾಷೆಯಲ್ಲಿ ಪೆಪ್ಪರ್ ಮತ್ತು ಸಂಸ್ಕ್ರತ ಭಾಷೆಯಲ್ಲಿ ಪಿಪ್ಪಲಿ ಎಂದು ಕರೆಯಲಾಗುತ್ತದೆ. ಕರಿಚಿನ್ನ ಎಂದು ಕರೆಯಲಾಗುವ ಕರಿಮೆಣಸಿನ ಬಳ್ಳಿಯ ಹಣ್ಣನ್ನು ಒಣಗಿಸಿ ಕರಿಮೆಣಸಿನ ಕಾಳುಗಳನ್ನು ಪಡೆಯುವರು.
ಜ್ಞಾನ ದೀಪ ಶಿಕ್ಷಣ ಸಂಸ್ಥೆಗಳು
ಎಲಿಮಲೆ ಸುಳ್ಯ ದ.ಕ
ಗಿಡದ ಹೆಸರು : ತುಳಸಿ ಗಿಡ
ದ. ಕ ಜಿ. ಪಂ. ಹಿ. ಪ್ರಾ ಶಾಲೆ. ನೇತ್ರಕೆರೆ ಕಳ್ಳಿಗೆ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ನೆಲನೆಲ್ಲಿ.
ಕಿರುನೆಲ್ಲಿಯೆಂದು ಕರೆಯಲಾಗುತ್ತದೆ. ಇದು ಓಷಧಿಯ ಗುಣಗಳ ಭಂಡಾರವಾಗಿದೆ. ನೆಲನೆಲ್ಲಿ ಹೆಸರೇ ಸೂಚಿಸುವಂತೆ ನೆಲದಿಂದ ಒಂದು ಅಡಿ ಎತ್ತರಕ್ಕೆ ಬೆಳೆಯುವ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು phyllanthus niuri ಆಗಿದೆ. ಇದು ಮಳೆಗಾಲ ದಲ್ಲಿ ಕಂಡುಬರುವ ಸಸ್ಯ. ನೆಲನೆಲ್ಲಿಯೂ ಭೇದಿಯನ್ನು ನಿಯಂತ್ರಿಸುತ್ತದೆ. ಭೇದಿ ಉಂಟಾದಲ್ಲಿ ನೆಲನೆಲ್ಲಿಯ ಎಳೆಯ ಕಾಂಡವನ್ನು ಜಜ್ಜಿ ರಸ ತೆಗೆದು, ದಿನಕ್ಕೆ 3 ಸೇವಿಸುವುದರಿಂದ ಭೇದಿ ನಿಯಂತ್ರಣಕ್ಕೆ ಬರುತ್ತದೆ. ನೆಲನೆಲ್ಲಿಯ ಜ್ಯೂಸ್ ಮಾಡಿ ಕುಡಿಯುವುದರಿಂದ ಕಿಡ್ನಿಯ ಕಲ್ಲು ನಿಧಾನ ವಾಗಿ ಕರಗುತ್ತಾ ಬರುತ್ತದೆ. ಇದಕ್ಕೆ ನೆಲನೆಲ್ಲಿಯನ್ನು ಸ್ಟೋನ್ ಬ್ರೇಕರ್ ಎಂದು ಕೂಡ ಕರೆಯುತ್ತಾರೆ.
ಗಿಡದ ಹೆಸರು : ದೊಡ್ಡಪತ್ರೆ